WPL 2026: ಆರೆಂಜ್, ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಇರುವುದು ಯಾರು?
ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಲೆಗ್ ಪಂದ್ಯಗಳು ಮುಗಿದಿವೆ. ಈಗ ಎರಡನೇ ಲೆಗ್ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಭಾನುವಾರ ವಿಶ್ರಾಂತಿ ದಿನವಾಗಿದ್ದು, ಸೋಮವಾರದಿಂದ ವಡೋದಾರದಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ನ ಉಳಿದ ಪಂದ್ಯಗಳು ನಡೆಯಲಿವೆ. ಲೀಗ್ ಹಂತದ ಅರ್ಧ ಪಂದ್ಯಗಳಿಗೆ ನವಿ ಮುಂಬೈ ಆತಿಥ್ಯ ನೀಡಿತ್ತು. ಈ ಲೀಗ್‌ನಲ್ಲಿ ಹಲವು ಸ್ಟಾರ್ ಆಟಗಾರರು ತಮ್ಮ ಕ್ಷಮತೆಯನ್ನು ಪ್ರದರ್ಶಿಸಿದ್ದಾರೆ.
4ನೇ ಆವೃತ್ತಿಯ ಲೀಗ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಹಲವು ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಪರ್ಪಲ್ ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್ ಮೇಲೆ ಚಿತ್ತ ನೆಟ್ಟಿರುವ ಆಟಗಾರರ ಬಗ್ಗೆ ವರದಿ ಇಲ್ಲಿದೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಬಾರಿಸಿದ ಆಟಗಾರ್ತಿಯಲ್ಲಿ ವಿದೇಶಿ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಯುಪಿ ವಾರಿಯರ್ಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಅಗ್ರ ಸ್ಥಾನದಲ್ಲಿ ಇದ್ದಾರೆ. ಲೀಗ್‌ನಲ್ಲಿ ಯುಪಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿರಬಹುದು, ಆದರೆ ಫೋಬೆ ಲಿಚ್‌ಫೀಲ್ಡ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ವಿದೇಶಿ ಬ್ಯಾಟರ್ ಅಬ್ಬರ
ಫೋಬೆ ಲಿಚ್‌ಫೀಲ್ಡ್ ಆಡಿದ 5 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 211 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 25 ಬೌಂಡರಿ, 10 ಸಿಕ್ಸರ್ ಸಿಡಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ಫೋಬೆ ಲಿಚ್‌ಫೀಲ್ಡ್ ಹಾಗೂ ಎರಡನೇ ಸ್ಥಾನದಲ್ಲಿರುವ ಹರ್ಮನ್ ಪ್ರೀತ್ ಕೌರ್‌ಗೆ 12 ರನ್ ವ್ಯತ್ಯಾಸವಿದೆ.
ಲೀಗ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ್ತಿಯರ ಪಟ್ಟಿ
ಫೋಬೆ ಲಿಚ್‌ಫೀಲ್ಡ್ (ಯುಪಿ ವಾರಿಯರ್ಸ್), 5 ಪಂದ್ಯ, 211 ರನ್
ಹರ್ಮನ್ ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್), 5 ಪಂದ್ಯ, 199 ರನ್
ಮೆಗ್ ಲ್ಯಾನಿಂಗ್ (ಯುಪಿ ವಾರಿಯರ್ಸ್), 5 ಪಂದ್ಯ, 193 ರನ್
ಲಿಜೆಲ್ ಲೀ (ಡೆಲ್ಲಿ ಕ್ಯಾಪಿಟಲ್ಸ್), 4 ಪಂದ್ಯ, 167 ರನ್
ಸ್ಮೃತಿ ಮಂಧಾನ (ಆರ್‌ಸಿಬಿ), 4 ಪಂದ್ಯ, 166 ರನ್
ಆರ್‌ಸಿಬಿ ಆಟಗಾರರಿಗೂ ಸ್ಥಾನ
ಬ್ಯಾಟರ್‌ಗಳ ಆರ್ಭಟಕ್ಕೆ ಕಡಿವಣಾ ಹಾಕುವಲ್ಲಿ ಬೌಲರ್‌ಗಳು ಸಫಲರಾಗಿದ್ದಾರೆ. ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅಮೆಲಿಯಾ ಕೆರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಆಡಿದ 5 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಗರಿಷ್ಠ ವಿಕೆಟ್ ಪಡೆದ ಐದು ಆಟಗಾರರ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಇಬ್ಬರು ಆಟಗಾರ್ತಿಯರು ಇದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯರು
ಅಮೆಲಿಯಾ ಕೆರ್ (ಮುಂಬೈ ಇಂಡಿಯನ್ಸ್), 5 ಪಂದ್ಯ, 10 ವಿಕೆಟ್
ನಂದೀನಿ ಶರ್ಮಾ (ಡೆಲ್ಲಿ ಕ್ಯಾಪಿಟಲ್ಸ್ ), 4 ಪಂದ್ಯ, 9 ವಿಕೆಟ್
ಲಾರೆನ್ ಬೆಲ್ (ಆರ್‌ಸಿಬಿ), 4 ಪಂದ್ಯ, 8 ವಿಕೆಟ್
ನಾಡಿನ್ ಡಿ ಕ್ಲರ್ಕ್ (ಆರ್‌ಸಿಬಿ), 4 ಪಂದ್ಯ, 8 ವಿಕೆಟ್
ಸೋಫಿ ಡಿವೈನ್ (ಗುಜರಾತ್ ಜೈಂಟ್ಸ್) 4 ಪಂದ್ಯ, 8 ವಿಕೆಟ್

ಲೀಗ್‌ನಲ್ಲಿ ವೇಗವಾಗಿ ರನ್ ಕಲೆ ಹಾಕಿದ ಆಟಗಾರ್ತಿಯರ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಗ್ರೇಸ್ ಹ್ಯಾರಿಸ್ ಅವರಿಗೆ ಮೊದಲ ಸ್ಥಾನ.
ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಟಾಪ್ 5 ಆಟಗಾರ್ತಿಯರು
ಗ್ರೇಸ್ ಹ್ಯಾರಿಸ್ (ಆರ್‌ಸಿಬಿ), 4 ಪಂದ್ಯ, 200 ಸ್ಟ್ರೈಕ್ ರೇಟ್
ಭಾರತಿ ಫುಲ್ಮಾಲಿ (ಗುಜರಾತ್ ಜೈಂಟ್ಸ್), 4 ಪಂದ್ಯ, 191.66 ಸ್ಟ್ರೈಕ್ ರೇಟ್
ಸೋಫಿ ಡಿವೈನ್ (ಗುಜರಾತ್ ಜೈಂಟ್ಸ್), 4 ಪಂದ್ಯ, 191.02 ಸ್ಟ್ರೈಕ್ ರೇಟ್
ಕ್ಲೋಯ್ ಟ್ರಯಾನ್ (ಯುಪಿ ವಾರಿಯರ್ಸ್), 3 ಪಂದ್ಯ, 181.48 ಸ್ಟ್ರೈಕ್ ರೇಟ್
ಸಜೀವನ್ ಸಜನಾ (ಮುಂಬೈ ಇಂಡಿಯನ್ಸ್), 5 ಪಂದ್ಯ, 174.28 ಸ್ಟ್ರೈಕ್ ರೇಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications