Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಐದು ತಂಡಗಳನ್ನು ಮುನ್ನಡೆಸುತ್ತಿರುವ ನಾಯಕಿಯರು ಇವರೇ..

ಮಹಿಳಾ ಪ್ರೀಮಿಯರ್ ಲೀಗ್‌ಗೆ ಕ್ಷಣಗಣನೆ ಆರಂಭವಾಗಿದೆ. ನಾಲ್ಕನೇ ಆವೃತ್ತಿಯ ಡಬ್ಲ್ಯೂಪಿಎಲ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಐದು ತಂಡಗಳ ನಡುವೆ ಕಾದಾಟ ನಡೆಯಲಿದೆ. ಈ ಬಾರಿ ಟೂರ್ನಿಯನ್ನು 2 ಸ್ಥಳಗಳಲ್ಲಿ ಆಡಿಸಲಾಗುತ್ತಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಆವೃತ್ತಿಯಲ್ಲಿ ಮುನ್ನಡೆಸುತ್ತಿರುವ ನಾಯಕಿಯರ ಬಗ್ಗೆ ಪರಿಚಯ ಇಲ್ಲಿದೆ.

ಟೀಮ್ ಇಂಡಿಯಾದ ನಾಯಕಿ ಹಾಗೂ ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಇವರ ಮುಂದಾಳತ್ವದಲ್ಲಿ ಮುಂಬೈ ತಂಡ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಡಬ್ಲ್ಯೂಪಿಎಲ್‌ನ ಯಶಸ್ವಿ ನಾಯಕಿಯರಲ್ಲಿ ಇವರಿಗೆ ಅಗ್ರ ಸ್ಥಾನ. ಇವರ ನಾಯಕತ್ವದ ಮುಂಬೈ 2 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಬಾರಿ ಮೂರನೇ ಬಾರಿ ಟ್ರೋಫಿಗೆ ಮುತ್ತಿಡುವ ಕನಸಿನೊಂದಿಗೆ ಕಣಕ್ಕೆ ಇಳಿಯಲಿದೆ.

WPL 2026 Meet the Captains of All Five Teams as Mumbai Indians Face RCB in the Opener

ಆರ್‌ಸಿಬಿ ತಂಡವನ್ನು ಈ ಬಾರಿಯೂ ಲೀಗ್‌ನಲ್ಲಿ ಭರವಸೆಯ ಆಟಗಾರ್ತಿ ಸ್ಮೃತಿ ಮಂಧಾನ ಮುನ್ನಡೆಸಲಿದ್ದಾರೆ. ಇವರ ಮುಂದಾಳತ್ವದಲ್ಲಿ ಆರ್‌ಸಿಬಿ ಒಂದು ಬಾರಿ ಚಾಂಪಿಯನ್‌ ಆಗಿದೆ. ಅಲ್ಲದೆ ಇವರು ಟಾಪ್‌ ಆರ್ಡರ್‌ನಲ್ಲಿ ತಂಡಕ್ಕೆ ಆನೆ ಬಲ ತುಂಬಬಲ್ಲ ಕ್ಷಮತೆ ಹೊಂದಿದ್ದಾರೆ. ಪ್ರಸಕ್ತ ವರ್ಷದ ಫಾರ್ಮ್‌ ಇವರ ಮೇಲೆ ಅಭಿಮಾನಿಗಳು ನಿರೀಕ್ಷೆ ಹೆಚ್ಚಿಸುವಂತೆ ಮಾಡಿವೆ. ಈ ಬಾರಿ ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರಲು ಇವರ ಆಟವೂ ಮುಖ್ಯವಾಗಿದೆ.

ಜೆಮಿಮಾ ರೊಡ್ರಿಗಸ್‌

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈ ಬಾರಿ ತನ್ನ ಭರವಸೆಯ ಆಟಗಾರ್ತಿ ಮೆಗ್ ಲ್ಯಾನಿಂಗ್ ಅವರನ್ನು ತಂಡದಿಂದ ಕೈ ಬಿಟ್ಟಿತ್ತು. ಅಲ್ಲದೆ ಈ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ಪ್ರಶ್ನೆಗೆ ಕಳೆದ ಕೆಲವು ದಿನಗಳ ಹಿಂದೆ ಉತ್ತರ ಸಿಕ್ಕಿದೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಜೆಮಿಮಾ ರೊಡ್ರಿಗಸ್ ಮುನ್ನಡೆಸಲಿದ್ದಾರೆ. ಇವರು ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ತಂಡಕ್ಕೆ ಬಲ ತುಂಬಬಲ್ಲರು.

ಆಶ್ಲೀ ಗಾರ್ಡ್ನರ್

ಕಳೆದ ಬಾರಿ ಗುಜರಾತ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಆಶ್ಲೀ ಗಾರ್ಡ್ನರ್ ಈ ಬಾರಿಯೂ ಮುನ್ನಡೆಸಲಿದ್ದಾರೆ. ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಿಕೊಂಡಿರುವ ಗುಜರಾತ್‌, ಚೊಚ್ಚಲ ಪ್ರಶಸ್ತಿಯನ್ನು ಪಡೆಯುವ ಕನಸು ಕಾಣುತ್ತಿದೆ. ಕಳೆದ ಬಾರಿ ಆಶ್ಲೀ ಗಾರ್ಡ್ನರ್ ಮುಂದಾಳತ್ವದಲ್ಲಿ ಗುಜರಾತ್‌ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.

ಮೆಗ್ ಲ್ಯಾನಿಂಗ್‌

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆಯನ್ನು ಹೊಂದಿದ್ದ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್‌ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಯುಪಿ ವಾರಿಯರ್ಸ್ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಅಲ್ಲದೆ ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ದೀಪ್ತಿ ಶರ್ಮಾ ಬದಲಿಗೆ ಈ ಬಾರಿ ಯುಪಿ ವಾರಿಯರ್ಸ್ ಅನುಭವಿ ಮೆಗ್‌ ಲ್ಯಾನಿಂಗ್‌ ಅವರಿಗೆ ಪಟ್ಟ ಕಟ್ಟಿದೆ.

Story first published: Thursday, January 8, 2026, 8:08 [IST]
Other articles published on Jan 8, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+