For Quick Alerts
ALLOW NOTIFICATIONS  
For Daily Alerts
 

WPL 2026 ಸಮರಕ್ಕೆ RCB ಸಜ್ಜು: ಮೂರನೇ ಕ್ರಮಾಂಕವೇ ತಂಡದ ಚಿಂತೆ

ಜನವರಿ 9 ರಿಂದ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇರಿದಂತೆ ಒಟ್ಟು 5 ತಂಡಗಳು ಭಾಗವಹಿಸಲಿವೆ. ಮಾಜಿ ಚಾಂಪಿಯನ್‌ ಆರ್‌ಸಿಬಿ ಎರಡನೇ ಬಾರಿ ಕಪ್‌ ಗೆಲ್ಲುವ ಆಸೆಯನ್ನು ಹೊಂದಿದೆ. ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಆದರೆ ಅನುಭವಿ ಆಟಗಾರ್ತಿಯರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ. ಹಾಗಿದ್ದರೆ ಈ ಬಾರಿ ಆರ್‌ಸಿಬಿ ಬಲ ಹಾಗೂ ವೀಕ್ನೆಸ್‌ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಇವರು ತಂಡಕ್ಕೆ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದ ಆಧಾರವಾಗಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಆರ್‌ಸಿಬಿ ತಂಡದ ಬ್ಯಾಟಿಂಗ್ ಬಲಾಢ್ಯವಾಗಿದೆ. ತಂಡದ ನಾಯಕಿ ಸ್ಮೃತಿ ಮಂಧಾನ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಟಾಪ್‌ ಆರ್ಡರ್‌ನಲ್ಲಿ ತಂಡಕ್ಕೆ ಬಲ ತುಂಬಬಲ್ಲ ಆಟಗಾರ್ತಿ. ಈ ಬಾರಿ ಇವರೊಂದಿಗೆ ಜಾರ್ಜಿಯಾ ವೋಲ್ ಸಹ ಇನಿಂಗ್ಸ್‌ ಆರಂಭಿಸುವುದನ್ನು ನಾವು ನೋಡಬಹುದು. ತಂಡಕ್ಕೆ ಎಡಗೈ ಹಾಗೂ ಬಲಗೈ ಬ್ಯಾಟರ್‌ಗಳು ಆಧಾರವಾಗಬಲ್ಲರು.

WPL 2026 RCB Strengths and Weaknesses Will Ellyse Perry s Absence Affect the Defending Champs

ಆರ್‌ಸಿಬಿ ತಂಡದ ಮಿಡ್ಲ್‌ ಆರ್ಡರ್‌ನಲ್ಲಿ ಸ್ಟಾರ್ ಫಿನಿಷರ್‌ಗಳ ದಂಡೇ ಇದೆ. ನಾಲ್ಕನೇ ಕ್ರಮಾಂಕದಲ್ಲಿ ವಿಕೆಟ್‌ ಕೀಪರ್ ಬ್ಯಾಟರ್ ರಿಚಾ ಘೋಷ್‌ ಆಡುವುದು ಪಕ್ಕಾ. ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಗ್ರೇಸ್ ಹ್ಯಾರಿಸ್ ಮತ್ತು ದಕ್ಷಿಣ ಆಫ್ರಿಕಾದ ನಾಡಿನ್ ಡಿ ಕ್ಲರ್ಕ್ ಉತ್ತಮ ಸಾಥ್ ನೀಡಬಲ್ಲರು. ಈ ಇಬ್ಬರೂ ಆಟಗಾರ್ತಿಯರು ಪವರ್ ಹಿಟ್ಟರ್ ಆಗಿದ್ದು ತಂಡಕ್ಕೆ ಬಲ ತುಂಬ ಬಲ್ಲರು. ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ನಾಡಿನ್ ಡಿ ಕ್ಲರ್ಕ್ ಭರ್ಜರಿ ಹೊಡೆತಗಳ ಮೂಲಕ ಗಮನ ಸೆಳೆದಿದ್ದರು.

ಆರ್‌ಸಿಬಿ ತಂಡದ ವೇಗದ ಬೌಲಿಂಗ್‌ ಹಾಗೂ ಸ್ಪಿನ್ ಬೌಲಿಂಗ್‌ ಉತ್ತಮವಾಗಿದೆ. ಈ ಎರಡೂ ಹೋಲಿಸಿದಾಗ ಸ್ಪಿನ್ ಬೌಲರ್‌ಗಳ ಕೈ ಕೊಂಚ ಮೇಲೆ ಕಾಣುತ್ತದೆ. ಆಫ್‌ ಸ್ಪಿನ್ ಬೌಲರ್‌ ರೂಪದಲ್ಲಿ ಶ್ರೇಯಾಂಕಾ ಪಾಟೀಲ್ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಆಟಗಾರ್ತಿ ಪ್ರೇಮಾ ರಾವತ್ ಸಹ ಲೆಗ್‌ ಸ್ಪಿನ್ ಮೂಲಕ ಎದುರಾಳಿಗಳ ನಿದ್ದೆ ಕೆಡಿಸಬಲ್ಲರು. ರಾಧಾ ಯಾದವ್ ಸಹ ಸ್ಪಿನ್ ಜಾದು ಮೂಲಕ ಕಾಡಬಲ್ಲರು. ಎಡಗೈ ಸ್ಪಿನ್ ಬೌಲರ್ ಲಿನ್ಸೆ ಸ್ಮಿತ್ ಅವರ ಸಹ ತಂಡದಲ್ಲಿದ್ದು, ಸ್ಪಿನ್ ಬೌಲಿಂಗ್‌ ಬಲಿಷ್ಠವಾಗಿದೆ.

WPL 2026 RCB Strengths and Weaknesses Will Ellyse Perry s Absence Affect the Defending Champs

ಪೆರ್ರಿ ಅನುಪಸ್ಥಿತಿ ಆರ್‌ಸಿಬಿಗೆ ಕಾಡಲಿದೆ

ನಿಜಕ್ಕೂ ಆರ್‌ಸಿಬಿ ತಂಡಕ್ಕೆ ಆಸ್ಟ್ರೇಲಿಯಾದ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರ ಅನುಪಸ್ಥಿತಿ ಬಹುವಾಗಿ ಕಾಡಲಿದೆ. ಇವರು ಇತ್ತೀಚಿಗೆ ಲೀಗ್‌ನಿಂದ ಹೊರಗೆ ಉಳಿಯುವುದಾಗಿ ಘೋಷಿಸಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಿದ್ದ ಆಟಗಾರ್ತಿ. ಮೂರನೇ ಕ್ರಮಾಂಕಕ್ಕೆ ನ್ಯಾಯ ಒದಗಿಸಿದ್ದ ಪ್ಲೇಯರ್‌ ಪೆರ್ರಿ, ಅನುಪಸ್ಥಿತಿ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇವರು ಎದುರಾಳಿ ಬೌಲರ್‌ಗಳನ್ನು ಕಾಡುವ ಪ್ಲೇಯರ್ ಆಗಿದ್ದರು. ಈ ಹಿಂದಿನ ಆವೃತ್ತಿಗಳಲ್ಲೂ ಇವರು ತಮ್ಮ ಧಮಾಕೆದಾರ್ ಪ್ರದರ್ಶನದ ಬಲದಿಂದ ತಂಡಕ್ಕೆ ಆಧಾರವಾಗಿದ್ದರು. ಮೂರನೇ ಕ್ರಮಾಂಕದಲ್ಲಿ ಯಾರನ್ನು ಆರ್‌ಸಿಬಿ ಕಣಕ್ಕೆ ಇಳಿಸಲಿದೆ ಎಂಬುದೇ ದೊಡ್ಡ ಚಿಂತೆ ಆಗಿದೆ.

ಆರ್‌ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್ (ವಿಕೆಟ್‌ ಕೀಪರ್), ಸಯಾಲಿ ಸತ್‌ಘರೆ, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯ್ಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ.

Story first published: Wednesday, January 7, 2026, 8:11 [IST]
Other articles published on Jan 7, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+