WPL 2026: ಹರ್ಮನ್ vs ಜೆಮಿಮಾ: ಮೊದಲ ಗೆಲುವಿನ ಹುಡುಕಾಟದಲ್ಲಿ ಮುಂಬೈ
ನವಿ ಮುಂಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆಡಿರುವ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋತು ನಿರಾಸೆ ಅನುಭವಿಸಿದೆ. ಶನಿವಾರ ಲೀಗ್ ಹಂತದ ಎರಡನೇ ಪಂದ್ಯವನ್ನು ಆಡಲು ಕಣಕ್ಕೆ ಇಳಿಯಲಿದೆ. ಮಹಿಳಾ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಕಾದಾಟ ನಡೆಸಲಿವೆ.
ಕಳೆದ ಬಾರಿಯ ಫೈನಲಿಸ್ಟ್ ತಂಡಗಳು ಶನಿವಾರ ಅಖಾಡ ಪ್ರವೇಶಿಸಲಿದ್ದು ಎಲ್ಲರ ಚಿತ್ತ ಕದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಜೆಮಿಮಾ ರೋಡ್ರಿಗಸ್ ಮುನ್ನಡೆಸಲಿದ್ದಾರೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಶುಭಾರಂಭ ಮಾಡುವ ಕನಸನ್ನು ಎರಡೂ ತಂಡಗಳು ಮಾಡುತ್ತಿವೆ.

ಮುಂಬೈ ತಂಡದ ಟಾಪ್ ಬ್ಯಾಟರ್‌ಗಳು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಅಮೆಲಿಯಾ ಕೆರ್, ಜಿ ಕಮಲಿನಿ, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಿಕೋಲಾ ಕ್ಯಾರಿ, ಸಜನಾ, ಬಿಗ್ ಇನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದ್ದಾರೆ. ಆಲ್‌ರೌಂಡರ್ ರೂಪದಲ್ಲಿ ಸ್ಥಾನ ಪಡೆಯುವ ಅಮನ್‌ಜೋತ್ ಕೌರ್ ತಮ್ಮ ಕ್ಷಮತೆಗೆ ತಕ್ಕ ಆಟ ಆಡಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್ ಎದುರಾಳಿ ಬ್ಯಾಟರ್‌ಗಳಿಗೆ ಕಾಡಬಲ್ಲರು. ಉಳಿದ ಬೌಲರ್‌ಗಳು ಆರ್‌ಸಿಬಿ ವಿರುದ್ಧ ನೀಡಿದ ಪ್ರದರ್ಶನವನ್ನು ಸುಧಾರಿಸಿಕೊಂಡು ಆಟ ಆಡಬೇಕಿದೆ. ಅಂದಾಗ ಗೆಲುವಿನ ಬಾಗಿಲು ಓಪನ್ ಆಗುತ್ತದೆ.
ಮುಂಬೈ ಇಂಡಿಯನ್ಸ್: ಅಮೆಲಿಯಾ ಕೆರ್, ಜಿ ಕಮಲಿನಿ, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್, ನಿಕೋಲಾ ಕ್ಯಾರಿ, ಎಸ್ ಸಜನಾ, ಅಮನ್ಜೋತ್ ಕೌರ್, ಪೂನಂ ಖೇಮ್ನಾರ್, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್

ಡೆಲ್ಲಿ ತಂಡದಲ್ಲಿ ಹೊಡಿ ಬಡಿ ಆಟಗಾರ್ತಿಯರು ಇದ್ದಾರೆ. ಆರಂಭಿಕರಾಗಿ ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ ಕಣಕ್ಕೆ ಇಳಿಯಲಿದ್ದು, ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ಆಡಬೇಕಿದೆ. ನಾಯಕಿ ಜೆಮಿಮಾ ರೋಡ್ರಿಗಸ್, ನಿಕಿ ಪ್ರಸಾದ್ ಸೇರಿದಂತೆ ಉಳಿದ ಆಟಗಾರ್ತಿಯರು ಜವಾಬ್ದಾರಿಯನ್ನು ಅರಿತು ಆಡಬೇಕಿದೆ. ಡೆಲ್ಲಿ ತಂಡದ ಬೌಲಿಂಗ್ ವಿಭಾಗ ಬ್ಯಾಲೆನ್ಸ್ ಆಗಿದೆ. ಸ್ನೇಹ ರಾಣಾ, ಶ್ರೀ ಚರಣಿ ತಮ್ಮ ಶಿಸ್ತು ಬದ್ಧ ದಾಳಿಯಿಂದ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್: ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್, ಜೆಮಿಮಾ ರೋಡ್ರಿಗಸ್, ಮರಿಜಾನ್ ಕಪ್, ನಿಕಿ ಪ್ರಸಾದ್, ಚಿನೆಲ್ ಹೆನ್ರಿ, ಅಲಾನಾ ಕಿಂಗ್, ತಾನಿಯಾ ಭಾಟಿಯಾ, ಮಿನ್ನು ಮಣಿ, ಸ್ನೇಹ ರಾಣಾ, ಎನ್ ಶ್ರೀ ಚರಣಿ
ಪಂದ್ಯ ನಡೆಯುವುದು ಯಾವಾಗ?
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ಸಂಜೆ 7.30ಕ್ಕೆ ನಡೆಯಲಿದ್ದು, ಟಾಸ್ ಪಂದ್ಯಕ್ಕೂ ಅರ್ಧಗಂಟೆ ಮುನ್ನ ನಡೆಯಲಿದೆ.
ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಡಬ್ಲ್ಯೂಪಿಎಲ್ ಪಂದ್ಯಗಳ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೀಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications