Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಹರಾಜಿನಲ್ಲಿ ಕಿಮ್‌ ಗ್ರಾತ್‌ ಮೇಲೆ RCB ಸೇರಿದಂತೆ ಮೂರು ತಂಡಗಳ ಚಿತ್ತ

ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಮೆಗಾ ಆಕ್ಷನ್‌ಗೆ ದಿನಗಣನೆ ಆರಂಭವಾಗಿದೆ. ಈ ಹರಾಜಿಗೆ ಈಗಾಗಲೇ 5 ಫ್ರಾಂಚೈಸಿಗಳು ಈ ಹರಾಜಿಗೆ ತಯಾರಿ ನಡೆಸಿದ್ದಾರೆ. ಈ ವೇಳೆ ಸ್ಟಾರ್ ಆಟಗಾರ್ತಿಯರನ್ನು ಬಾಜಿ ಕಟ್ಟಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ. ಯಾವ ಆಟಗಾರ್ತಿಯರನ್ನು ಕೊಂಡರೆ ಏನು ಲಾಭ? ಎಂಬ ಲೆಕ್ಕಾಚಾರ ಆರಂಭಿಸಿದ್ದಾರೆ. ಈ ವೇಳೆ ಆಸ್ಟ್ರೇಲಿಯಾದ ಆ ಒಬ್ಬ ಆಟಗಾರ್ತಿಯ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.

ಈ ಸ್ಟಾರ್ ಪ್ಲೇಯರ್‌ ಈಗಾಗಲೇ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ. ಆಸೀಸ್‌ ತಂಡದ ಆಲ್‌ರೌಂಡರ್‌ ಕಿಮ್ ಗಾರ್ತ್ (Kim Garth) ಅವರಿಗೆ ಫ್ರಾಂಚೈಸಿಗಳು ಹಣದ ಹೊಳೆಯನ್ನು ಹೊರೆಸುವ ನಿರೀಕ್ಷೆ ಇದೆ. ಈ ಆಟಗಾರ್ತಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಸೇರಿದಂತೆ ಮೂರು ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಕಿಮ್‌ ಗ್ರಾತ್‌ ಈಗಾಗಲೇ ಈ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ 15 ಪಂದ್ಯಗಳನ್ನು ಆಡಿದ್ದು, 19 ವಿಕೆಟ್‌ ಕಬಳಿಸಿದ್ದಾರೆ.

WPL 2026 Auction RCB Gujarat Giants UP Warriorz Eyeing All-Rounder Kim Garth

ಆರ್‌ಸಿಬಿ (RCB) ತಂಡ ರಿಲೀಸ್‌ ಮಾಡಿದ ಆಟಗಾರ್ತಿಯರ ಪಟ್ಟಿಯಲ್ಲಿ ಕಿಮ್‌ ಗ್ರಾತ್‌ಗೂ ಸ್ಥಾನ. ಇವರಿಗೆ ಆರ್‌ಸಿಬಿ ಮೆಗಾ ಹರಾಜಿನಲ್ಲಿ ಹಣವನ್ನು ಹೂಡಲು ಸಜ್ಜಾಗಿದ್ದಾರೆ. ಈ ಹರಾಜಿಗೆ ಆರ್‌ಸಿಬಿ 6.15 ಕೋಟಿ ರೂ.ಗಳೊಂದಿಗೆ ಅಂಗಳ ಪ್ರವೇಶಿಸಲಿದ್ದಾರೆ. ನವೆಂಬರ್‌ 27 ರಂದು ನವದೆಹಲಿಯಲ್ಲಿ ನಡೆಯಲಿರುವ ಹರಾಜಿನಲ್ಲಿ ಆರ್‌ಸಿಬಿ ಆಸೀಸ್‌ ಪ್ಲೇಯರ್‌ಗೆ ಮಣೆ ಹಾಕುವ ಸಾಧ್ಯತೆ ಇದೆ. ಇವರಿಗೆ ಆರ್‌ಸಿಬಿ ಹರಾಜಿನಲ್ಲಿ ಆರ್‌ಟಿಎಂ ಬಳಸುವ ಸಾಧ್ಯತೆ ಇದೆ.

ಆರ್‌ಸಿಬಿ ರೇಣುಕಾ ಸಿಂಗ್ ಅವರಿಗೆ ಗಾಳ ಹಾಕಿಕೊಳ್ಳುವ ಸಾಧ್ಯತೆ ಇದೆ. ಇನ್ನು ಎಲ್ಲಿಸ್‌ ಪೇರಿ ಅವರಿಗೆ ಸಾಥ್‌ ನೀಡಲು ಆರ್‌ಸಿಬಿ ಕಿಮ್‌ ಗ್ರಾತ್‌ ಅವರಿಗೆ ಟಾರ್ಗೆಟ್‌ ಮಾಡುವ ನಿರೀಕ್ಷಿ ಇದೆ.

ಗುಜರಾತ್‌ ಜೈಂಟ್ಸ್‌

ಹರಾಜಿನಲ್ಲಿ ಗುಜರಾತ್‌ ಜೈಂಟ್ಸ್‌ ಕಿಮ್‌ ಗ್ರಾತ್‌ ಅವರಿಗೆ ಗಾಳ ಹಾಕಬಹುದು. ಗುಜರಾತ್‌ ಬಳಿ 9 ಕೋಟಿ ರೂ. ಇದ್ದು, ಸ್ಟಾರ್ ಆಟಗಾರ್ತಿಯರಿಗೆ ಹಣದ ಹೊಳೆಯನ್ನು ಹರಿಸಬಹುದು. ಇವರನ್ನು ಕೊಳ್ಳುವುದರಿಂದ ಗುಜರಾತ್ ತಂಡದ ಬೌಲಿಂಗ್ ವಿಭಾಗಕ್ಕೆ ಇನ್ನಷ್ಟು ಬಲ ಬಂದಂತೆ ಆಗುತ್ತದೆ. ಇವರು ಬೆತ್ ಮೂನಿ ಮತ್ತು ಆಶ್ಲೀ ಗಾರ್ಡ್ನರ್ ಅವರಿಗೆ ಉತ್ತಮ ಸಾಥ್‌ ನೀಡುವುದರಿಂದ ಇವರಿಗೆ ಜೈಂಟ್ಸ್ ಹಣವನ್ನು ಹೂಡಬಹುದಾಗಿದೆ.

ಯುಪಿ ವಾರಿಯರ್ಜ್‌

ಚೊಚ್ಚಲ ಪ್ರಶಸ್ತಿ ಗೆಲುವಿನ ಕನಸಿಲ್ಲಿರುವ ಯುಪಿ ವಾರಿಯರ್ಜ್‌ ಸಹ ಭಾರೀ ಮೊತ್ತದೊಂದಿಗೆ ಹರಾಜು ಅಂಗಳವನ್ನು ಪ್ರವೇಶಿಸಲಿದೆ. ಈ ತಂಡಕ್ಕೂ ಸ್ಟಾರ್‌ ಆಲ್‌ರೌಂಡರ್‌ ಅವಶ್ಯಕತೆ ಇದೆ. ಯುಪಿ ಒಬ್ಬ ಬ್ಯಾಲೆನ್ಸ್‌ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದೆ. ಹರಾಜಿನಲ್ಲಿ ಯುಪಿ 14.50 ಕೋಟಿಯೊಂದಿಗೆ ಅಂಗಳ ಪ್ರವೇಶಿಸಲಿದೆ. ಇವರನ್ನು ಸೇರಿಸಿಕೊಳ್ಳುವುದರಿಂದ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಕ್ಕೆ ಬಲ ಬಂದಂತೆ ಆಗುತ್ತದೆ.

Story first published: Sunday, November 23, 2025, 12:24 [IST]
Other articles published on Nov 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+