For Quick Alerts
ALLOW NOTIFICATIONS  
For Daily Alerts
 

WPL 2026: ಕೈ ಬಿಟ್ಟ ಮಾಲೀಕರಿಗೆ ಸಂಕಷ್ಟ: ಹರಾಜಿನಲ್ಲಿ ಖುಲಾಯಿಸಲಿದೆ ಅದೃಷ್ಟ

ಮಹಿಳಾ ಪ್ರೀಮಿಯರ್‌ ಲೀಗ್‌ ಇನ್ನೇನು ಕೆಲವೇ ತಿಂಗಳುಗಳಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆದಿವೆ. ಈ ಟೂರ್ನಿಯಲ್ಲಿ ಭಾಗವಹಿಸುವ 5 ತಂಡಗಳು ಈಗಾಗಲೇ ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ರಿಲೀಸ್ ಮಾಡಿವೆ. ಆದರೆ ತಂಡಗಳು ಚಾಂಪಿಯನ್ ಆಟಗರ್ತಿಯರ ಕಡೆಗಣನೆ ಮಾಡಿದ್ದು ನಿಜಕ್ಕೂ ಬೇಸರ ತರಿಸಿದೆ. ಭಾರತ ಮಹಿಳಾ ವಿಶ್ವಕಪ್‌ನಲ್ಲಿ ಮಿಂಚಿದ ಆಟಗಾರ್ತಿಯರನ್ನು ಸಹ ತಂಡ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ಸ್ಟಾರ್ ಆಟಗಾರ್ತಿಯರು ಈಗ ಹರಾಜಿನ ಅಂಗಳಕ್ಕೆ ಎಂಟ್ರಿ ನೀಡಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನ ರಿಟೇನ್ಷನ್‌ ಲೀಸ್ಟ್ ನೋಡಿದಾಗ ಅಭಿಮಾನಿಗಳಿಗೆ ಬೇಸರ ಆಗಿದ್ದಂತೂ ಸತ್ಯ. ಹರಾಜಿನಲ್ಲಿ ಉಳಿಸಿಕೊಳ್ಳಬೇಕಾದ ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಈ ಸ್ಟಾರ್ ಆಟಗಾರ್ತಿಯರು ಈಗಾಗಲೇ ಭಾರತದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರೂ, ಮಾಲೀಕರ ಚಿತ್ತ ಕದಿಯುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೆ ಆ ಪ್ಲೇಯರ್ಸ್ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

WPL 2026 Auction Star Players Released by Franchises Despite Impressive World Cup Performances

ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಎಲ್ಲರ ಚಿತ್ತ ಕದ್ದಿ ಆ ಒಂದು ಪಟ್ಟಿ ಎಂದರೆ, ಯುಪಿ ವಾರಿಯರ್ಸ್‌ ತಂಡ ದೀಪ್ತಿ ಶರ್ಮಾ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರ್ತಿ ದೀಪ್ತಿ ಶರ್ಮಾ ಅವರನ್ನು ತಂಡ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವರು ಒಟ್ಟಾರೆ 25 ಡಬ್ಲ್ಯೂಪಿಎಲ್ ಪಂದ್ಯಗಳಲ್ಲಿ ಒಟ್ಟು 507 ರನ್ ಗಳಿಸಿದ್ದು, 27 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಇವರನ್ನು ಬಿಟ್ಟು ತಂಡ ಈಗ ಪೇಚೆಗೆ ಸಿಲುಕಿದಂತೆ ಕಾಣುತ್ತಿದೆ. ಅಲ್ಲದೆ ಕ್ರಾಂತಿ ಗೌರ್, ಉಮಾ ಛೆಟ್ರಿ ಅವರನ್ನು ಉಳಿಸಿಕೊಳ್ಳುವಲ್ಲಿ ತಂಡ ವಿಫಲವಾಗಿದೆ.

ಆರ್‌ಸಿಬಿ ಎಡವಟ್ಟು

ಆರ್‌ಸಿಬಿ ಸಹ ಇದೇ ತಪ್ಪನ್ನು ಮಾಡಿದೆ. ಆರ್‌ಸಿಬಿ ತಂಡದ ವೇಗದ ಬೌಲರ್‌ ರೇಣುಕಾ ಸಿಂಗ್ ಠಾಕೂರ್ ಅವರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವರು ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಆದರೂ ಸಹ ಆರ್‌ಸಿಬಿ ತಂಡ ಇವರನ್ನು ಉಳಿಸಿಕೊಳ್ಳಲಿಲ್ಲ. ಇವರು ಡಬ್ಲ್ಯೂಪಿಎಲ್‌ನಲ್ಲಿ ಆಡಿದ 28 ಪಂದ್ಯಗಳಲ್ಲಿ 13 ವಿಕೆಟ್‌ ಕಬಳಿಸಿದ್ದಾರೆ. ಅಲ್ಲದೆ ಸ್ನೇಹಾ ರಾಣರನ್ನು ಸಹ ಆರ್‌ಸಿಬಿ ರಿಲೀಸ್ ಮಾಡಿದೆ.

ಈ ತಂಡಗಳು ಮಾಡಿದ ತಪ್ಪನ್ನೇ ಗುಜರಾತ್ ತಂಡ ಸಹ ಮಾಡಿದೆ. ತಂಡದ ಭರವಸೆಯ ಆಟಗಾರ್ತಿ ಹರ್ಲೀನ್ ಡಿಯೋಲ್ ರನ್ನು ಕೈ ಬಿಟ್ಟಿದೆ. ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ತನ್ನ ಬೌಲಿಂಗ್‌ನಿಂದ ಅಭಿಮಾನಿಗಳ ಮನ ಗೆದ್ದಿದ್ದ ಸ್ಪಿನ್ ಬೌಲರ್‌ ಶ್ರೀ ಚರಣಿ ಅವರನ್ನು ಡೆಲ್ಲಿ ತಂಡ ಉಳಿಸಿಕೊಂಡಿಲ್ಲ. ಇವರೊಂದಿಗೆ ಇನ್ನೋರ್ವ ಆಲ್‌ರೌಂಡರ್ ರಾಧಾ ಯಾದವ್, ಮೆಗ್‌ ಲ್ಯಾನಿಂಗ್ ಅವರನ್ನು ಸಹ ಡೆಲ್ಲಿ ಕೈ ಬಿಟ್ಟಿದೆ.

ಈ ಆಟಗಾರ್ತಿಯರು ಐಪಿಎಲ್‌ ಹರಾಜು ಅಂಗಳಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಆಟಗಾರ್ತಿಯರ ಮೇಲೆ ಬಾಜಿ ಕಟ್ಟಲು ಫ್ರಾಂಚೈಸಿಗಳು ಸಹ ಕಾತುರದಿಂದ ರೆಡಿ ಆಗಿದ್ದಾರೆ.

Story first published: Saturday, November 8, 2025, 10:11 [IST]
Other articles published on Nov 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+