Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಆರ್‌ಸಿಬಿ,ಗುಜರಾತ್‌ ಕದಾಟ: ನೇರಪ್ರಸಾರ, ಸಮಯದ ಬಗ್ಗೆ ಮಾಹಿತಿ

ವಡೋದರಾ: ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಚರಣದ ಪಂದ್ಯಗಳು ಸೋಮವಾರದಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್‌ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಐದನೇ ಗೆಲುವಿನ ಕನಸು ಕಾಣುತ್ತಿದೆ. ಇನ್ನು ಗುಜರಾತ್‌ ಜೈಂಟ್ಸ್‌ ಆರ್‌ಸಿಬಿ ಜಯದ ಓಟಕ್ಕೆ ಬ್ರೇಕ್‌ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ.

ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಆರ್‌ಸಿಬಿ ಲೀಗ್‌ನಲ್ಲಿ ಸಂಘಟಿತ ಆಟದ ಮೇಲೆ ವಿಶ್ವಾಸವನ್ನು ಇಟ್ಟಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಟಗಾರರು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈ ಆತ್ಮವಿಶ್ವಾಸ ತಂಡಕ್ಕೆ ಬೂಸ್ಟ್‌ ನೀಡಿದಂತೆ ಆಗಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಆರ್‌ಸಿಬಿ ಬಲಿಷ್ಠವಾಗಿದ್ದು, ಲೀಗ್‌ನಲ್ಲಿ ಮತ್ತೊಂದು ಗೆಲುವಿನ ಹುಡುಕಾಟದಲ್ಲಿದೆ.

WPL 2026 In-form RCB eye 5th win as they take on Gujarat Giants in Vadodara today

ನವಿ ಮುಂಬೈ ಅಂಗಳದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ತಂಡಗಳು ಮುಖಾಮುಖಿ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ 7 ವಿಕೆಟ್‌ ನಷ್ಟಕ್ಕೆ 182 ರನ್‌ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಗುಜರಾತ್ ಜೈಂಟ್ಸ್ ತಂಡ 150 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಕನ್ನಡತಿ ಶ್ರೇಯಾಂಕ ಪಾಟೀಲ್‌ 5 ವಿಕೆಟ್‌ ಪಡೆದು ಬೀಗಿದ್ದರು. ಹೀಗಾಗಿ ಇವರ ಮೇಲೆ ಸೋಮವಾರ ಎಲ್ಲರ ಚಿತ್ತ ನೆಟ್ಟಿದೆ.

ಸ್ಮೃತಿ ಆಕರ್ಷಣೆ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಮೃತಿ ಮಂಧಾನ ಅಬ್ಬರಿಸಿದ್ದರು. ಇವರು ಮತ್ತೊಮ್ಮೆ ಇದೇ ರೀತಿ ಬ್ಯಾಟಿಂಗ್ ನಡೆಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರಿಗೆ ಗ್ರೇಸ್‌ ಹ್ಯಾರಿಸ್ ಉತ್ತಮ ಸಾಥ್ ನೀಡುವ ಅವಶ್ಯಕತೆ ಇದೆ. ಜಾರ್ಜಿಯಾ ವೋಲ್, ಗೌತಮಿ ನಾಯಕ್, ರಿಚಾ ಘೋಷ್ ಮಧ್ಯಮ ಕ್ರಮಾಂಕದಲ್ಲಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬೇಕಿದೆ. ಇನ್ನು ಆಲ್‌ರೌಂಡರ್‌ಗಳಾದ ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಶ್ರೇಯಾಂಕ ಪಾಟೀಲ್, ಪ್ರೇಮಾ ರಾವತ್, ಲಾರೆನ್ ಬೆಲ್ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬೇಕಿದೆ. ಅಂದಾಗ ಮಾತ್ರ ಮತ್ತೊಂದು ಗೆಲುವಿನ ಕನಸು ನನಸಾಗುತ್ತದೆ.

WPL 2026 In-form RCB eye 5th win as they take on Gujarat Giants in Vadodara today

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ, ಜಾರ್ಜಿಯಾ ವೋಲ್, ಗೌತಮಿ ನಾಯಕ್, ರಿಚಾ ಘೋಷ್, ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ/ಸಯಾಲಿ ಸತ್ಘರೆ, ಶ್ರೇಯಾಂಕ ಪಾಟೀಲ್, ಪ್ರೇಮಾ ರಾವತ್, ಲಾರೆನ್ ಬೆಲ್.

ಗುಜರಾತ್ ತಂಡದಲ್ಲೂ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಬೆತ್ ಮೂನಿ, ಸೋಫಿ ಡಿವೈನ್, ಆಶ್ಲೇ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ್ತಿ. ನಿಕಾ ಅಹುಜಾ, ಭಾರತಿ ಫುಲ್ಮಾಲಿ ಸಹ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಕಾಶ್ವಿ ಗೌತಮ್, ತನುಜಾ ಕನ್ವರ್, ರಾಜೇಶ್ವರಿ ಗಾಯಕವಾಡ್, ರೇಣುಕಾ ಸಿಂಗ್ ಬಿಗುವಿನ ದಾಳಿ ನಡೆಸಿದಲ್ಲಿ ಮೂರನೇ ಗೆಲುವಿನ ನಗೆ ಬೀರಬಹುದಾಗಿದೆ.

ಗುಜರಾತ್ ಜೈಂಟ್ಸ್: ಬೆತ್ ಮೂನಿ, ಸೋಫಿ ಡಿವೈನ್, ಶಿವಾನಿ ಸಿಂಗ್, ಆಶ್ಲೇ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್, ಕನಿಕಾ ಅಹುಜಾ, ಭಾರತಿ ಫುಲ್ಮಾಲಿ, ಕಾಶ್ವಿ ಗೌತಮ್, ತನುಜಾ ಕನ್ವರ್, ರಾಜೇಶ್ವರಿ ಗಾಯಕವಾಡ್, ರೇಣುಕಾ ಸಿಂಗ್.

ಗುಜರಾತ್‌, ಆರ್‌ಸಿಬಿ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.

ಗುಜರಾತ್‌, ಆರ್‌ಸಿಬಿ ಪಂದ್ಯ ನಡೆಯುವು ಸಮಯ ಏನು?

ಗುಜರಾತ್, ಆರ್‌ಸಿಬಿ ನಡುವಣ ಪಂದ್ಯ ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಿದೆ. ಅರ್ಧಗಂಟೆಗೆ ಮುನ್ನ ಟಾಸ್ ನಡೆಯಲಿದೆ.

Story first published: Monday, January 19, 2026, 8:09 [IST]
Other articles published on Jan 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+