Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026 RCB: ರನ್‌ ನೀಡುವಲ್ಲಿ ಸುರ ಸುಂದರಿ ಬಲು ಜಿಪುಣೆ

ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಬಾರಿ ಲೀಗ್‌ನ ಪಂದ್ಯಗಳನ್ನು ನವಿ ಮುಂಬೈ ಹಾಗೂ ವಡೋದರಾದಲ್ಲಿ ನಡೆಸಲಾಗುತ್ತಿದೆ. ನವಿ ಮುಂಬೈನಲ್ಲಿ ಈಗ ಮೊದಲ ಲೆಗ್‌ ಪಂದ್ಯಗಳು ನಡೆಯುತ್ತಿವೆ. ಈ ವೇಳೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಸ್ಥಿರ ಪ್ರದರ್ಶನ ನೀಡುತ್ತಿದೆ. ಆರ್‌ಸಿಬಿ ಈಗ ಆಡಿರುವ ಎರಡೂ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ. ಈ ವೇಳೆ ಎಲ್ಲರ ಗಮನ ಸೆಳೆದ ಆಟಗಾರ್ತಿ ಆರ್‌ಸಿಬಿ ಸುಂದರಿ ಲಾರೆನ್ ಬೆಲ್ (Lauren Bell).

ಆರ್‌ಸಿಬಿ ಈ ಲೀಗ್‌ನಲ್ಲಿ ಎರಡು ಪಂದ್ಯಗಳನ್ನು ಆಡಿದೆ. ಈ ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ಲಾರೆನ್ ಬೆಲ್ ಅವರಿಗೆ ಅವಕಾಶ ನೀಡಲಾಗಿದೆ. ಇವರು ಆಡಿದ ಎರಡೂ ಪಂದ್ಯಗಳಲ್ಲಿ ಪ್ರಭಾವ ಬೀರಿದ್ದಾರೆ. ಪವರ್‌ ಪ್ಲೇನಲ್ಲಿ ಬೌಲಿಂಗ್ ಮಾಡುವ ಲಾರೆನ್ ಬೆಲ್ ಎದುರಾಳಿಗಳಿಗೆ ಬಹುವಾಗಿ ಕಾಡಿದ್ದಾರೆ. ಸೋಮವಾರ ಯುಪಿ ವಿರುದ್ಧದ ಪಂದ್ಯದಲ್ಲೂ ಲಾರೆನ್ ಬೆಲ್ ಬಿಗುವಿನ ದಾಳಿ ನಡೆಸಿದರು. ಇವರು 4 ಓವರ್ ಬೌಲಿಂಗ್ ನಡೆಸಿ ಜಸ್ಟ್‌ 16 ರನ್‌ಗಳನ್ನು ನೀಡಿ 1 ವಿಕೆಟ್‌ ಕಬಳಿಸಿದರು. ಅಲ್ಲದೆ 15 ಡಾಟ್‌ ಬಾಲ್‌ಗಳನ್ನು ಸಹ ಮಾಡಿದ್ದಾರೆ.

WPL 2026 RCB s Lauren Bell Shines with Economical Bowling Spells in Early Matches

ಸುಂದರಿ ಲಾರೆನ್ ಬೆಲ್

ಉದ್ಘಾಟನಾ ಪಂದ್ಯದಲ್ಲೂ ಲಾರೆನ್ ಬೆಲ್ ಶಿಸ್ತು ಬದ್ಧ ದಾಳಿ ಸಂಘಟಿಸಿದರು. ಮುಂಬೈ ವಿರುದ್ಧ ಪಂದ್ಯದಲ್ಲಿ ಬೆಲ್ 4 ಓವರ್‌ ಬೌಲಿಂಗ್ ಮಾಡಿ 14 ರನ್‌ ನೀಡಿ 1 ವಿಕೆಟ್‌ ಪಡೆದರು. ಈ ವೇಳೆ ಇವರು ಒಂದು ಮೇಡನ್‌ ಸಹ ಮಾಡಿದರು. ಈ ಪಂದ್ಯದಲ್ಲಿ ಇವರು 19 ಡಾಟ್‌ ಬೌಲ್‌ಗಳನ್ನು ಎಸೆದಿದ್ದಾರೆ.

ಮಹಿಳಾ ಪ್ರೀಮಿಯರ್‌ ಲೀಗ್‌ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡ ಬೆಲ್ ಅವರನ್ನು ಖರೀದಿಸುತ್ತಿದ್ದಂತೆ ಇವರು ಸುದ್ದಿಯಾದರು. ಇಂಗ್ಲೆಂಡ್‌ ಪರ ಈಗಾಗಲೇ ಮೂರು ಮಾದರಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 25 ವರ್ಷದ ಯುವ ವೇಗಿ ಭರವಸೆ ಮೂಡಿಸಿದ್ದಾರೆ. ಈಗಾಗಲೇ ಇವರು ಅಂತಾರಾಷ್ಟ್ರೀಯ 100ಕ್ಕೂ ಹೆಚ್ಚು ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ. ಈಗ ಇವರು ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಬೌಲಿಂಗ್ ಮಾಡುತ್ತಿದ್ದಾರೆ.

WPL 2026 RCB s Lauren Bell Shines with Economical Bowling Spells in Early Matches

ಪವರ್‌ ಪ್ಲೇನಲ್ಲಿ ಬೆಲ್‌ ಚೆಂಡನ್ನು ಹಿಡಿದು ಓಡುತ್ತಾ ಬಂದರೆ, ಎದುರಾಳಿ ಬ್ಯಾಟರ್‌ಗಳಲ್ಲಿ ನಡುಕ ಆರಂಭವಾಗುತ್ತದೆ. ಇವರ ಪರ್ಫೆಕ್ಟ್ ಲೈನ್ ಹಾಗೂ ಲೆಂಥ್‌ಗೆ ಉತ್ತರಿಸುವಲ್ಲಿ ಸ್ಟಾರ್ ಬ್ಯಾಟರ್‌ಗಳು ವಿಫಲರಾಗುತ್ತಾರೆ. ಇವರು ಆಡಿದ 2 ಪಂದ್ಯಗಳಲ್ಲಿ 2 ವಿಕೆಟ್‌ ಪಡೆದಿದ್ದು, 3.75ರ ಎಕಾನಮಿ ಹೊಂದಿದ್ದಾರೆ.

ಸುಂದರವಾಗಿರುವ ಲಾರೆನ್ ಬೆಲ್ ಆರ್‌ಸಿಬಿ ಅಭಿಮಾನಿಗಳ ಫೆವರಿಟ್‌ ಪ್ಲೇಯರ್ ಆಗುತ್ತಿದ್ದಾರೆ. ಇವರು ಎದುರಾಳಿ ರನ್‌ ದಾಹಕ್ಕೆ ಕಡಿವಾಣ ಹಾಕುತ್ತಾ ಸಾಗಿದ್ದಾರೆ. ಇದೇ ಪ್ರದರ್ಶನವನ್ನು ಇವರು ಮುಂದುವರಿಸಿ ಆರ್‌ಸಿಬಿ ಮತ್ತೊಮ್ಮೆ ಕಪ್‌ ಗೆಲ್ಲುವಲ್ಲಿ ಕಾಣಿಕೆ ನೀಡಲಿ ಎಂಬುದೇ ಅಭಿಮಾನಿಗಳ ಆಶಯ.

Story first published: Tuesday, January 13, 2026, 8:10 [IST]
Other articles published on Jan 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+