Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL Auction 2026: RCB ಖರೀದಿಸಿದ ಆಟಗಾರ್ತಿಯರು ಯಾರು? ನೀಡಿದ ಹಣವೆಷ್ಟು?

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್‌ ಹರಾಜಿನಲ್ಲಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಸ್ಟಾರ್ ಆಟಗಾರ್ತಿಯರಿಗೆ ಆರ್‌ಸಿಬಿ ಹಣ ಹೂಡಿದೆ. ಈಗಾಗಲೇ ಒಂದು ಬಾರಿ ಡಬ್ಲ್ಯೂಪಿಎಲ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವ ಆರ್‌ಸಿಬಿ, ಎರಡನೇ ಬಾರಿಗೆ ಪ್ರಶಸ್ತಿ ಎತ್ತಲು ಬೇಕಾದ ತಯಾರಿಯನ್ನು ಮಾಡಿಕೊಂಡಿದೆ.

ಆರ್‌ಸಿಬಿ 4 ಆಟಗಾರ್ತಿಯರನ್ನು ರಿಟೇನ್‌ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ತಂಡದ ನಾಯಕಿ ಸ್ಮೃತಿ ಮಧಾನ ಅವರಿಗೆ 3.5 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್‌ ರಿಚಾ ಘೋಷ್‌ ಅವರಿಗೆ 2.75 ಕೋಟಿ ನೀಡಿದ ರೆಡ್ ಆರ್ಮಿ ಮತ್ತೊಮ್ಮೆ ತಮ್ಮ ತಂಡದ ಪರ ಆಡಲು ಹೇಳಿದೆ. ಇನ್ನು ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ ಅವರಿಗೆ 2 ಕೋಟಿ ರೂ. ನೀಡಿದರೆ, ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅವರಿಗೆ ಆರ್‌ಸಿಬಿ 60 ಲಕ್ಷ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.

WPL 2026 Royal Challengers Bengaluru s Auction Buys Full List of Players and Their Prices

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ್ದ ಪ್ರೇಮಾ ರಾವತ್‌ ಅವರನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಇವರಿಗೆ ಗುಜರಾತ್ ಹಣ ಹೂಡಿತ್ತು. ಆದರೆ ಆರ್‌ಸಿಬಿ ತನ್ನ ಬಳಿ ಇದ್ದ ಬ್ರಹ್ಮಾಸ್ತ್ರ ಬಳಸಿ ಪ್ರೇಮಾ ಅವರಿಗೆ ಮತ್ತೆ ತಮ್ಮ ತಂಡಕ್ಕೆ ಬರ ಮಾಡಿಕೊಂಡಿದೆ. ಆರ್‌ಸಿಬಿ ಹರಾಜಿನಲ್ಲಿ ಕೊಂಡ ಆಟಗಾರ್ತಿಯರ ಪಟ್ಟಿ ಇಲ್ಲಿದೆ.

ಹರಾಜಿನಲ್ಲಿ ಆರ್‌ಸಿಬಿ ಕೊಂಡ ಆಟಗಾರ್ತಿಯರು

ಲಾರೆನ್ ಬೆಲ್, ₹90 ಲಕ್ಷ
ಪೂಜಾ ವಸ್ತ್ರಾಕರ, ₹ 85 ಲಕ್ಷ
ಅರುಂಧತಿ ರೆಡ್ಡಿ, ₹75 ಲಕ್ಷ
ಗ್ರೇಸ್ ಹ್ಯಾರಿಸ್, ₹75 ಲಕ್ಷ
ನಾಡಿನ್ ಡಿ ಕ್ಲರ್ಕ್, ₹65 ಲಕ್ಷ
ರಾಧಾ ಯಾದವ್, ₹65 ಲಕ್ಷ
ಜಾರ್ಜಿಯಾ ವೋಲ್‌, ₹60 ಲಕ್ಷ
ಲಿನ್ಸೆ ಸ್ಮಿತ್, ₹30 ಲಕ್ಷ
ದಯಾಳನ್ ಹೇಮಲತಾ, ₹30 ಲಕ್ಷ
ಪ್ರೇಮಾ ರಾವತ್, ₹20 ಲಕ್ಷ
ಗೌತಮಿ ನಾಯಕ್, ₹10 ಲಕ್ಷ
ಪ್ರತ್ಯೂಷ ಕುಮಾರ್, ₹10 ಲಕ್ಷ

Story first published: Thursday, November 27, 2025, 18:56 [IST]
Other articles published on Nov 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+