WPL 2026: ಗುಜರಾತ್ ಗೆಲುವಿಗೆ 183 ರನ್ ಗುರಿ ನೀಡಿದ ಆರ್‌ಸಿಬಿ
ನವಿ ಮುಂಬೈ: ಸ್ಟಾರ್ ಆಲ್‌ರೌಂಡರ್ ರಾಧಾ ಯಾದವ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅವರು ಬಾರಿಸಿದ ಭರ್ಜರಿ ಜೊತೆಯಾಟದ ನೆರವಿನಿಂದ ಆರ್‌ಸಿಬಿ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ 183 ರನ್‌ಗಳ ಗುರಿಯನ್ನು ಗುಜರಾತ್ ಜೈಂಟ್ಸ್ ತಂಡಕ್ಕೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಭರ್ಜರಿ ಯಾಗಿತ್ತು. ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರೀಸ್ ಮೊದಲ ಓವರ್‌ನಲ್ಲಿ23 ರನ್ ಸಿಡಿಸಿದರು. ಮಾಜಿ ಆರ್‌ಸಿಬಿ ಆಟಗಾರ್ತಿ ರೇಣುಕಾ ಸಿಂಗ್ ಠಾಕೂರ್ ಓವರ್‌ನಲ್ಲಿ 23 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಇತಿಹಾಸ ನಿರ್ಮಿಸಿದರು. ಗ್ರೇಸ್ ಹ್ಯಾರಿಸ್ 17, ಸ್ಮೃತಿ ಮಂಧಾನ 5, ದಯಾಳನ್ ಹೇಮಲತಾ 4, ಗೌತಮಿ ನಾಯಕ್ 9 ರನ್ ಸಿಡಿಸಿ ಔಟ್ ಆದರು. ಮೊದಲ ಓವರ್‌ನಲ್ಲಿ 23 ರನ್ ಬಾರಿಸಿದ್ದ ಆರ್‌ಸಿಬಿ ಬ್ಯಾಟರ್ಸ್ ಬಳಿಕ ರನ್ ಕಲೆ ಹಾಕುವಲ್ಲಿ ವಿಫಲರಾದರು.

43 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ ತಂಡಕ್ಕೆ ರಾಧಾ ಯಾದವ್ ಹಾಗೂ ರಿಚಾ ಘೋಷ್ ಭರ್ಜರಿ ಜೊತೆಯಾಟವನ್ನು ನೀಡಿದರು. ಈ ಜೋಡಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಯಿತು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಆಡಿದ ಜೋಡಿ ಬಳಿಕ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲವಾಯಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಗುಜರಾತ್ ಜೈಂಟ್ಸ್ ತಂಡ ವಿಫಲವಾಯಿತು. ಬೌಲರ್‌ಗಳ ತಂತ್ರವನ್ನು ಅರಿತು ಬ್ಯಾಟ್ ಮಾಡಿದ ಆರ್‌ಸಿಬಿ ಬ್ಯಾಟರ್ ಅಬ್ಬರಿಸಿದರು. ಈ ಜೋಡಿ ತಂಡ ಅಂದುಕೊಂಡಿದ್ದ ರನ್‌ಗಳನ್ನು ಕಲೆ ಹಾಕುವಲ್ಲಿ ಸಫಲರಾದರು.
5ನೇ ವಿಕೆಟ್‌ಗೆ ರಾಧಾ ಯಾದವ್ ಹಾಗೂ ರಿಚಾ ಘೋಷ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 66 ಎಸೆತಗಳಲ್ಲಿ 105 ರನ್ ಸೇರಿಸಿತು. ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. '
ರಾಧಾ ಯಾದವ್ ಅಬ್ಬರ
ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಾಧಾ ಯಾದವ್ 47 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ 66 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ನಾಡಿನ್ ಡಿ ಕ್ಲರ್ಕ್ 26 ರನ್ ಸಿಡಿಸಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 182 ರನ್ ಸಿಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications