WPL 2026: ಶಫಾಲಿ ವರ್ಮಾ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಆಟಗಾರ್ತಿ
ಜನವರಿ 9 ರಿಂದ ಭಾರತದಲ್ಲಿ ಮಹಿಳಾ ಕ್ರಿಕೆಟ್ ಕಲರವ ಆರಂಭವಾಗಲಿದೆ. ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಲೀಗ್‌ನಲ್ಲಿ ಆರಂಭದಿಂದಲೂ ಬ್ಯಾಟರ್‌ಗಳು ಆರ್ಭಟ ನಡೆಸಿದ್ದಾರೆ. ಲೀಗ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ್ತಿಯರು ಯಾರು? ಎಂಬ ಬಗ್ಗೆ ವರದಿ ಇಲ್ಲಿದೆ.
4ನೇ ಆವೃತ್ತಿಯಲ್ಲಿ ಸ್ಟಾರ್ ಆಟಗಾರ್ತಿಯರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಈ ವೇಳೆ ಭಾರತ ತಂಡದ ಭರವಸೆಯ ಬ್ಯಾಟರ್ ಶಫಾಲಿ ವರ್ಮಾ ಲೀಗ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಆಡಿದ 27 ಪಂದ್ಯಗಳಲ್ಲಿ 49 ಸಿಕ್ಸರ್ ಸಿಡಿಸಿದ್ದಾರೆ. ಇವರು ಈ ಬಾರಿಯ ಡಬ್ಲ್ಯೂಪಿಎಲ್‌ನಲ್ಲಿ ಇನ್ನೊಂದು ಸಿಕ್ಸರ್ ಬಾರಿಸಿದ್ದೇ ಆದಲ್ಲಿ, ಮತ್ತೊಂದು ದಾಖಲೆ ಬರೆಯಲಿದ್ದಾರೆ.

ಶಫಾಲಿ ವರ್ಮಾ ಲೀಗ್‌ನಲ್ಲಿ 50 ಸಿಕ್ಸರ್ ಬಾರಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಇನ್ನು ಒಂದು ಸಿಕ್ಸರ್ ಅವಶ್ಯಕತೆ ಇದೆ. ಇವರು ಈ ಸಾಧನೆಯನ್ನು ಈ ಬಾರಿಯ ಲೀಗ್‌ನಲ್ಲಿ ಮಾಡಿ ತಮ್ಮ ದಾಖಲೆಯನ್ನು ಮತ್ತಷ್ಟು ಬಲಿಷ್ಠ ಗೊಳಿಸಿಕೊಳ್ಳಲಿದ್ದಾರೆ.
ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ಅವರಿಗೂ ಸ್ಥಾನ. ಇವರು ಸಹ ಆಡಿದ 26 ಪಂದ್ಯಗಳಲ್ಲಿ 30 ಸಿಕ್ಸರ್ ಬಾರಿಸಿದ್ದಾರೆ. ಇವರು ಲೀಗ್‌ನಲ್ಲಿ 150ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ ಸದ್ದು ಮಾಡಿದ್ದಾರೆ.
ಪೆರ್ರಿಗೂ ಸ್ಥಾನ
ಗುಜರಾತ್ ತಂಡದ ಭರವಸೆಯ ಆಟಗಾರ್ತಿ ಆಶ್ಲೀ ಗಾರ್ಡ್ನರ್ ಸಹ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಕೊಳ್ಳುವ ಆಟಗಾರ್ತಿ. ಇವರು ಆಡಿದ 25 ಪಂದ್ಯಗಳಲ್ಲಿ 26 ಸಿಕ್ಸರ್ ಸಿಡಿಸಿದ್ದಾರೆ. ಆರ್‌ಸಿಬಿ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 25 ಪಂದ್ಯಗಳಲ್ಲಿ 25 ಸಿಕ್ಸರ್ ಸಿಡಿಸಿದ್ದಾರೆ. ಉಳಿದಂತೆ ಕಿರಣ್ ನವಗಿರೆ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಇವರ ಬುಟ್ಟಿಯಲ್ಲಿ 24 ಸಿಕ್ಸರ್‌ಗಳ ಸೇರಿವೆ.

ಇನ್ನು ಆರ್‌ಸಿಬಿ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ 20 ಸಿಕ್ಸರ್ ಸಿಡಿಸಿದ್ದು, ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಕೌರ್ 22 ಸಿಕ್ಸರ್ ಸಿಡಿಸಿದ್ದಾರೆ. ಭಾರತದ ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅವರು 11 ಸಿಕ್ಸರ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications