Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿದ ಡೆಲ್ಲಿ: ಸೋಫಿ ಡಿವೈನ್ ಮ್ಯಾಜಿಕ್

ನವಿ ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್‌ ಕೊನೆಯ ಓವರ್‌ನಲ್ಲಿ ಗೆಲ್ಲಲು 7 ರನ್‌ ಅವಶ್ಯಕತೆ ಇತ್ತು. ಈ ವೇಳೆ ಡೆಲ್ಲಿ 3 ವಿಕೆಟ್‌ ಕಳೆದುಕೊಂಡು 203 ರನ್‌ ಸೇರಿಸಿತ್ತು. 20ನೇ ಓವರ್‌ನಲ್ಲಿ ಸೋಫಿಯಾ ಡಿವೈನ್‌ ಬಿಗುವಿನ ದಾಳಿ ನಡೆಸಿದರು. ಶಿಸ್ತು ಬದ್ಧ ದಾಳಿ ನಡೆಸಿದ ಡಿವೈನ್ 2 ವಿಕೆಟ್‌ ಪಡೆದು ಬೀಗಿದರು. ಅಲ್ಲದೆ ಕೇವಲ 2 ರನ್‌ ನೀಡಿ ಗುಜರಾತ್‌ ಜೈಂಟ್ಸ್‌ ಮೊದಲ ಗೆಲುವಿನ ಹೀರೋಯಿನ್ ರೀತಿ ಮಿಂಚಿದರು. ಇವರು ಡೆಲ್ಲಿ ಕ್ಯಾಪಿಟಲ್ಸ್‌ ತೆಕ್ಕೆಯಲ್ಲಿದ್ದ ಜಯವನ್ನು ಕಸಿದು ಶಾಕ್‌ ನೀಡಿದರು. ಗುಜರಾತ್ ಜೈಂಟ್ಸ್‌ ಎರಡನೇ ಗೆಲುವಿನ ನಗೆ ಬೀರಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಿತ್ತು. ಕೊನೆಯ ಓವರ್‌ನಲ್ಲಿ ಭರವಸೆಯ ಆಟಗಾರರಾದ ಲಾರಾ ವೋಲ್ವಾರ್ಡ್ ಹಾಗೂ ಜೆಮಿಮಾ ರೊಡ್ರಿಗಸ್‌ ಅವರು ಕ್ರೀಸ್‌ನಲ್ಲಿ ಇದ್ದರು. ಸ್ಟ್ರೈಕ್‌ ರೋಟೇಟ್‌ ಮಾಡುತ್ತಾ ಸಿಂಗಲ್ ಆಡಿದ್ರೂ ಪಂದ್ಯ ಗೆಲ್ಲಬಹುದಿತ್ತು. ಆದರೆ ಬಿಗ್ ಶಾಟ್‌ಗಳನ್ನು ಬಾರಿಸಲು ಹೋಗಿ ಡೆಲ್ಲಿ ಬ್ಯಾಟರ್‌ಗಳು ವಿಕೆಟ್ ನೀಡಿ ಕೈ ಚೆಲ್ಲಿದರು. ಅಲ್ಲದೆ ಲೀಗ್‌ನಲ್ಲಿ ಎರಡನೇ ಸೋಲು ಕಂಡಿತು.

WPL 2026 Sophie Devine s All-Round Magic Leads Gujarat Giants to Thrilling Win Over Delhi

210 ರನ್‌ಗಳ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭರವಸೆಯ ಆಟಗಾರ್ತಿ ಶಫಾಲಿ ವರ್ಮಾ (14) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಲಿಜೆಲ್ ಲೀ ಹಾಗೂ ಲಾರಾ ವೋಲ್ವಾರ್ಡ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆಯನ್ನು ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಈ ಜೋಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸುವುದಲ್ಲದೇ ವಿಕೆಟ್‌ ಬೀಳದಂತೆ ಕಾಯ್ದುಕೊಂಡಿತು. 2ನೇ ವಿಕೆಟ್‌ಗೆ ಲಿಜೆಲ್ ಲೀ ಹಾಗೂ ಲಾರಾ ವೋಲ್ವಾರ್ಡ್ ಜೊತೆಗೂಡಿ 55 ಎಸೆತಗಳಲ್ಲಿ 90 ರನ್‌ ಜೊತೆಯಾಟದ ಕಾಣಿಕೆ ನೀಡಿತು. ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಲಿಜೆಲ್ ಲೀ 86 ರನ್‌ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇವರು 12 ಬೌಂಡರಿ, 3 ಸಿಕ್ಸರ್ ಬಾರಿಸಿದರು.

ಕೊನೆಯ ವರೆಗೂ ಹೋರಾಡಿದ ಲಾರಾ ವೋಲ್ವಾರ್ಡ್ 38 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 77 ರನ್‌ ಬಾರಿಸಿ ಔಟ್ ಆದರು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಕಲೆ ಹಾಕಿ ಸೋಲು ಕಂಡಿತು.

WPL 2026 Sophie Devine s All-Round Magic Leads Gujarat Giants to Thrilling Win Over Delhi

ಡಿವೈನ್ ಶೋ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಬೆತ್ ಮೂನಿ (19) ಹಾಗೂ ಸೋಫಿ ಡಿವೈನ್‌ ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 94 ರನ್‌ ಸೇರಿಸಿತು. ಅಬ್ಬರದ ಬ್ಯಾಟಿಂಗ್ ನಡೆಸಿ ಶತಕದ ಹೊಸ್ತಿಲಲ್ಲಿ ನಿಂತಿದ್ದ ಸೋಫಿ ಡಿವೈನ್ 42 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ಸಹಾಯದಿಂದ 95 ರನ್‌ ಸಿಡಿಸಿ ಔಟ್ ಆದರು. ನಾಯಕಿ ಆಶ್ಲೀ ಗಾರ್ಡ್ನರ್ ತಮ್ಮ ನೈಜ ಆಟವನ್ನು ಆಡಿ ಮಿಂಚಿದರು. ಇವರು 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 49 ರನ್‌ ಬಾರಿಸಿ ಔಟ್ ಆದರು. ಅಂತಿಮವಾಗಿ ಗುಜರಾತ್ 20 ಓವರ್‌ಗಳಲ್ಲಿ 209 ರನ್‌ಗಳಿಗೆ ಆಲೌಟ್ ಆಯಿತು.

ಡೆಲ್ಲಿ ತಂಡದ ಪರ ನಂದಿನಿ ಶರ್ಮಾ ಅವರು ಹ್ಯಾಟ್ರಿಕ್‌ ಸೇರಿದಂತೆ 5 ವಿಕೆಟ್‌ ಪಡೆದು ಬೀಗಿದರು. ಭರ್ಜರಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಸೋಫಿ ಡಿವೈನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

Story first published: Monday, January 12, 2026, 1:51 [IST]
Other articles published on Jan 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+