For Quick Alerts
ALLOW NOTIFICATIONS  
For Daily Alerts
 

WPL 2026: ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್ 11: ಎಲ್ಲಿಸ್‌ ಪೆರ್ರಿ ಸ್ಥಾನ ತುಂಬಿದ್ಯಾರು?

WPL 2026 RCB: ಡಬ್ಲ್ಯೂಪಿಎಲ್‌ 2026 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ನಡುವೆ ನವಿ ಮುಂಬೈನಲ್ಲಿ ನಡೆಯಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹಾಗಾದ್ರೆ, ಆರ್‌ಸಿಬಿ ಪ್ಲೇಯಿಂಗ್‌ 11 ಹೇಗಿರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್‌ ಹಾಗೂ ಸ್ಮೃತಿ ಮಂಧಾನ ನಾಕತ್ವದ ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ ಜನವರಿ 9ರಂದು ನಡೆಯಲಿದೆ. ಇನ್ನೂ ಇವೆರಡೂ ಕೂಡ ಬಲಿಷ್ಠ ತಂಡಗಳು ಆಗಿದ್ದು, ಈ ಬಾರಿ ಟ್ರೋಫಿ ಗೆಲ್ಲುವ ಸಾಲಿನಲ್ಲಿ ಮುಂಚೂಣಿಯಲ್ಲಿವೆ. ಅದರಲ್ಲೂ ಕಳೆದ ಬಾರಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ ಈ ಬಾರಿ ಟ್ರೊಫಿ ಗೆಲ್ಲಲ್ಲಲೇಬೇಕೆಂಬ ಪಣ ತೊಟ್ಟು ನಿಂತಿದೆ.

WPL 2026 Predicted RCB Playing eleven Opening Match Against Mumbai Indians

ಕಳೆದ ಬಾರಿ ಅಂದರೆ 2025ರಲ್ಲಿ ಟ್ರೋಫಿ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇನ್ನೂ ಆರ್‌ಸಿಬಿ 2024ರಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. ಈ ಬಾರಿ 2026ರಲ್ಲಿ ಚಾಂಪಿಯನ್‌ ಆಗುವ ಭರವಸೆಯಲ್ಲಿದೆ. ಅಷ್ಟರ ಮಟ್ಟಿಗೆ ತಂಡವನ್ನು ಕಟ್ಟಿದೆ. ಹಾಗಾದ್ರೆ, ಮುಂಬೈ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್‌ 11ನಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕೆಲವು ದಿನಗಳ ಹಿಂದೆಯಷ್ಟೇ ಆರ್‌ಸಿಬಿ ಸ್ಟಾರ್ ಆಟಗಾರ್ತಿ ಎಲಿಸ್ ಪೆರ್ರಿ ಡಬ್ಲ್ಯೂಪಿಎಲ್ 2026ರಿಂದ ಹಿಂದೆ ಸರಿದರು. ಪೆರ್ರಿ ವೈಯಕ್ತಿಕ ಕಾರಣಗಳಿಂದ ಡಬ್ಲ್ಯೂಪಿಎಲ್ 2026ರಿಂದ ಹಿಂದೆ ಸರಿದರು. ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇವರ ಬದಲಿಗೆ ಮುಂಬೈನ ಸಯಾಲಿ ಸತ್ಘರೆ ಅವರನ್ನು ಆರ್‌ಸಿಬಿ 30,00,000 ರೂಪಾಯಿಗೆ ಖರೀದಿ ಮಾಡಿತು.

ಆರ್‌ಸಿಬಿ ಮಹಿಳಾ ಪ್ಲೇಯಿಂಗ್‌ 11: ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ದಯಾಲನ್ ಹೇಮಲತಾ, ಗ್ರೇಸ್ ಹ್ಯಾರಿಸ್, ರಿಚಾ ಘೋಷ್ (ವಿಕೆಟ್ ಕೀಪರ್), ನಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಕರ್, ಶ್ರೇಯಂಕಾ ಪಾಟೀಲ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಲಾರೆನ್ ಬೆಲ್.

ಆರ್‌ಸಿಬಿ ಮಹಿಳಾ ತಂಡ: ಸ್ಮೃತಿ ಮಂದಾನ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ಲಾರೆನ್ ಬೆಲ್, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಜಾರ್ಜಿಯಾ ವೋಲ್, ಲಿನ್ಸೆ ಸ್ಮಿತ್, ದಯಾಲನ್ ಹೇಮಲತಾ, ಪ್ರೇಮಾ ರಾವತ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್.

1. ಸ್ಮೃತಿ ಮಂಧಾನ: ನಾಯಕಿ ಸ್ಮೃತಿ ಮಂಧಾನ ಅವರು 2025ರಲ್ಲಿ ಭಾರತದಲ್ಲಿ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ 2026ನೇ ವರ್ಷ ಡಬ್ಲ್ಯೂಪಿಎಲ್‌ಗೆ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಎಲಿಸ್ ಪೆರ್ರಿ ಅನುಪಸ್ಥಿತಿಯಲ್ಲಿ ಅವರು ಇದೀಗ ತಂಡದಲ್ಲಿ ಆಕ್ರಮಣಕಾರಿ ಆಟಗಾರ್ತಿಯಾಗಿದ್ದಾರೆ. ಅವರು ಲೀಗ್ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಖರೀದಿಸಲ್ಪಟ್ಟ ಭಾರತೀಯ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ. ಕಳೆದ 12 ತಿಂಗಳಲ್ಲಿ ಅವರು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗೆಯೇ ಡಬ್ಲ್ಯೂಪಿಎಲ್‌ನಲ್ಲೂ ಕೂಡ ಸ್ಫೋಟಕ ಬ್ಯಾಟ್‌ ಬೀಸಲಿದ್ದಾರೆ ಎಂಬ ಭರವಸೆ ಇಡಲಾಗಿದೆ.

2. ಜಾರ್ಜಿಯಾ ವೋಲ್: ಆರ್‌ಸಿಬಿ ಇವರನ್ನು ಮೆಗಾ ಹರಾಜಿನಲ್ಲಿ 60 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಇವರು ಆರಂಭಿಕ ಸ್ಥಾನ ತುಂಬಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಇತ್ತೀಚೆಗೆ ದೇಶೀಯ ಟಿ-20ಯಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ.

3. ದಯಾಲನ್ ಹೇಮಲತಾ: ಇವರನ್ನು ಮೆಗಾ ಹರಾಜಿನ ವೇಳೆ ಆರ್‌ಸಿಬಿ 30 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. 2025ರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇವರು ಆಲ್‌ರೌಂಡರ್ ಆಗಿದ್ದು, ಟಾಪ್-ಆರ್ಡರ್ ಬ್ಯಾಟ್‌ ಬೀಸಲಿದ್ದಾರೆ.

4. ಗ್ರೇಸ್ ಹ್ಯಾರಿಸ್: ಇವರನ್ನು ಆರ್‌ಸಿಬಿ 75ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲಿದ್ದಾರೆ. ಜೊತೆಗೆ ಬೌಲಿಂಗ್ ಸಹ ಮಾಡುತ್ತಾರೆ.

5. ರಿಚಾ ಘೋಷ್ (ವಿಕೆಟ್ ಕೀಪರ್): ಪ್ರಮುಖ ಫಿನಿಶರ್ ಅಂತಲೇ ಹೆಸರುವಾಸಿ ಆಗಿರುವ ಭಾರತದ ರಿಚಾ ಘೋಷ್‌ ಅವರು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಹಿಂದೆ ಆರ್‌ಸಿಬಿಯಲ್ಲೂ ಸ್ಫೋಟಕ ಬ್ಯಾಟಿಂಗ್‌ ಆಡಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದ್ದಾರೆ. ಈ ಬಾರಿಯೂ ಆರ್‌ಸಿಬಿ ರಿಟೈನ್‌ ಮಾಡಿಕೊಂಡಿದೆ. ಇವರು ಹೊಡಿಬಡಿ ಆಟಗಾರ್ತಿಯಾಗಿದ್ದು, ಜೊತೆಗೆ ಕೀಪಿಂಗ್‌ ಸಹ ಮಾಡುತ್ತಾರೆ.

6. ನಾಡಿನ್ ಡಿ ಕ್ಲರ್ಕ್: ಇವರನ್ನು ಆರ್‌ಸಿಬಿ 65 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಪೆರ್ರಿ ನಿರ್ಗಮನದ ನಂತರ ಈಗ ಅವರ ಸ್ಥಾನವನ್ನು ತುಂಬಲು ಸಜ್ಜಾಗಿದ್ದಾರೆ. ಇವರು ಆಲ್-ರೌಂಡರ್ ಆಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿದ್ದು ಜೊತೆಗೆ ಬೌಲಿಂಗ್‌ ಸಹ ಮಾಡುತ್ತಾರೆ.

7. ಪೂಜಾ ವಸ್ತ್ರಕರ್: ಇವರು ಆಲ್‌ರೌಂಡರ್ ಆಟಗಾರ್ತಿಯಾಗಿದ್ದು, ಬ್ಯಾಟಿಂಗ್‌, ಬೌಲಿಂಗ್ ಸಹ ಮಾಡುತ್ತಾರೆ.

8. ಶ್ರೇಯಾಂಕಾ ಪಾಟೀಲ್: ಆರ್‌ಸಿಬಿ ಮಹಿಳಾ ತಂಡ ಶ್ರೇಯಾಂಕಾ ಪಾಟೀಲ್ ಅವರನ್ನು 60 ಲಕ್ಷ ರೂಪಾಯಿ ನೀಡಿ ರಿಟೇನ್ ಮಾಡಿಕೊಂಡಿದೆ. ಇವರು ಬ್ಯಾಟಿಂಗ್‌ ಜಿತೆ ಬೌಲಿಂಗ್‌ನಲ್ಲೂ ಸಹ ಮೋಡಿ ಮಾಡಲಿದ್ದಾರೆ. ಈ ಮೂಲಕ ಎದುರಾಳಿ ಬ್ಯಾಟರ್‌ಗನ್ನು ಕಡಿಮೆ ರನ್‌ಗಳಿಗೆ ಕಟ್ಟಿಹಾಕುವ ಕೆಲಸವನ್ನು ಮಾಡುತ್ತಾರೆ.

9. ರಾಧಾ ಯಾದವ್: 2026ರ ಮಹಿಳಾ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ರಾಧಾ ಯಾದವ್ ಅವರನ್ನು 65 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದೆ. ಕಳೆದ ಮೂರು ಸೀಸನ್​ಗಳಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡಿದ್ದ ಅವರು ಈಗ ಆರ್‌ಸಿಬಿ ಪರ ಕಣಕ್ಕಿಯಲಿದ್ದಾರೆ. ಇವರು ಎಡಗೈ ಲೆಗ್ ಸ್ಪಿನ್ ಬೌಲರ್ ಆಗಿದ್ದಾರೆ.

10. ಅರುಂಧತಿ ರೆಡ್ಡಿ: ಇವರನ್ನು ಆರ್‌ಸಿಬಿ 75 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಯಾರ್ಕರ್‌ಗೆ ಹೆಸರುವಾಸಿಯಾದ ಅವರು ಡಬ್ಲ್ಯೂಪಿಎಲ್‌ನಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಾಡುವುದಂತೂ ಪಕ್ಕಾ.

11. ಲಾರೆನ್ ಬೆಲ್: ಇವರನ್ನು ಆರ್‌ಸಿಬಿ 90 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಈ ಮೂಲಕ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾದ ಆಟಗಾರ್ತಿಯಾಗಿದ್ದಾರೆ. ಇನ್ನೂ ಇವರು ಕಳೆದ ಕೆಲವು ತಿಂಗಳುಗಳ ಹಿಂದೆ ಯುವಕರ ಮನಸ್ಸನ್ನ ಕದ್ದ ಪೋರಿಯೂ ಆಗಿದ್ದಾರೆ. ಈ ಕುರಿತು ಇವರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಜೊತೆಗೆ ಅವರ ಬೌಲಿಂಗ್‌ಗೆ ಫಿಧಾ ಅದವರು ಅದೆಷ್ಟೋ ಜನ ಇದ್ದಾರೆ.

ಇದೇ ಜನವರಿ 9ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಗಳು ಉದ್ಘಾಟನಾ ಪಂದ್ಯವನ್ನು ಆಡಲಿವೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Story first published: Tuesday, January 6, 2026, 16:40 [IST]
Other articles published on Jan 6, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+