Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಭಾರೀ ಪೆಟ್ಟು

ಇನ್ನೇನು ಕೆಲವೇ ದಿನಗಳಲ್ಲಿ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 9 ರಂದು ಆರಂಭವಾಗಲಿದೆ. ಈ ಆವೃತ್ತಿ ಆರಂಭಕ್ಕೂ ಮುನ್ನವೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರೀ ಪೆಟ್ಟು ಬಿದ್ದಿದೆ. ಟೂರ್ನಿ ಆರಂಭಕ್ಕೂ ಮುನ್ನ ಸ್ಟಾರ್‌ ಆಟಗಾರರು ತಂಡದಿಂದ ಹೊರ ನಡೆದಿದ್ದು ತಂಡಕ್ಕೆ ಹಿನ್ನಡೆಯಾಗಿದೆ.

ಆರ್‌ಸಿಬಿಯ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರ್ರಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನ್ನಾಬೆಲ್ ಸದರ್ಲ್ಯಾಂಡ್ ಸಹ ಡಬ್ಲ್ಯೂಪಿಎಲ್‌ನಲ್ಲಿ ಭಾಗವಹಿಸುವುದಿಲ್ಲ. ಇವರಿಬ್ಬರೂ ವೈಯಕ್ತಿಕ ಕಾರಣಗಳಿಂದ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಆರ್‌ಸಿಬಿ ತಂಡದ ಸ್ಟಾರ್ ಆಟಗಾರ್ತಿ ಎಲ್ಲಿಸಾ ಪೆರ್ರಿ ಲೀಗ್‌ನಿಂದ ಹೊರ ನಡೆದಿದ್ದು, ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ. ಇವರ ಬದಲಿಗೆ ಆರ್‌ಸಿಬಿ ಸಯಾಲಿ ಸತ್ಘರೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

WPL 2026 Major Blow for RCB and DC as Ellyse Perry and Annabel Sutherland Withdraw from Season

ಸಯಾಲಿ ಸತ್ಘರೆ ಅವರನ್ನು ಆರ್‌ಸಿಬಿ 30 ಲಕ್ಷ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ಸದರ್ಲ್ಯಾಂಡ್ ಬದಲಿಗೆ ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಅಲಾನಾ ಕಿಂಗ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಅಲಾನಾ ಕಿಂಗ್ ಇವರು ಈ ಹಿಂದಿನ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ತಂಡದ ಪರ ಆಡಿದ್ದರು. ಈ ವರೆಗೆ ಅಲಾನಾ ಕಿಂಗ್ ಡಬ್ಲ್ಯೂಪಿಎಲ್‌ನಲ್ಲಿ ಒಟ್ಟು 27 ಪಂದ್ಯಗಳನ್ನು ಆಡಿದ್ದು, 27 ವಿಕೆಟ್‌ ಪಡೆದಿದ್ದಾರೆ. ಇವರಿಗೆ ಡೆಲ್ಲಿ 60 ಲಕ್ಷ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಎಲ್ಲಿಸಾ ಪೆರ್ರಿ ಆರ್‌ಸಿಬಿ ತಂಡದ ಪರ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ 25 ಪಂದ್ಯಗಳಲ್ಲಿ 64ರ ಸರಾಸರಿಯಲ್ಲಿ 972 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 8 ಅರ್ಧಶತಕಗಳು ಸೇರಿವೆ. ಅಲ್ಲದೆ 14 ವಿಕೆಟ್‌ಗಳನ್ನು ಪಡೆದು ಬೀಗಿದ್ದಾರೆ.

ಯುಪಿ ತಂಡಕ್ಕೂ ಪೆಟ್ಟು

ಯುಪಿ ವಾರಿಯರ್ಸ್ ಕೂಡ ಸಹ ದೊಡ್ಡ ಹಿನ್ನಡೆಯಾಗಿದೆ. ಎಡಗೈ ಮಧ್ಯಮ ವೇಗಿ ತಾರಾ ನಾರ್ರಿಸ್ ಸಹ ಈ ಲೀಗ್‌ ನಿಂದ ಹೊರ ನಡೆದಿದ್ದಾರೆ. ಹೀಗಾಗಿ ಇವರು ಲೀಗ್‌ನಲ್ಲಿ ಆಡುತ್ತಿಲ್ಲ. ಮಹಿಳಾ ಪ್ರೀಮಿಯರ್ ಲೀಗ್‌ 4ನೇ ಆವೃತ್ತಿಯು ಜನವರಿ 9 ರಿಂದ ಫೆಬ್ರವರಿ 1, 2026ರ ವರೆಗೆ ನಡೆಯುತ್ತದೆ. ತಾರಾ ನಾರ್ರಿಸ್ ಯುಎಸ್‌ಎ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2026ರ ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯವಳಿ ನಡೆಯಲಿದ್ದು, ಈ ವೇಳೆ ಯುಎಸ್‌ಎ ಸಹ ಭಾಗವಹಿಸಲಿದ್ದಾರೆ. ತಾರಾ ನಾರ್ರಿಸ್ ಅವರ ಬದಲಿಗೆ ಯುಪಿ ತಂಡ ಚಾರ್ಲಿ ನಾಟ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

Story first published: Wednesday, December 31, 2025, 7:05 [IST]
Other articles published on Dec 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+