RCB ಎರಡನೇ ಬಾರಿ WPL ಪ್ರಶಸ್ತಿ ಪಡೆಯಲು ಬೇಕು ಒಂದೇ ಗೆಲುವು WPL 2026 Final
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ಪ್ರೀಮಿಯರ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದಿದೆ. ಲೀಗ್ ಉದ್ದಕ್ಕೂ ಭರ್ಜರಿ ಆಟದ ಪ್ರದರ್ಶನ ನೀಡಿದ ಆರ್‌ಸಿಬಿ ಎರಡನೇ ಬಾರಿಗೆ ಪಟ್ಟವನ್ನು ಎತ್ತುವ ಕನಸು ಕಾಣುತ್ತಿದೆ. ಈ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸುವ ಕನಸು ಹೊಂದಿದೆ. 2024ರಲ್ಲಿ ಚೊಚ್ಚಲ ಬಾರಿಗೆ ಡಬ್ಲ್ಯೂಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದ ಸ್ಮೃತಿ ಪಡೆ, ಮತ್ತೊಮ್ಮೆ ಆ ಖುಷಿಯ ಕ್ಷಣವನ್ನು ಸಂಭ್ರಮಿಸಲು ತುದಿಗಾಲಿನಲ್ಲಿ ನಿಂತಿದೆ. ಗುರುವಾರ ಪಂದ್ಯ ಗೆದ್ದು ಡಬ್ಲ್ಯೂಪಿಎಲ್ ನಲ್ಲಿ ಪ್ರಶಸ್ತಿಯನ್ನು ಎರಡನೇ ಬಾರಿಗೆ ಗೆದ್ದ ಎರಡನೇ ತಂಡ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲಿದೆ.
ಆರ್‌ಸಿಬಿ ಅಭಿಮಾನಿಗಳು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ಆರ್‌ಸಿಬಿ ಕಪ್ ಗೆಲುವಿನ ಅಭಿಯಾನವನ್ನು ಆರಂಭಿಸಿದ್ದ ವನಿತೆಯರು ಮತ್ತೊಮ್ಮೆ ಅದೇ ಸಾಧನೆ ಮಾಡುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ. ಲೀಗ್‌ನಲ್ಲಿ ರೆಡ್ ಆರ್ಮಿ ನೀಡಿರುವ ಪ್ರದರ್ಶನ ನಿಜಕ್ಕೂ ಎಲ್ಲರಿಗೂ ಖುಷಿ ನೀಡಿದೆ. ಅನುಭವಿ ಹಾಗೂ ಯುವ ಆಟಗಾರ್ತಿಯರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಟವಾಡಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಟ್ರೋಫಿಯನ್ನು ಎರಡು ಬಾರಿ ಎತ್ತಿರುವ ಹೆಗ್ಗಳಿಕೆ ಮುಂಬೈ ತಂಡದ್ದಾಗಿದೆ. ಹರ್ಮನ್ ಪ್ರೀತ್ ಪಡೆ 2022-23, 2024-25ರಲ್ಲಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಇನ್ನು ಆರ್‌ಸಿಬಿ 2023-24ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಹೀಗಾಗಿ ಎರಡನೇ ಬಾರಿ ಟ್ರೋಫಿ ಎತ್ತುವ ಆಸೆ ಶುರುವಾಗಿದೆ.
ಕಪ್ ಎತ್ತುವ ಕನಸು
ಆರ್‌ಸಿಬಿ ತಂಡದ ಸ್ಟಾರ್ ಆಟಗಾರ್ತಿಯರು ತಮ್ಮ ಜವಾಬ್ದಾರಿಯನ್ನು ಅರಿತು ಆಡುತ್ತಿದ್ದಾರೆ. ಆರಂಭಿಕರಾಗಿ ಸ್ಮೃತಿ ಎಚ್ಚರಿಕೆಯ ಆಟಕ್ಕೆ ಮಣೆ ಹಾಕಿದರೆ, ಗ್ರೇಸ್ ಹ್ಯಾರಿಸ್ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡುತ್ತಾರೆ. ಮಧ್ಯಮ ಕ್ರಮಾಂಕದಲ್ಲಿ ಬರುವ ಆಟಗಾರ್ತಿಯರು ತಂಡದ ಅವಶ್ಯಕತೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಾರೆ. ತಂಡದಲ್ಲಿ ಸ್ಟಾರ್ ಫಿನಿಷರ್‌ಗಳ ದಂಡೇ ಇದೆ. ಡೆತ್ ಓವರ್‌ಗಳಲ್ಲಿ ಎದುರಾಳಿ ಬೌಲರ್‌ಗಳನ್ನು ರಿಚಾ ಘೋಷ್ ಕಾಡಬಲ್ಲರು. ಭರವಸೆಯ ಆಲ್‌ರೌಂಡರ್ ನಾಡಿನ್ ಡಿ ಕ್ಲರ್ಕ್ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಲಿದ್ದಾರೆ. ಈ ಆಟಗಾರ್ತಿಯರು ತಮ್ಮ ಮೇಲಿನ ಜವಾಬ್ದಾರಿಯನ್ನು ಅರಿತು ಆಡಿದಲ್ಲಿ ಆರ್‌ಸಿಬಿ ಎರಡನೇ ಬಾರಿ ಕಪ್ ಗೆಲ್ಲುವ ಕನಸು ನನಸಾಗುತ್ತದೆ.
ಭಾರತದಲ್ಲಿ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ನಾಡಿನ್ ಡಿ ಕ್ಲರ್ಕ್ ಇದೇ ಪ್ರದರ್ಶನವನ್ನು ಡಬ್ಲ್ಯೂಪಿಎಲ್‌ನಲ್ಲೂ ಮುಂದುವರೆಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡಕ್ಕೆ ನೆರವಾಗಿರುವ ಇವರು ತಂಡ ಎರಡನೇ ಬಾರಿಗೆ ಕಪ್ ಗೆಲುವಿನ ಆಸೆಯನ್ನು ಚಿಗುರಿಸಿದ್ದಾರೆ. ಇನ್ನು ವೇಗಿ ಲಾರೆನ್ ಬೆಲ್ ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಗಳನ್ನು ಕಾಡಿದ್ದು, ಇವರ ಎಸೆತಗಳನ್ನು ಮುಟ್ಟಲು ಬ್ಯಾಟರ್‌ಗಳು ಹೆಣಗಾಟ ನಡೆಸುತ್ತಿದ್ದಾರೆ. ಮಿಡ್ಲ್ ಓವರ್‌ಗಳಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸ್ಪಿನ್ ಜಾದು ನಡೆಸುತ್ತಿದ್ದಾರೆ. ಮತ್ತೊಮ್ಮೆ ಈ ಆಟಗಾರ್ತಿಯರು ಅಬ್ಬರ ನಡೆಸಿದರೆ, ಈ ಬಾರಿ ಕಪ್ ನಮ್ದೇ ಎನ್ನಲ್ಲು ಇನ್ನೊಂದು ಗೆಲುವು ಬೇಕು ಅಷ್ಟೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications