WPL 2026: ಸ್ಮೃತಿ ಮುಡಿಗೆ ಆರೆಂಜ್, ಸೋಫಿಗೆ ಪರ್ಪಲ್ ಕ್ಯಾಪ್
ವಡೋದಾರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ರಾಯಲ್ ಆಟವನ್ನು ಆಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡಿದರು. ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರ ಕ್ಲಾಸಿಕ್ ಬ್ಯಾಟಿಂಗ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು. ಈ ಬಾರಿಯ ಲೀಗ್‌ನಲ್ಲಿ ಆರೆಂಜ್, ಪರ್ಪಲ್ ಕ್ಯಾಪ್ ಪಡೆ ಆಟಗಾರ್ತಿ ಯಾರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆದರೆ ಎಲ್ಲರ ಕಣ್ಣುಗಳು ಮಾತ್ರ ಆ ಎರಡು ಪ್ರಶಸ್ತಿಯ ಮೇಲೆ ನೆಟ್ಟಿರುತ್ತವೆ. ಲೀಗ್ ಉದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಟಗಾರ್ತಿಗೆ ಆರೆಂಜ್ ಕ್ಯಾಪ್, ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಈ ಬಾರಿ ಆರೆಂಜ್ ಕ್ಯಾಪ್ ಆರ್‌ಸಿಬಿ ನಾಯಕಿಯ ಮುಡಿಗೇರಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಮೃತಿ ಮಂಧನಾ ಅಬ್ಬರಿಸಿದರು. ಮಹತ್ವದ ಪಂದ್ಯದಲ್ಲಿ ಡೆಲ್ಲಿ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿದ ಸ್ಮೃತಿ ಆರ್‌ಸಿಬಿ ಗೆಲುವನ್ನು ಸುಲಭವಾಗಿಸಿದರು. ಈ ಪಂದ್ಯದಲ್ಲಿ ಸ್ಮೃತಿ 41 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಸಹಾಯದಿಂದ 87 ರನ್ ಬಾರಿಸಿದರು. ಸ್ಮೃತಿ ಅವರಿಗೆ ಆರೆಂಜ್ ಕ್ಯಾಪ್ ಪಡೆಯಲು ಫೈನಲ್‌ನಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇತ್ತು.
ಸ್ಮೃತಿ ಲೀಗ್ ಉದ್ದಕೂ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಅಲ್ಲದೆ ಆಡಿದ 9 ಪಂದ್ಯಗಳಲ್ಲಿ 53ರ ಸರಾಸರಿಯಲ್ಲಿ 377 ರನ್ ಕಲೆ ಹಾಕುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.
ಲೀಗ್‌ನಲ್ಲಿ ಅತಿ ಹೆಚ್ಚು ರನ್ ಟಾಪ್ 5 ಬ್ಯಾಟರ್ಸ್
ಸ್ಮೃತಿ ಮಂಧಾನ, ಆರ್‌ಸಿಬಿ, 9 ಪಂದ್ಯ, 377 ರನ್
ಹರ್ಮನ್ ಪ್ರಿತ್ ಕೌರ್, ಮುಂಬೈ, 8 ಪಂದ್ಯ, 342 ರನ್
ನ್ಯಾಟ್ ಸ್ಕಿವರ್-ಬ್ರಂಟ್, ಮುಂಬೈ, 7 ಪಂದ್ಯ, 321 ರನ್
ಲೆಜೇಲ್ ಲಿ, ಡೆಲ್ಲಿ ಕ್ಯಾಪಿಟಲ್ಸ್, 10 ಪಂದ್ಯ, 320 ರನ್
ಲಾರಾ ವೋಲ್ವಾರ್ಡ್, ಡೆಲ್ಲಿ ಕ್ಯಾಪಿಟಲ್ಸ್, 10 ಪಂದ್ಯ, 317 ರನ್

ಗುಜರಾತ್ ಜೈಂಟ್ಸ್ ತಂಡದ ಆಟಗಾರ್ತಿ ಸೋಫಿ ಡಿವೈನ್ ಪರ್ಪಲ್ ಕ್ಯಾಪ್ ಪಡೆದರು. ಇವರು ಆಡಿದ 9 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಬೀಗಿದರು. ಇವರ ಹತ್ತಿರದ ಸ್ಪರ್ಧಿ ನಂದಿನಿ ಶರ್ಮಾ ಸಹ ಇಷ್ಟೇ ವಿಕೆಟ್ ಪಡೆದಿದ್ದರು. ಆದರೆ ಸೋಫಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್ಸ್
ಸೋಫಿ ಡಿವೈನ್, ಗುಜರಾತ್, 9 ಪಂದ್ಯ, 17 ವಿಕೆಟ್
ನಂದಿನಿ ಶರ್ಮಾ, ಡೆಲ್ಲಿ, 10 ಪಂದ್ಯ, 17 ವಿಕೆಟ್
ನಾಡಿನ್ ಡಿ ಕ್ಲರ್ಕ್, ಆರ್‌ಸಿಬಿ, 9 ಪಂದ್ಯ, 16 ವಿಕೆಟ್
ಅಮೆಲಿಯಾ ಕೆರ್, ಮುಂಬೈ, 7 ಪಂದ್ಯ, 14 ವಿಕೆಟ್
ಶ್ರೀ ಚರಣಿ, ಡೆಲ್ಲಿ, 10 ಪಂದ್ಯ, 14 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications