For Quick Alerts
ALLOW NOTIFICATIONS  
For Daily Alerts
 

ಮುಂಬೈ ತಂಡಕ್ಕೆ ಬೌಲಿಂಗ್ ಕೋಚ್ ನೇಮಕ

ಮಹಿಳಾ ಪ್ರೀಮಿಯರ್‌ ಲೀಗ್‌ಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ವೇಳೆ ಎಲ್ಲ ತಂಡಗಳು ತೆರೆ ಮರೆಯ ಕಸರತ್ತು ನಡೆಸಿವೆ. ಪಂದ್ಯವಾಳಿ ಆರಂಭಕ್ಕೂ ಮುನ್ನ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಆಸ್ಟ್ರೇಲಿಯಾದ ಮಾಜಿ ಲೆಗ್‌ ಸ್ಪಿನ್ ಬೌಲರ್‌ ಕ್ರಿಸ್ಟನ್ ಬೀಮ್ಸ್ ಅವರನ್ನು ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಿದೆ. 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ ಜನವರಿ 9ರಿಂದ ಆರಂಭವಾಗಲಿದೆ.

ಮುಂಬೈ ತಂಡ ಈ ಸುದ್ದಿಯನ್ನು ಸಾಮಾಜಿಕ ತಾಣದಲ್ಲಿ ಬಹಿರಂಗ ಪಡಿಸಿದೆ. ಈ ಬಗ್ಗೆ ಮುಂಬೈ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಮಾಡಿದೆ. ನಾನು ಮುಂಬೈ ತಂಡಕ್ಕೆ ತರಬೇತುದಾರನಾಗಿ ಮೊದಲ ಬಾರಿಗೆ ಬಂದಿರುವೆ. ನಾನು ಕ್ರಿಕೆಟ್ ಆಡಿರುವ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಜೂಲನ್‌ ಗೋಸ್ವಾಮಿ ಅವರೊಂದಿಗೆ ಕೆಲಸ ಮಾಡಲು ನನಗೆ ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.

WPL 2026 Mumbai Indians Name Aussie Leg-Spinner Kristen Beams as Bowling Coach for Season 4

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಕ್ರಿಸ್ಟನ್ ಬೀಮ್ಸ್ ಹಲವು ವಿಶ್ವಕಪ್‌ ಅಭಿಯಾನಗಳಲ್ಲಿ ತಂಡದ ಭಾಗವಾಗಿದ್ದರು. 2017ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಇವರು ಗರಿಷ್ಠ ವಿಕೆಟ್‌ ಪಡೆದ ಆಟಗಾರ್ತಿಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಇವರು ಆಸೀಸ್‌ ಪರ ಒಟ್ಟು 1 ಟೆಸ್ಟ್‌, 30 ಏಕದಿನ, 18 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮಹಿಳಾ ಬಿಗ್‌ ಬ್ಯಾಷ್‌ನಲ್ಇ ಇವರು 45 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.ಒಟ್ಟಾರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರು 62 ವಿಕೆಟ್‌ ಪಡೆದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಕ್ರಿಸ್ಟನ್ ಬೀಮ್ಸ್ ಹೇಳಿದ್ದೇನು?

ವಿಡಿಯೋದಲ್ಲಿ ಮಾತನಾಡಿರುವ ಕ್ರಿಸ್ಟನ್ ಬೀಮ್ಸ್ ಒಂದು ತಂಡ ಇಷ್ಟೊಂದು ವರ್ಷ ಒಂದು ತಂಡ ಗೆಲುವಿನ ಹಾದಿಯಲ್ಲಿ ನಡೆಯುತ್ತಿರುವುದು ಅದ್ಭುತ. ಇದು ಒಂದು ಕುಟುಮಬವಾಗಿದೆ. ಈ ಕುಟುಂಬದ ಭಾಗವಾಗಲು ನನಗೆ ಹೆಮ್ಮೆ ಇದೆ ಎಂದು ಅವರ ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಸಂಘಟಿತ ಆಟದ ಮೇಲೆ ಬಲ ಇಟ್ಟಿದೆ. ಈ ತಂಡವನ್ನು ಭಾರತದ ಭರವಸೆಯ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಕ್ರಿಸ್ಟನ್ ಬೀಮ್ಸ್ ಅವರ ಆಗಮನದಿಂದ ತಂಡದ ಸ್ಪಿನ್ ಬೌಲಿಂಗ್ ವಿಭಾಗ ಬಲ ಪಡಲಿದೆ. ಇದು ತಂಡದಲ್ಲಿ ಸ್ಥಾನ ಪಡೆದ ಸ್ಪಿನ್ ಬೌಲರ್‌ಗಳಿಗೆ ವರದಾನವಾಗಿದೆ. ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಬೀಮ್ಸ್‌ ಹೊಸ ತಂತ್ರವನ್ನು ಅನುಸರಿಸಬಹುದು. ಇದರಿಂದ ಮುಂಬೈ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವ ಕನಸು ಕಾಣುತ್ತಿದೆ.

Story first published: Tuesday, December 30, 2025, 9:57 [IST]
Other articles published on Dec 30, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+