WPL 2026 Mega Auction: 73 ಸ್ಥಾನಗಳಿಗೆ ಹರಾಜು; 277 ಆಟಗಾರ್ತಿಯರ ಶಾರ್ಟ್‌ಲಿಸ್ಟ್
ಮಹಿಳಾ ಪ್ರೀಮಿಯರ್ ಲೀಗ್‌ಗೆ ಸಿದ್ಧತೆಗಳು ಭರದಿಂದ ಸಾಗಿವೆ. ಡಬ್ಲ್ಯೂಪಿಎಲ್ 2026 ಮೆಗಾ ಹರಾಜು ನಡೆಯಲಿದೆ. ಈಗಾಗಲೇ 5 ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ರಿಲೀಸ್ ಮಾಡಿದೆ. ಬಿಸಿಸಿಐ ಈಗ ಹರಾಜಿಗೆ ಆಟಗಾರರ ಶಾರ್ಟ್ ಲಿಸ್ಟ್ ಮಾಡಿದೆ. ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ನವೆಂಬರ್ 27 ರಂದು ನವದೆಹಲಿಯಲ್ಲಿ ನಡೆಯಲಿದೆ. ಈ ವೇಳೆ 277 ಆಟಗಾರರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ.
ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿದ ಆಟಗಾರರ ಪೈಕಿ ಹೆಚ್ಚಿನ ಆಟಗಾರ್ತಿಯರು ಭಾರತೀಯರೇ ಆಗಿದ್ದಾರೆ. 5 ಫ್ರಾಂಚೈಸಿಗಳು ಒಟ್ಟು 73 ಸ್ಲಾಟ್‌ಗಳು ಖಾಲಿ ಇವೆ. ಈ ವೇಳೆ ಭಾರತೀಯ ಆಟಗಾರರು 194 ಆಟಗಾರ್ತಿಯರು ಹರಾಜಿನ ಅಂಗಳ ಪ್ರವೇಶಿಸಲಿದ್ದಾರೆ. ಹರಾಜಿನಲ್ಲಿ ಭಾಗವಹಿಸಲಿರುವ ಕ್ಯಾಪ್ಡ್ ಆಟಗಾರ್ತಿಯರ ಸಂಖ್ಯೆ 52 ಆಗಿದ್ದರೆ, ಅನ್ ಕ್ಯಾಪ್ಡ್ ಆಟಗಾರ್ತಿಯರ ಸಂಖ್ಯೆ 142 ಆಗಿದೆ. ಇನ್ನು 23 ವಿದೇಶಿ ಆಟಗಾರರ ಸ್ಲಾಟ್‌ಗಳು ಖಾಲಿ ಇವೆ. ಈ ವೇಳೆ ಕ್ಯಾಪ್ಡ್ ಆಟಗಾರ್ತಿಯರು 66 ಸೇರಿದಂತೆ ಒಟ್ಟು 83 ಆಟಗಾರ್ತಿಯರ ಶಾರ್ಟ್ ಲಿಸ್ಟ್ ಮಾಡಲಾಗಿದೆ.

ಡಬ್ಲ್ಯೂಪಿಎಲ್ ಹರಾಜಿನಲ್ಲಿ ಶಾರ್ಟ್ ಲಿಸ್ಟ್ ಮಾಡಲಾದ 277 ಆಟಗಾರ್ತಿಯರಲ್ಲಿ 19 ಆಟಗಾರ್ತಿಯರ ಮೂಲ ಬೆಲೆ 50 ಲಕ್ಷ ರೂಪಾಯಿ ಆಗಿದೆ. ಈ ಪಟ್ಟಿಯಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಆಟಗಾರ್ತಿ ದೀಪ್ತಿ ಶರ್ಮಾ ಸಹ ಸೇರಿದ್ದಾರೆ. ಇನ್ನು ಹನ್ನೊಂದು ಆಟಗಾರ್ತಿಯರ ಮೂಲ ಬೆಲೆ 40 ಲಕ್ಷ ಆಗಿದ್ದು, 88 ಆಟಗಾರ್ತಿಯರ ಮೂಲ ಬೆಲೆ ₹30 ಲಕ್ಷ ಮೂಲ ಬೆಲೆ ಆಗಿದೆ. ಇನ್ನು 10 ಹಾಗೂ 20 ಲಕ್ಷ ರೂ. ಮೂಲ ಬೆಲೆಯ ಆಟಗಾರ್ತಿಯರು ಸಹ ಪಟ್ಟಿಯಲ್ಲಿದ್ದಾರೆ. ದೆಹಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ತಂಡಗಳು ಹರಾಜಿನಲ್ಲಿ ಸ್ಟಾರ್ ಆಟಗಾರ್ತಿಯರನ್ನು ಕೊಳ್ಳಲು ಬಾಜಿ ಕಟ್ಟಲಿವೆ.
ಮಾರ್ಕ್ಯೂ ಆಟಗಾರ್ತಿಯರ ಪಟ್ಟಿ
ದೀಪ್ತಿ ಶರ್ಮಾ (ಭಾರತ), ರೇಣುಕಾ ಸಿಂಗ್ (ಭಾರತ), ಸೋಫಿ ಡಿವೈನ್ (ನ್ಯೂಜಿಲೆಂಡ್), ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್), ಅಲಿಸಾ ಹೀಲಿ (ಆಸ್ಟ್ರೇಲಿಯಾ), ಅಮೆಲಿಯಾ ಕೆರ್ (ನ್ಯೂಜಿಲೆಂಡ್), ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ), ಮತ್ತು ಲಾರಾ ವೋಲ್ವಾರ್ಡ್ (ದಕ್ಷಿಣ ಆಫ್ರಿಕಾ).
ನಾಲ್ಕನೇ ಆವೃತ್ತಿಯ ಡಬ್ಲ್ಯೂಪಿಎಲ್ ಜನವರಿ 7 ರಿಂದ ಫೆಬ್ರವರಿ 3ರ ವರೆಗೆ ನಡೆಯಲಿದೆ. ಮೂರು ಆವೃತ್ತಿಯ ಡಬ್ಲ್ಯೂಪಿಎಲ್ ನಡೆದಿದ್ದು ಮುಂಬೈ ಇಂಡಿಯನ್ಸ್ ಒಂದು, ಆರ್‌ಸಿಬಿ ಒಂದು ಬಾರಿ ಪಟ್ಟವನ್ನು ಗೆದ್ದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications