For Quick Alerts
ALLOW NOTIFICATIONS  
For Daily Alerts
 

WPL 2026: ಡಿ.26ರಿಂದ ಟಿಕೆಟ್ ಮಾರಾಟ ಆರಂಭ

ಮಹಿಳಾ ಪ್ರೀಮಿಯರ್ ಲೀಗ್‌ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ನಾಲ್ಕನೇ ಆವೃತ್ತಿಯು 2026ರ ಜನವರಿ 9 ರಿಂದ ಆರಂಭವಾಗಲಿದೆ. ನವೆಂಬರ್‌ 27 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ತಂಡಗಳು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿವೆ. ಇನ್ನು ಅಭಿಮಾನಿಗಳು ಸಹ ಬಿಗ್ ಇವೆಂಟ್‌ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಸಿಸಿಐ ಈ ಟೂರ್ನಿಯ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಟೂರ್ನಿಯ ಆನ್‌ಲೈನ್ ಟಿಕೆಟ್ ಮಾರಾಟದ ಕುರಿತು ದೊಡ್ಡ ಬಿಗ್‌ ಅಪ್‌ಡೇಟ್‌ ನೀಡಿದೆ.

ನಾಲ್ಕನೇ ಆವೃತ್ತಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಮಾಜಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ನಡುವೆ ನಡೆಯಲಿದೆ. ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳು ನವಿ ಮುಂಬೈನ ಡಾ.ಡಿವೈ ಪಾಟೀಲ್ ಕ್ರೀಡಾಂಗಣ ಹಾಗೂ ವಡೋದರಾದಲ್ಲಿ ನಡೆಯಲಿವೆ. ಇನ್ನು ಈ ಪಂದ್ಯಗಳ ಟಿಕೆಟ್‌ ಪಡೆಯಲು ಅಭಿಮಾನಿಗಳಿಗೆ ಬಿಸಿಸಿಐ ಗುಡ್‌ ನ್ಯೂಸ್ ನೀಡಿದೆ. ಡಿಸೆಂಬರ್‌ 26 (ಶುಕ್ರವಾರ) ಅಭಿಮಾನಿಗಳು ಈ ಎರಡು ಮೈದಾನಗಳಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ ಪಡೆಯಬಹುದಾಗಿದೆ.

WPL 2026 Tickets Live from Dec 26 MI vs RCB Opener on Jan 9 Deepti Sharma Most Expensive

ಶುಕ್ರವಾರದಿಂದ ಅಭಿಮಾನಿಗಳು ಟಿಕೆಟ್‌ಗಳನ್ನು ಆನ್‌ಲೈನ್‌ ಪಡೆಯಬಹುದಾಗಿದೆ. ನವಿ ಮುಂಬೈನಲ್ಲಿ ಜನವರಿ 9 ರಿಂದ 17 ರವರೆಗೆ, ಉಳಿದ 11 ಪಂದ್ಯಗಳು ವಡೋದರಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಅಭಿಮಾನಿಗಳು ತಮ್ಮ ಟಿಕೆಟ್‌ಗಳನ್ನು www.wplt20.com ಲಾಗ್‌ಇನ್‌ ಮಾಡಿ ಪಡೆಯಬಹುದಾಗಿದೆ. ಈ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ಪಂದ್ಯಗಳ ಟಿಕಟ್‌ಗಳನ್ನು ಪಡೆಯಬಹುದಾಗಿದೆ. ಆದರೆ ಟಿಕೆಟ್‌ಗಳ ದರವನ್ನು ಇನ್ನು ಬಹಿರಂಗ ಪಡಿಸಿಲ್ಲ. ಟಿಕೆಟ್‌ ಮಾರಾಟ ಮಾಡುವಾಗಲೇ ದರಗಳನ್ನು ತಿಳಿದು ಕೊಳ್ಳಬಹುದಾಗಿದೆ. ಮಹಿಳಾ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚಿಸಲು ಬಿಸಿಸಿಐ ಟಿಕೆಟ್ ದರವನ್ನು ಕೈಗೆಟುಕುವಂತೆ ನಿಗದಿಪಡಿಸುವ ನಿರೀಕ್ಷೆಯಿದೆ. ಒಟ್ಟು 22 ಪಂದ್ಯಗಳು ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಲಿವೆ.

ಇತ್ತೀಚಿಗೆ ನಡೆದ ಮೆಗಾ ಹರಾಜಿನಲ್ಲಿ ದೀಪ್ತಿ ಶರ್ಮಾ ಅವರಿಗೆ ಯುಪಿ ವಾರಿಯರ್ಸ್‌ 3.2 ಕೋಟಿ ರೂ. ನೀಡಿ ಖರೀದಿಸಿತ್ತು. ಈ ಮೂಲಕ ದೀಪ್ತಿ ಶರ್ಮಾ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರು ಇತ್ತೀಚಿಗೆ ಭಾರತದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಯನ್ನು ಪಡೆದಿದ್ದರು. ಇನ್ನು ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿರುವ ಆರ್‌ಸಿಬಿ ಸಹ ಸ್ಟಾರ್ ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಲೀಗ್‌ನ ಹೆಚ್ಚಿನ ಪಂದ್ಯಗಳ ಸಂಜೆ 7:30ಕ್ಕೆ ಆರಂಭವಾಗಲಿವೆ.

Story first published: Thursday, December 25, 2025, 22:46 [IST]
Other articles published on Dec 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+