WPL 2026: ಜನವರಿ 7 ರಿಂದ ಲೀಗ್‌ಗೆ ಆರಂಭ?
ಮಹಿಳಾ ಪ್ರೀಮಿಯರ್ ಲಿಗ್ 2026 ಮೆಗಾ ಹರಾಜು ನವೆಂಬರ್ 27 ರಂದು ನಡೆಯಲಿದೆ. ಇದಕ್ಕಾಗಿ ಫ್ರಾಂಚೈಸಿಗಳು ಕಸರತ್ತು ನಡೆಸಿದ್ದಾರೆ. ಇದರ ಬೆನ್ನಲ್ಲೆ ಡಬ್ಲ್ಯೂಪಿಎಲ್ ಆರಂಭವಾಗುವುದು ಯಾವಾಗ? ಪಂದ್ಯಗಳು ಯಾವೆಲ್ಲಾ ಸ್ಥಳಗಳಲ್ಲಿ ನಡೆಯುತ್ತದೆ ಎಂಬುವ ಪ್ರಶ್ನೆಗೆ ಉತ್ತರ ಸಿಕ್ಕಂತೆ ಆಗಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಹೇಳಿಕೆ ಬರುವುದು ಬಾಕಿ ಇದೆ.
ಮೂಲಗಳ ಪ್ರಕಾರ ಈ ಬಾರಿ ಡಬ್ಲ್ಯೂಪಿಎಲ್ ಜನವರಿ 7 ರಂದು ಆರಂಭವಾಗುವ ನಿರೀಕ್ಷೆ ಇದೆ. ಈ ಬಾರಿ ಟೂರ್ನಿಯ ಎಲ್ಲ ಪಂದ್ಯಗಳನ್ನು ಮುಂಬೈ ಹಾಗೂ ಬರೋಡಾದಲ್ಲಿ ಆಡಿಸುವ ಸಾಧ್ಯತೆ ಇದೆ. ಮಹಿಳಾ ಆಟಗಾರ್ತಿಯರು ಡಿವೈ ಪಾಟೀಲ್ ನೆಚ್ಚಿನ ಮೈದಾನ ಎಂದು ತಿಳಿಸಿದ್ದಾರೆ. ಹೀಗಾಗಿ ಈ ಬಾರಿಯ ಡಬ್ಲ್ಯೂಪಿಎಲ್‌ನ ಮೊದಲ ಪಂದ್ಯವನ್ನು ಇದೇ ಅಂಗಳದಲ್ಲಿ ಆಡಿಸುವ ಸಾಧ್ಯತೆ ಇದೆ. ಈ ಬಾರಿ ಡಬ್ಲ್ಯೂಪಿಎಲ್ ಜನವರಿ 7ರಿಂದ ಆರಂಭವಾಗಿವಿ ಫೆಬ್ರವರಿ 3 ರವರೆಗೆ ನಡೆಯುವ ಸಂಭವವಿದೆ.

ಕ್ರಿಕ್‌ಬಜ್ ಪ್ರಕಾರ ಬರೋಡಾದಲ್ಲಿ ಪಂದ್ಯಗಳು ಜನವರಿ 16 ರಿಂದ ಆಡಲಾಗುತ್ತದೆ. ಹೀಗೆ ಆದಲ್ಲಿ ಬರೋಡಾದಲ್ಲಿ ಪ್ರಶಸ್ತಿ ಸುತ್ತಿನ ಕಾದಾಟ ನಡೆಸುವ ಸಾಧ್ಯತೆ ಇದೆ. ಇನ್ನು ಈ ಲೀಗ್‌ನ ಪಂದ್ಯಗಳು ಆರಂಭವಾಗುವ 5 ದಿನ ಮುಂಚಿತವಾಗಿ ಇದೇ ಅಂಗಳದಲ್ಲಿ ಭಾರತ, ನ್ಯೂಜಿಲೆಂಡ್ ತಂಡಗಳ ನಡುವೆ ಕಾದಾಟ ನಡೆಯಲಿದೆ. ಬಿಸಿಸಿಐ ಈ ಬಗ್ಗೆ ಇನ್ನು ಮಾಲೀಕರೊಂದಿಗೆ ಯಾವುದೇ ವಿಷಯವನ್ನು ಹಂಚಿಕೊಂಡಿಲ್ಲ. ಈ ಬಗ್ಗೆ ಈಗ ಅನೌಪಚಾರಿಕ ಚರ್ಚೆಗಳು ಆರಂಭವಾಗಿವೆ.
ಜನವರಿಯಲ್ಲಿ ಲೀಗ್ ಆರಂಭವಾಗುವುದು ಏಕೆ?
ದೆಹಲಿಯಲ್ಲಿ ನವೆಂಬರ್ 27 ನಡೆಯಲಿರುವ ಡಬ್ಲ್ಯೂಪಿಎಲ್ ಹರಾಜಿನ ವೇಳೆ ಈ ಬಗ್ಗೆ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ನೀಡುವ ಸಾಧ್ಯತೆ ಇದೆ. ಲಕ್ನೋ, ಬೆಂಗಳೂರು, ಮುಂಬೈ ಮತ್ತು ಬರೋಡಾ ಸ್ಥಳಗನ್ನು ಶಾರ್ಟ್ ಲೀಸ್ಟ್ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಕಳೆದ ಬಾರಿ ಡಬ್ಲ್ಯೂಪಿಎಲ್ ಪಂದ್ಯಗಳು ಫೆಬ್ರವರಿಯಲ್ಲಿ ನಡೆದಿತ್ತು. ಆದರೆ ಈ ಬಾರಿ ಜನವರಿಯಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ಒಂದು ಕಾರಣವಾಗಿರಬಹುದು.
ಈ ಬಾರಿ ಮುಂಬೈ ಇಂಡಿಯನ್ಸ್ ಹಾಲಿ ಚಾಂಪಿಯನ್ ಆಗಿ ಕಣಕ್ಕೆ ಇಳಿಯಲಿದೆ. ಕಳೆದ ಬಾರಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications