For Quick Alerts
ALLOW NOTIFICATIONS  
For Daily Alerts
 

WPL 2026 Final: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ ಹೈವೋಲ್ಟೇಜ್ ಫೈನಲ್‌ ಪಂದ್ಯ: ಸಮಯ, ನೇರಪ್ರಸಾರ, ಪ್ಲೇಯಿಂಗ್ 11 ವಿವರ

WPL 2026 RCB: ಡಬ್ಲ್ಯೂಪಿಎಲ್‌ 2026 ಹೈವೋಲ್ಟೇಜ್‌ ಫೈನಲ್ ಪಂದ್ಯ ವಡೋದರಾದಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಫೆಬ್ರವರಿ 5ರ ಗುರುವಾರ ನಡೆಯಲಿದೆ. ಹಾಗಾದ್ರೆ, ಸಮಯ ಹಾಗೂ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆರ್‌ಸಿಬಿ ಮಹಿಳೆಯರ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭದಿಂದಲೂ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್‌ ಪ್ರವೇಶ ಮಾಡಿದೆ. ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟ್ರೋಫಿಗಾಗಿ ಕಾದಾಡಲಿದೆ. 2024ರಲ್ಲಿ ಟ್ರೋಫಿ ಗೆದ್ದು 2025ರಲ್ಲಿ ಈ ಚಾನ್ಸ್‌ ಮಿಸ್‌ ಮಾಡಿಕೊಂಡಿದ್ದ ಆರ್‌ಸಿಬಿ ಈ ಬಾರಿ ಚಾಂಪಿಯನ್‌ ಆಗಲೇಬೇಕೆಂಬ ಪಣ ತೊಟ್ಟು ನಿಂತಿದೆ. ಮತ್ತೊಂದೆಡೆ, ಚೊಚ್ಚಲ ಟ್ರೋಫಿಗೆ ಮುತ್ತಿಡಬೇಕು ಎನ್ನುವ ಹಠ ಡಿಸಿಯದ್ದಾಗಿದೆ.

WPL 2026 Final RCB vs DC Match Time Live Telecast amp amp Probable Playing XI Know Complete Details

ಆರ್‌ಸಿಬಿ, ಡೆಲ್ಲಿ ಫೈನಲ್ ಪ್ರವೇಶ: ಡಬ್ಲ್ಯೂಪಿಎಲ್‌ ಟೂರ್ನಿಯ ಫೈನಲ್ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅರ್ಹತೆ ಪಡೆದುಕೊಂಡಿವೆ. ಸೀಸನ್ ಆರಂಭದಿಂದಲೂ ಸ್ಥಿರ ಪ್ರದರ್ಶನ ನೀಡಿರುವ ಈ ಎರಡು ತಂಡಗಳು ಇದೀಗ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ. ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದ್ದು, ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

ಆರ್‌ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮತೋಲನದ ತಂಡವಾಗಿ ಕಾಣಿಸಿಕೊಂಡಿದ್ದು, ಪ್ರಮುಖ ಆಟಗಾರ್ತಿಯರ ಉತ್ತಮ ಫಾರ್ಮ್ ತಂಡಕ್ಕೆ ಬಲ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪ್ರಮುಖ ಆಟಗಾರ್ತಿಯರು ಹಾಗೂ ಅನುಭವಿಗಳ ಸಂಯೋಜನೆಯೊಂದಿಗೆ ಎದುರಾಳಿಗಳಿಗೆ ಕಠಿಣ ಸವಾಲು ಎಸೆದಿದೆ. ಹಾಗಾದ್ರೆ, ಎರಡು ತಂಡಗಳ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಪ್ರಶ್ನೆ ಬಹುತೇಕ ಕ್ರೀಡಾಭಿಮಾನಿಗಳ ತಲೆಯಲ್ಲಿರುತ್ತದೆ. ಅದೆಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ.

ಎಲಿಮಿನೇಟರ್ ಆಡದೇ ಆರ್‌ಸಿಬಿ ಫೈನಲ್‌ಗೆ ಎಂಟ್ರಿ: ಲೀಗ್ ಹಂತದಲ್ಲೇ 8ರಲ್ಲಿ ಆರು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 12 ಅಂಕಗಳನ್ನು ಪಡೆದು ಆರ್‌ಸಿಬಿ ಅಗ್ರ ಸ್ಥಾನವನ್ನು ಅಲಂಕರಿಸಿತು. ಜೊತೆಗೆ ಯಾವುದೇ ಎಲಿಮಿನೇಟರ್ ಪಂದ್ಯವನ್ನಾಡದೇ, ನೇರವಾಗಿ ಫೈನಲ್‌ಗೂ ಪ್ರವೇಶ ಮಾಡಿತು. ಇನ್ನೂ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್‌ಗೆ ಎಂಟ್ರಿ ಕೊಟ್ಟಿತು.

ಹೈವೋಲ್ಟೇಜ್ ಫೈನಲ್‌ ಪಂದ್ಯ: 2024ರಲ್ಲಿ ಉಭಯ ತಂಡಗಳು ಫೈನಲ್‌ನಲ್ಲಿ ಎದುರಾದ ವೇಳೆ ಆರ್‌ಸಿಬಿ ಗೆಲುವು ಸಾಧಿಸಿ ಚಾಂಪಿಯನ್ ಆಗಿತ್ತು. ಇದೀಗ ಮತ್ತೊಮ್ಮೆ ಈ ಎರಡು ಬಲಿಷ್ಠ ತಂಡಗಳ ನಡುವಿನ ಹೈವೋಲ್ಟೇಜ್ ಫೈನಲ್‌ ಪಂದ್ಯ ನಡೆಯಲಿದೆ. ಆರಂಭದಿಂದ ಸತತ ಐದು ಗೆಲವು ಸಾಧಿಸಿದ್ದ ಆರ್‌ಸಿಯು ಬಳಿಕ ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧ ಸೋಲನುಭವಿಸಿತು. ಆದರೂ, ನಂತರದ ಪಂದ್ಯದಲ್ಲಿ ಗೆದ್ದು ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಿತು.

ಲೀಗ್‌ ಹಂತದಲ್ಲಿ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೇ ಆರ್‌ಸಿಬಿ ಫೈನಲ್‌ನಲ್ಲಿ ಕಾದಾಡಲು ಸಜ್ಜಾಗಿದೆ. ಲೀಗ್ ಹಂತದ 15ನೇ ಪಂದ್ಯದಲ್ಲಿ ಡೆಲ್ಲಿ, ಆರ್‌ಸಿಬಿಯನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ಇನ್ನೂ ಉಭಯ ತಂಡಗಳು 9 ಬಾರಿ ಮುಖಾಮುಖಿಯಾಗಿದ್ದು, ಡೆಲ್ಲಿ ಆರು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಆರ್‌ಸಿಬಿ ಮೂರು ಪಂದ್ಯಗಳಲ್ಲಿ ಗೆಲುವು ಕಂಡಿದೆ.

ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಎರಡನೇ ಬಾರಿ ಟ್ರೋಫಿ ಗೆಲುವಿನ ಕನಸಿನೊಂದಿಗೆ ಕಣಕ್ಕಿಳಿಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಟ್ರೋಫಿಗಾಗಿ ಪೈಪೋಟಿ ನಡೆಸಲಿದೆ. ಎರಡು ತಂಡಗಳ ಅಭಿಮಾನಿಗಳು ರೋಚಕ ಫೈನಲ್ ಪಂದ್ಯವನ್ನು ವೀಕ್ಷಣ ಮಾಡಲು ಕಾತರದಿಂದ ಕಾಯುತ್ತಿದ್ದಾರೆ.

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್, ರಿಚಾ ಘೋಷ್, ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಲಾರೆನ್ ಬೆಲ್, ಸಯಾಲಿ ಸತ್ಘರೆ.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ 11: ಜೆಮಿಮಾ ರಾಡ್ರಿಗಸ್ (ನಾಯಕ), ಲಿಜೆಲ್ ಲೀ (ವಿಕೆಟ್ ಕೀಪರ್), ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ಟ್, ನಿಕಿ ಪ್ರಸಾದ್, ಮರಿಜಾನ್ನೆ ಕಪ್, ಚಿನೆಲ್ಲೆ ಹೆನ್ರಿ, ಸ್ನೇಹ ರಾಣಾ, ನಲ್ಲಪುರೆಡ್ಡಿ ಚರಣಿ, ಮಿನ್ನು ಮಣಿ, ನಂದಿನಿ ಶರ್ಮಾ.

ಪಂದ್ಯದ ಸ್ಥಳ, ಸಮಯ, ನೇರಪ್ರಸಾರದ ವಿವರ

* ಸ್ಥಳ: ವಡೋದರಾದ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ
* ಸಮಯ: ಸಂಜೆ 7.30ಕ್ಕೆ
* ನೇರಪ್ರಸಾರ: ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಗುಲಾತ್ತದೆ. ಅಥವಾ ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲೂ ವೀಕ್ಷಣೆ ಮಾಡಬಹುದು.

Story first published: Wednesday, February 4, 2026, 15:31 [IST]
Other articles published on Feb 4, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+