Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಮುಂಬೈ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ

ನಾಲ್ಕನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌ಗೆ ಶುಕ್ರವಾರ (ಜ.9) ರಂದು ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ಸ್ಮೃತಿ ಮಂಧಾನ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ನವಿ ಮುಂಬೈನ ಡಿವೈ ಪಾಟೀಲ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯವನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತವರು ಅಂಗಳ ಹಾಗೂ ವಡೋದರಾ ಮೈದಾನದಲ್ಲಿ ಲೀಗ್ ನಡೆಯಲಿದೆ. ಒಟ್ಟು 22 ಪಂದ್ಯಗಳು ಲೀಗ್‌ನಲ್ಲಿ ನಡೆಯಲಿದ್ದು, ಒಟ್ಟು ಐದು ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಟ ನಡೆಸಲಿವೆ. ಮೊದಲ ಪಂದ್ಯದಲ್ಲಿ ಹರ್ಮನ್ ಪ್ರೀತ್‌ ಕೌರ್ ಹಾಗೂ ಸ್ಮೃತಿ ಮಂಧಾನ ಮುಖಾಮುಖಿ ಆಗಲಿದ್ದು ಎಲ್ಲರ ಗಮನ ಸೆಳೆದಿದೆ.

WPL 2026 RCB vs Mumbai Indians in Opener Smriti Mandhana Wins Toss and Elects to Bowl First

ಮಹಿಳಾ ಪ್ರೀಮಿಯರ್‌ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಟಾಸ್‌ ನಿಗದಿತ ಸಮಯಕ್ಕಿಂತ 15 ನಿಮಿಷ ಮೊದಲೆ ನಡೆಯಲಿತು. ಟಾಸ್‌ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಮಾಡಲು ಮುಂದಾಯಿತು. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು, ಈ ಪಂದ್ಯ ಎಲ್ಲರ ಚಿತ್ತ ಕದ್ದಿದೆ. ಟಾಸ್‌ ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು. ಮನೋರಂಜನಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್‌ ತಮ್ಮ ಹಿಟ್‌ ಹಾಡುಗಳನ್ನು ಹಾಡಿದರು. ಇವರ ಹಾಡಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು.

ಫೀಲ್ಡಿಂಗ್ ಆಯ್ಕೆ ಮಾಡಿದ್ದು ಏಕೆ?

ಟಾಸ್‌ ವೇಳೆ ಮಾತನಾಡಿದ ಸ್ಮೃತಿ ಮಂಧಾನ, ಇಬ್ಬನಿ ಎರಡನೇ ಇನಿಂಗ್ಸ್‌ನಲ್ಲಿ ಬೀಳುವ ಸಾಧ್ಯತೆ ಇದೆ. ಈ ಮೈದಾನದಲ್ಲಿ ಚೇಸ್‌ ಮಾಡಲು ಇಷ್ಟ. ಆರ್‌ಸಿಬಿ ಪರ ಗ್ರೇಸ್ ಹ್ಯಾರಿಸ್‌, ನಾಡಿನ್ ಡಿ ಕ್ಲರ್ಕ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್ ವಿದೇಶಿ ಆಟಗಾರರಿಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಡಿ ಹೇಮಲತಾ, ರಿಚಾ ಘೋಷ್, ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಪ್ರೇಮಾ ರಾವತ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್.

ಮುಂಬೈ ಇಂಡಿಯನ್ಸ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜಿ ಕಮಲಿನಿ, ನ್ಯಾಟ್ ಸೈವರ್-ಬ್ರಂಟ್, ಅಮೆಲಿಯಾ ಕೆರ್, ಅಮನ್ಜೋತ್ ಕೌರ್, ನಿಕೋಲಾ ಕ್ಯಾರಿ, ಪೂನಂ ಖೇಮ್ನರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ, ಎಸ್ ಸಜನ, ಸೈಕಾ ಇಶಾಕ್.

Story first published: Friday, January 9, 2026, 19:05 [IST]
Other articles published on Jan 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+