Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಸ್ಮೃತಿ ಮಂಧಾನಗೆ RCB ನೀಡಿದ ಹಣವೆಷ್ಟು? ಇಲ್ಲಿದೆ ರಿಟೇನ್‌ ಹಾಗೂ ರಿಲೀಸ್‌ ಲೀಸ್ಟ್‌

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಎರಡನೇ ಪ್ರಶಸ್ತಿಯ ಹುಡುಕಾಟದಲ್ಲಿದೆ. ಇದಕ್ಕಾಗಿ ಆರ್‌ಸಿಬಿ ಲೆಕ್ಕಾಚಾರ ಆರಂಭಿಸಿದೆ. ನವೆಂಬರ್ 27 ರಂದು ನಡೆಯಲಿರುವ ಡಬ್ಲ್ಯೂಪಿಎಲ್‌ (WPL) ಮೆಗಾ ಹರಾಜಿಗೆ ಮುಂಚಿತವಾಗಿ ಆರ್‌ಸಿಬಿ ರಿಟೇನ್ ಮಾಡಿದ ಹಾಗೂ ರಿಲೀಸ್‌ ಮಾಡಿದ ಆಟಗಾರರ್ತಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಬ್ಲ್ಯೂಪಿಎಲ್‌ ಫ್ರಾಂಚೈಸಿಗಳು ನವೆಂಬರ್‌ 5 ರಂದು ತಮ್ಮ ತಮ್ಮ ಪಟಿಯನ್ನು ನೀಡಲು ಕೊನೆಯ ದಿನಾಂಕವಾಗಿತ್ತು. ಅದರಂತೆ ಎಲ್ಲ ತಂಡಗಳು ಸಹ ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ನೀಡಿದೆ.

ಮಾಜಿ ಚಾಂಪಿಯನ್‌ ಆರ್‌ಸಿಬಿ ಸಹ ಪಟ್ಟಿಯನ್ನು ನೀಡಿದೆ. ಈ ವೇಳೆ ಆರ್‌ಸಿಬಿ ಅಳೆದು ತೂಗಿ ಆಟಗಾರ್ತಿಯರಿಗೆ ಮಣೆ ಹಾಕಿದೆ. ವಿಶ್ವಕಪ್‌ನಲ್ಲಿ ಭಾರತ ತಂಡ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಸ್ಮೃತಿ ಮಂಧಾನ ಅವರಿಗೆ ಆರ್‌ಸಿಬಿ ರೆಡ್ ಕಾರ್ಪೆಟ್‌ ಹಾಕಿ ಉಳಿಸಿಕೊಂಡಿದೆ. ಅಲ್ಲದೆ ಇವರೇ ಮುಂದಿನ ಆವೃತ್ತಿಗೂ ತಂಡದ ನಾಯಕರಾಗಿ ಕಾಣಿಸಿಕೊಳ್ಳುವುದು ಫಿಕ್ಸ್ ಆದಂತೆ ಕಾಣುತ್ತಿದೆ. ಇನ್ನು ಭಾರತ ತಂಡದ ಸ್ಟಾರ್ ವಿಕೆಟ್‌ ಕೀಪರ್‌ ರಿಚಾ ಘೋಷ್‌ ಅವರನ್ನು ಸಹ ಆರ್‌ಸಿಬಿ ಉಳಿಸಿಕೊಂಡಿದೆ.

WPL 2026 Smriti Mandhana Retained by RCB for 3 5 Cr Full WPL Retention and Release List Revealed

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ್ತಿ ಎಲ್ಲಿಸ್‌ ಪೆರ್ರಿ ಅವರ ಅನುಭವಕ್ಕೆ ಆರ್‌ಸಿಬಿ ಮಣೆ ಹಾಕಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅವರಿಗೂ ಆರ್‌ಸಿಬಿ ತಂಡದಲ್ಲಿ ಉಳಿಸಿಕೊಂಡಿದೆ. ಉಳಿದ ಆಟಗಾರರನ್ನು ಆರ್‌ಸಿಬಿ ಕೈ ಬಿಟ್ಟಿದೆ.

ಆರ್‌ಸಿಬಿ ಉಳಿಸಿಕೊಂಡ ಆಟಗಾರರ್ತಿಯರು

ಸ್ಮೃತಿ ಮಂಧಾನ, 3.5 ಕೋಟಿ ರೂ.
ಎಲ್ಲಿಸ್ ಪೆರ್ರಿ, 2 ಕೋಟಿ ರೂ.
ರಿಚಾ ಘೋಷಾ, 2.75 ಕೋಟಿ ರೂ.
ಶ್ರೇಯಾಂಕ ಪಾಟೀಲ್‌, 60 ಲಕ್ಷ ರೂ.

ವಿಶ್ವಕಪ್‌ ವಿಜೇತ ತಂಡದ ಸದಸ್ಯರಿಗೆ ಇಲ್ಲ ಸ್ಥಾನ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಜಯ ಸಾಧಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತು. ಈ ವೇಳೆ ತಂಡದಲ್ಲಿ ಸ್ಥಾನ ಪಡೆದಿದ್ದ ರೇಣುಕಾ ಸಿಂಗ್ ಠಾಕೂರ್‌ ಹಾಗೂ ಸ್ನೇಹಾ ರಾಣಾ ಅವರನ್ನು ಆರ್‌ಸಿಬಿ ರಿಲೀಸ್ ಮಾಡಿದೆ.

WPL 2026 Smriti Mandhana Retained by RCB for 3 5 Cr Full WPL Retention and Release List Revealed

ಆರ್‌ಸಿಬಿ ರಿಲೀಸ್ ಮಾಡಿದ ಆಟಗಾರ್ತಿಯರು: ಚಾರ್ಲಿ ಡೀನ್, ಡ್ಯಾನಿ ವ್ಯಾಟ್, ಏಕ್ತಾ ಬಿಶ್ತ್, ಜಾರ್ಜಿಯಾ ವೇರ್ಹ್ಯಾಮ್, ಹೀದರ್ ಗ್ರಹಾಂ, ಜಾಗರವಿ ಪವಾರ್, ಜೋಶಿತಾ ವಿ ಜೆ, ಕನಿಕಾ ಅಹುಜಾ, ಕಿಮ್ ಗಾರ್ತ್, ನುಝತ್ ಪರ್ವೀನ್, ಪ್ರೇಮಾ ರಾವತ್, ರಾಘ್ವಿ ಬಿಸ್ಟ್, ರೇಣುಕಾ ಸಿಂಗ್, ಸಬ್ಬಿನೇನಿ ಮೇಘನಾ, ಸ್ನೇಹ ರಾಣಾ.

ಆರ್‌ಸಿಬಿ ಬಳಿ ಇರುವು ಹಣ ಎಷ್ಟು?

ಆರ್‌ಸಿಬಿ ಬಳಿ ಇನ್ನು 6.15 ಕೋಟಿ ರೂಪಾಯಿ ಉಳಿದಿದೆ.

ಆರ್‌ಸಿಬಿ ಬಳಿ ಇನ್ನು ಎಷ್ಟು ಆರ್‌ಟಿಎಂ ಕಾರ್ಡ್‌ಗಳು ಇವೆ?

ಆರ್‌ಸಿಬಿ ಬಳಿ ಇನ್ನು ಒಂದು ಆರ್‌ಟಿಎಂ ಕಾರ್ಡ್ ಇದೆ.

Story first published: Friday, November 7, 2025, 11:47 [IST]
Other articles published on Nov 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+