For Quick Alerts
ALLOW NOTIFICATIONS  
For Daily Alerts
 

ದುಬಾರಿ ಬೆಲೆಗೆ ಹರಾಜಾಗಬಹುದಾದ ಟಾಪ್‌ 5 ಭಾರತೀಯ ಪ್ಲೇಯರ್ಸ್‌

ಮಹಿಳಾ ಪ್ರೀಮಿಯರ್‌ ಲೀಗ್‌ ನಾಲ್ಕನೇ ಆವೃತ್ತಿಗೆ ಇಂದು ನವದೆಹಲಿಯಲ್ಲಿ ಹರಾಜು ನಡೆಯಲಿದೆ. ಈ ವೇಳೆ ಮಾಲೀಕರು ಸ್ಟಾರ್ ಆಟಗಾರ್ತಿಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ. ಇವರಿಗೆ ಹಣದ ಹೊಳೆಯನ್ನು ಮಾಲೀಕರು ಹರಿಸಲಿದ್ದಾರೆ. ಈ ಹರಾಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಆಟಗಾರ್ತಿಯರಿಗೆ ಹೆಚ್ಚಿನ ಮೌಲ್ಯ ಸಿಗಲಿದೆ. ಅಂತೆಯೇ ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರಿಗೂ ಮಾಲೀಕರು ಹಣ ಹೂಡಲಿದ್ದಾರೆ.

ಈ ಬಾರಿಯ ಹರಾಜಿನಲ್ಲಿ ಒಟ್ಟು 277 ಆಟಗಾರ್ತಿಯರು ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಈ ವೇಳೆ 5 ಮಾಲೀಕರು 73 ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಿದ್ದಾರೆ. ಇದೇ ವೇಳೆ ಇದೇ ಮೊದಲ ಬಾರಿಗೆ ಡಬ್ಲ್ಯೂಪಿಎಲ್‌ನಲ್ಲಿ ಮಾಲೀಕರು ಆರ್‌ಟಿಎಂ ಲಾಭ ಪಡೆಯಲಿದ್ದಾರೆ. ಈ ಹರಾಜಿನಲ್ಲಿ ದುಬಾರಿ ಬೆಲೆಗೆ ಬಿಕರಿಯಾಗಬಹುದಾದ ಭಾರತೀಯ ಆಟಗಾರ್ತಿಯರ ಪಟ್ಟಿ ಇಲ್ಲಿದೆ. ಈ ಆಟಗಾರ್ತಿಯರು ಈಗಾಗಲೇ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಕ್ರಿಕೆಟ್‌ ವಲಯದಲ್ಲಿ ಸದ್ದು ಮಾಡಿದ್ದಾರೆ.

WPL 2026 Auction Top Indian Players to Watch - Vaishnavi Divya Prema Sushmita Joshita

ವೈಷ್ಣವಿ ಶರ್ಮಾ

ಮಧ್ಯಪ್ರದೇಶದ ವೈಷ್ಣವಿ ಶರ್ಮಾ ಅವರನ್ನು ಕೊಳ್ಳಲು ಫ್ರಾಂಚೈಸಿಗಳು ಸಹ ಹಣದ ಹೊಳೆಯನ್ನು ಹರಿಸಲಿವೆ. 20 ವರ್ಷದ ಸ್ಪಿನ್ ಬೌಲರ್‌ ಭಾರತ ತಂಡದ ಪರ ಹಲವು ಅಂಡರ್‌ 19 ಪಂದ್ಯಗಳಲ್ಲಿ ಮಿಂಚಿದ್ದಾರೆ. ಇವರು ಅಂಡರ್‌ 19 ವಿಶ್ವಕಪ್‌ನಲ್ಲಿ ಆಡಿದ 6 ಪಂದ್ಯಗಳಲ್ಲಿ 17 ವಿಕೆಟ್‌ ಪಡೆದಿದ್ದಾರೆ. ಇವರು ಹಿರಿಯರ ಪಂದ್ಯಗಳಲ್ಲೂ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದಿದ್ದಾರೆ.

ದಿವ್ಯಾ ಯಾದವ್

ಹರಿಯಾಣ ಪರ ಆಡಿ ಸೈ ಎನಿಸಿಕೊಂಡಿರುವ ಯುವ ಆಟಗಾರ್ತಿ ದಿವ್ಯಾ ಯಾದವ್ ಈಗಾಗಲೇ ಕ್ರಿಕೆಟ್‌ ವಲಯದಲ್ಲಿ ಸದ್ದು ಮಾಡಿರುವ ಆಟಗಾರ್ತಿ. ಮಹಿಳಾ ಟಿ20 ಟ್ರೋಫಿಯಲ್ಲಿ 298 ರನ್‌ ಸಿಡಿಸಿದ್ದಾರೆ. ಇವರು ತಮ್ಮ ಬಿರುಸಿನ ಹೊಡೆತದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇವರು ತ್ರಿಪುರಾ ವಿರುದ್ಧದ ಅಂಡರ್‌ 15 ಪಂದ್ಯದಲ್ಲಿ 125 ಎಸೆತಗಳಲ್ಲಿ 213 ರನ್‌ ಸಿಡಿಸಿದ್ದರು.

ಪ್ರೇಮಾ ರಾವತ್

ಪ್ರೇಮಾ ರಾವತ್ ಅವರನ್ನು ಕೊಳ್ಳಲು ಮಾಲೀಕರು ಸಹ ಹಣದ ಹೊಳೆಯನ್ನು ಹರಿಸಲಿದ್ದಾರೆ. ಇವರು ಉತ್ತರಾಖಂಡ ಪರ ಆಡಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ್ದರು. ಅಲ್ಲದೆ ಇವರು ಭಾರತ "ಎ" ತಂಡದ ಪರ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್‌ ಕಬಳಿಸಿದ್ದರು. ಇವರು ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್‌ನಲ್ಲೂ ಇವರು ಸ್ಥಿರ ಪ್ರದರ್ಶನ ನೀಡುವ ಕ್ಷಮತೆ ಹೊಂದಿದ್ದಾರೆ.

ಸುಶ್ಮಿತಾ ಗಂಗೂಲಿ

ಬಂಗಾಳ ತಂಡದ ಪರ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಮಹಿಳಾ ಆಟಗಾರ್ತಿಯರ ಪಟ್ಟಿಯಲ್ಲಿ 22 ವರ್ಷದ ಸುಶ್ಮಿತಾ ಗಂಗೂಲಿ ಅವರಿಗೆ ಮೊದಲ ಸ್ಥಾನ. ಇವರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಕ್ಷಮತೆಯನ್ನು ಹೊಂದಿರುವುದರಿಂದ ಇವರನ್ನು ಕೊಳ್ಳಲು ಮಾಲೀಕರು ಹಣದ ಹೊಳೆಯನ್ನು ಹರಿಸಬಹುದು.

ಜೋಶಿತಾ ವಿಜೆ

ವೈನಾಡಿನ 19 ವರ್ಷದ ಪ್ರತಿಭಾನ್ವಿತ ಆಟಗಾರ್ತಿ ಜೋಶಿತಾ ವಿಜೆ ಅವರು ಈಗಾಗಲೇ ಅಂಡರ್‌ 19 ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಪ್ಲೇಯರ್. ಇವರು 2025 ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಪರ ಆಡಿದ್ದರು. ಆದರೆ ಇವರನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಭಾರತ ಅಂಡರ್ 19 ವಿಶ್ವಕಪ್‌ ಗೆದ್ದಾಗ ಜೋಶಿತಾ ವಿಜೆ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರು ತಮ್ಮ ವೇಗದ ದಾಳಿಯಿಂದಲೇ ಮನೆ ಮಾತಾಗಿದ್ದಾರೆ.

Story first published: Thursday, November 27, 2025, 10:15 [IST]
Other articles published on Nov 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+