Shreyanka Patil: ಗಾಯದ ನೋವಿನಿಂದ ಹೊರಬರಲು ಶ್ರೇಯಾಂಕಗೆ ಜಸ್ಪ್ರೀತ್ ಬುಮ್ರಾ ಸ್ಫೂರ್ತಿ
ಶುಕ್ರವಾರದಿಂದ ಭಾರತದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ವೇಳೆ ಆರ್‌ಸಿಬಿ ತಂಡದ ಪರ ಕನ್ನಡತಿ ಶ್ರೇಯಾಂಕ ಪಾಟೀಲ್ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಇವರು ಗಾಯದ ಸಮಸ್ಯೆಯಿಂದ ಮಿಸ್ ಮಾಡಿಕೊಂಡಿದ್ದರು. ಈ ಕಠಿಣ ಸಮಯದಲ್ಲಿ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಹೇಗೆ ಸ್ಫೂರ್ತಿಯಾದರು ಎಂಬುದನ್ನು ಶ್ರೇಯಾಂಕಾ ಹಂಚಿಕೊಂಡಿದ್ದಾರೆ.
ಶ್ರೇಯಾಂಕ ಪಾಟೀಲ್ ಅವರು 2024ರಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರು ಈ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧಕಿಯರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರು. ಇವರು ಆರ್‌ಸಿಬಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾಗ ಪರ್ಪಲ್ ಕ್ಯಾಪ್ ಪಡೆದಿದ್ದರು.

ಶ್ರೇಯಾಂಕ ಪಾಟೀಲ್ ಈ ಬಾರಿ ಆರ್‌ಸಿಬಿ ಪರ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಜನವರಿ 9 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಶ್ರೇಯಾಂಕ ಕಣಕ್ಕೆ ಇಳಿಯಲಿದ್ದಾರೆ. ಚೇತರಿಕೆಯ ಹಂತದಲ್ಲಿ ಶ್ರೇಯಾಂಕ ಅವರಿಗೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಶ್ರೇಯಾಂಕ ಪಾಟೀಲ್ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೇಯಾಂಕಾ ತನ್ನನ್ನು ತಂಡದಲ್ಲಿ ಉಳಿಸಿಕೊಳ್ಳುವ ಸುದ್ದಿ ಕೇಳಿದಾಗ, ನಾನು ಸಂಪೂರ್ಣವಾಗಿ ಬ್ಲ್ಯಾಂಕ್ ಆಗಿದ್ದೆ. ನಾನು ಅನುಭವಿಸಿದ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮುಖ್ಯ ತರಬೇತುದಾರ ಮಲೋಲನ್ ರಂಗರಾಜನ್ ನಿಮ್ಮನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ' ಎಂದು ಹೇಳಿದರು.

ಶ್ರೇಯಾಂಕ ಪಾಟೀಲ್, "ನನಗೆ ನಿಜವಾಗಿಯೂ ಆಘಾತವಾಯಿತು. ಕಳೆದ 13-14 ತಿಂಗಳುಗಳಲ್ಲಿ ಆಡದ ಯಾರೋ ಒಬ್ಬರು ನನ್ನನ್ನು ನಂಬಿದ್ದಾರೆ. ನಿಮ್ಮ ಕೌಶಲ್ಯಗಳು ಅದ್ಭುತವಾಗಿರುವುದರಿಂದ ನಿಮ್ಮನ್ನು ಬೆಂಬಲಿಸುತ್ತೇನೆ ಎಂದು ಕೋಚ್ ತಿಳಿಸಿದರು.
ಜಸ್ಪ್ರೀತ್ ಬುಮ್ರಾ ಹೇಳಿದ ಕಿವಿ ಮಾತು ಏನು?
ಶ್ರೇಯಾಂಕಾ ಪಾಟೀಲ್ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ, ಪುನರ್ವಸತಿ ಪಡೆಯುತ್ತಿದ್ದಾಗ ಬೌಲರ್ ಜಸ್ಪ್ರೀತ್ ಬುಮ್ರಾ ಅವರೊಂದಿಗಿನ ಸಂಭಾಷಣೆಯ ವಿವರಗಳನ್ನು ಸಹ ಹಂಚಿಕೊಂಡರು. ಒತ್ತಡವನ್ನು ಮೆಟ್ಟಿನಿಲ್ಲುವುದು ಹೇಗೆ, ವಿಶೇಷವಾಗಿ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಬಗ್ಗೆ ಉಪಯುಕ್ತ ಸಲಹೆ ನೀಡಿದರು. ಬುಮ್ರಾ ಅವರು ನೀಡಿದ ಸಲಹೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ತಿಳಿಸಿದ್ದಾರೆ.
ತಿಂಗಳು ಗಟ್ಟಲೇ ಕೋಣೆಯಲ್ಲಿದ್ದೆ...
ಆರಂಭದಲ್ಲಿ, ಗಾಯವು ಸ್ವಲ್ಪ ಸಮಯದ ನಂತರ ಗುಣವಾಗುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಗಾಯ ಚೇತರಿಕೆ ಸಮಯ ಹಿಡಿಯಿತು. ನಾನು ಬೇಸರದಲ್ಲಿದ್ದೆ. ನಾನು ಈ ಸಮಯದಲ್ಲಿ ತಿಂಗಳು ಗಟ್ಟಲೆ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದೆ. ಇದು ನನ್ನ ವ್ಯಕ್ತಿತ್ವಕ್ಕೆ ವಿರುದ್ಧವಾಗಿತ್ತು. ನಾನು ಈಗ ನನ್ನ ಗಾಯದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿದ್ದು, ಸಕಾರಾತ್ಮಕ ಯೋಚನೆಗಳಿಗೆ ಒತ್ತು ನೀಡುತ್ತಿದ್ದೇನೆ ಎಂದು ಶ್ರೇಯಾಂಕ ಪಾಟೀಲ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications