WPL 2026 RCB: ಡಬ್ಲ್ಯೂಪಿಎಲ್ 18ನೇ ಪಂದ್ಯದಲ್ಲಿ ಆರ್‌ಸಿಬಿ ಯುಪಿ ವಾರಿಯರ್ಸ್ ವಿರುದ್ಧ ಗೆಲುವು ಸಾಧಿಸಿ ನೇರವಾಗಿ ಫೈನಲ್ ಪ್ರವೇಶ ಮಾಡಿದೆ. ಹಾಗಾದ್ರೆ, ಬೆಂಗಳೂರು ತಂಡದ ಗೆಲವಿಗೆ ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾದ ಗ್ರೇಸ್ ಹ್ಯಾರಿಸ್ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ. ಯಾವುದೇ ಒತ್ತಡ ಇಲ್ಲದೆ ಮೈದಾನದಲ್ಲಿ ಕಾಮಿಡಿ ಮೂಲಕವೇ ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನ ಮಾಡಿರುವ ಇವರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಾಗಾದ್ರೆ ಇವರು ಯಾರು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಯುಪಿ ವಾರಿಯರ್ಸ್ ತಂಡವನ್ನು ಆರ್‌ಸಿಬಿ ಬೌಲರ್‌ಗಳು 143 ರನ್‌ಗಳಿಗೆ ಕಟ್ಟಿಹಾಕಿದರು. ಇನ್ನೂ ಯುಪಿ ವಾರಿಯರ್ಸ್ ನೀಡಿದ 144 ರನ್‌ಗಳ ಸಾಧಾರಣ ಗುರಿಯನ್ನು ಆರ್‌ಸಿಬಿ ಕೇವಲ 13.1 ಓವರ್‌ಗಳಲ್ಲಿ ತಲುಪಿ ಗೆಲುವು ಸಾದಿಸುವ ಮೂಲಕ ನೇರವಾಗು ಫೈನಲ್ ಪ್ರವೇಶಿಸಿತು. ಅಷ್ಟರ ಮಟ್ಟಿಗೆ ಬೆಂಗಳೂರು ತಂಡದಿಂದ ಉತ್ತಮ ಪ್ರದರ್ಶನ ಕಂಡುಬಂದಿತು.

ಮಿಂಚಿದ ಗ್ರೇಸ್ ಹ್ಯಾರಿಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿಯರ್ಸ್ ವಿರುದ್ಧ ಗೆಲುವು ಸಾಧಿಸಲು ಪ್ರಮುಖ ಕಾರಣಕರ್ತರಾದವರಲ್ಲಿ ಗ್ರೇಸ್ ಹ್ಯಾರಿಸ್ ಕೂಡ ಒಬ್ಬರಾಗಿದ್ದಾರೆ. ಇವರು ಆರ್‌ಸಿಬಿ ಪರ ಮಾರಕ ಬೌಲಿಂಗ್ ದಾಳಿ ಜೊತೆಗೆ ಸ್ಫೋಟಕ ಬ್ಯಾಟಿಂಗ್ ಮಾಡಿ ಮಿಂಚಿದರು. ಅಲ್ಲದೆ, ಮೈದಾನದಲ್ಲಿ ಸಭ್ರಮಿಸಿರುವ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಇವರು ಯಾರು ಎನ್ನುವ ಪ್ರಶ್ನೆ ಬಹುತೇಕರಲ್ಲಿ ಹುಟ್ಟಿಕೊಂಡಿದೆ. ಇದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆರ್‌ಸಿಬಿಗೆ ಗೆಲುವಿಗೆ ಪ್ರಮುಖ ಕಾರಣಗಳು: ಯುಪಿ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಗೆಲುವಿಗೆ ಹಲವು ಪ್ರಮುಖ ಕಾರಣಗಳಿವೆ. ಮೊದಲು, ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ರನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಇದರ ಪರಿಣಾಮ ಯುಪಿ ತಂಡ ದೊಡ್ಡ ಮೊತ್ತದ ಸ್ಕೋರ್ ಕಲೆಹಾಕಲು ವಿಫಲವಾಯಿತು.
ಎರಡನೆಯದಾಗಿ, ಆರ್‌ಸಿಬಿ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಆರಂಭಿಕ ಆಟಗಾರರು ಉತ್ತಮವಾಗಿ ಆಟ ಆಡಿದರು. ಈ ಮೂಲಕ ಅವರು ಮಧ್ಯಮ ಕ್ರಮಾಂಕದ ಆಟಗಾರರಿಗೆ ಯಾವುದೇ ಒತ್ತಡವಿಲ್ಲದೆ ಆಡಲು ಅವಕಾಶ ಕಲ್ಪಿಸಿದರು. ಅಗತ್ಯ ಸಮಯದಲ್ಲಿ ಬೌಂಡರಿ ಮತ್ತು ಸಿಂಗಲ್‌ಗಳ ಸಮತೋಲನ ಕಾಪಾಡಿಕೊಂಡಿದ್ದು ತಂಡಕ್ಕೆ ಹೆಚ್ಚು ಲಾಭವಾಯಿತು.
ಜೊತೆಗೆ, ಫೀಲ್ಡಿಂಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಭಾರೀ ಸುಧಾರಣೆ ಕಂಡುಬಂದಿತು. ಪ್ರಮುಖ ಕ್ಯಾಚ್‌ಗಳು ಮತ್ತು ರನ್‌ಔಟ್‌ಗಳು ಪಂದ್ಯದ ದಿಕ್ಕನ್ನೇ ಬದಲಿಸಿತು. ಇದರಿಂದಲೇ ಆರ್‌ಸಿಬಿಗೆ ಯುಪಿ ವಾರಿಯರ್ಸ್ ವಿರುದ್ಧ ಗೆಲುವು ಸಾಧಿಸಲು ಪ್ರಮುಖ ಕಾರಣವಾಯಿತು ಅಂದ್ರೆ ತಪ್ಪಾಗಲಾರದು.
ಯಾಕಂದ್ರೆ, ಆರಂಭದಲ್ಲಿ ಸತತ ಐದು ಪಂದ್ಯಗಳಲ್ಲಿ ಗೆದ್ದ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ 10 ಅಂಕಗಳನ್ನು ಪಡೆದು ಅಗ್ರಸ್ಥಾನದಲ್ಲಿ ಉಳಿದುಕೊಂಡಿತು. ಆದರೆ, ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಬೆಂಗಳೂರು ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದು, ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡಿತು. ಇದರಿಂದ ಹಠತೊಟ್ಟು ನಿಂತ ಸ್ಮೃತಿ ಮಂಧಾನ ಪಡೆ ಯುಪಿ ವಾರಿಯರ್ಸ್ ವಿರುದ್ಧ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 12 ಅಂಕ ಪಡೆದು ಅಗ್ರಸ್ಥಾನ ಭದ್ರಪಡಿಸಿಕೊಳ್ಳುವುದರ ಜೊತೆಗೆ ನೇರ ಫೈನಲ್ ಪ್ರವೇಶ ಕೂಡ ಮಾಡಿತು.
ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಮಿಂಚಿದ ಹ್ಯಾರಿಸ್: ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣಕರ್ತರಾದರವಲ್ಲಿ ಗ್ರೇಸ್ ಹ್ಯಾರಿಸ್ ಕೂಡ ಒಬ್ಬರಾಗಿದ್ದಾರೆ. ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಮಿಂಚಿದರು. ಮೂರು ಓವರ್ ಎಸೆದ ಆವರು 22 ರನ್‌ಗಳನ್ನು ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದರು. ಈ ಮೂಲಕ ಆರ್‌ಸಿಬಿಯಲ್ಲಿ ಬೌಲಿಂಗ್ ವಿಭಾಗದಲ್ಲಿ ಯಾವುದೇ ಕೊರತೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟರು.
ಬಳಿಕ ನಾಯಕಿ ಮಂಧಾನ ಜೊತೆ ಆರಂಭಿಕರಾಗಿ ಬ್ಯಾಟಿಂಗ್‌ಗಿಳಿದ ಅವರು ಯುಪಿ ಬೌಲರ್‌ಗಳ ಬೆವರಿಳಿಸಿದರು. ಅವರು, ಕೇವಲ 37 ಬಾಲ್‌ಗಳಲ್ಲಿ 13 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 75 ರನ್ ಕಲೆಹಾಕಿದರು. ಇನ್ನೂ ಇವರ ಆಟಕ್ಕೆ ಯುಪಿ ವಾರಿಯರ್ಸ್ ತಂಡದ ಬೌಲರ್‌ಗಂತೂ ತತ್ತರಿಸಿದಂತೂ ನಿಜ.
ಗ್ರೇಸ್ ಹ್ಯಾರಿಸ್ ವಿಕೆಟ್ ಕಬಳಿಸಿದಾಗ ಹಾಗೂ ಬ್ಯಾಟಿಂಗ್ ವೇಳೆ ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿದಾಗಲೆಲ್ಲ ಮೈದಾನದಲ್ಲೆ ಕುಣಿದು ಕುಪ್ಪಳಿಸಿದ ಫೋಟೋ, ವಿಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಇವರ ಆಟಕ್ಕೆ ಮನಸೋತ ಅಭಿಮಾನಿಗಳು ಪ್ಲೆಯರ್ ಅಂದ್ರೆ ಹೀಗಿರಬೇಕು. ಟೀಮ್‌ನಲ್ಲಿ ಆಟದ ಜೊತೆ ಮುಖ್ಯವಾಗಿ ಜೋಶ್ ಇರಬೇಕು. ಅದನ್ನು ನಾವು ಗ್ರೇಸ್ ಹ್ಯಾರಿಸ್ ಅವರಲ್ಲಿ ಕಂಡೆವು ಅಂತಾ ಹೇಳುತ್ತಿದ್ದಾರೆ.
ಸಾಮಾನ್ಯವಾಗಿ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದವರು ಒತ್ತಡದಲ್ಲಿರುತ್ತಾರೆ. ಆದ್ರೆ, ಗ್ರೇಸ್ ಹ್ಯಾರಿಸ್ ಮಾತ್ರ ನಗುನಗುತ್ತಲೇ, ಜೊತೆಗಿದ್ದವರನ್ನು ನಗಿಸುತ್ತಾ ಸ್ಫೋಟಕ ಬ್ಯಾಟಿಂಗ್ ಆಡಿದ್ದು ಮಾತ್ರ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಅಲ್ಲದೆ, ಬೌಲಿಂಗ್ ವೇಳೆಯೂ ತಮಾಷೆ ಮಾಡಿಕೊಂಡೆ ಎದುರಾಳಿ ತಂಡದವರ ಎರಡು ವಿಕೆಟ್ ಕಬಳಿಸಿ ಗಮನ ಸೆಳೆದರು. ಇದೇ ವಿಚಾರಕ್ಕೆ ಇವರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಗ್ರೇಸ್ ಹ್ಯಾರಿಸ್ ಯಾರು?: ಆರ್‌ಸಿಬಿ ತಂಡದಲ್ಲಿರುವ ಗ್ರೇಸ್ ಹ್ಯಾರಿಸ್ ಅವರು ಆಸ್ಟ್ರೇಲಿಯಾದ ಪ್ರತಿಭಾವಂತ ಮಹಿಳಾ ಕ್ರಿಕೆಟ್ ಆಟಗಾರ್ತಿ. ಬಲಗೈ ಬ್ಯಾಟ್ಸ್‌ಮನ್ ಆಗಿರುವ ಅವರು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದು, ಟಿ-20 ಮಾದರಿಯ ಕ್ರಿಕೆಟ್‌ನಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಗತ್ಯವಿದ್ದರೆ ಬಲಗೈ ಆಫ್‌ಸ್ಪಿನ್ ಬೌಲಿಂಗ್ ಮಾಡುವ ಆಲ್‌ರೌಂಡರ್ ಆಗಿಯೂ ತಂಡಕ್ಕೆ ನೆರವಾಗುತ್ತಾರೆ.
ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರ, ವಿವಿಧ ದೇಶೀಯ ಹಾಗೂ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಿದ ಅನುಭವ ಹೊಂದಿರುವ ಗ್ರೇಸ್ ಹ್ಯಾರಿಸ್, ಮಧ್ಯಮ ಕ್ರಮಾಂಕದಲ್ಲಿ ಪಂದ್ಯ ತಿರುವು ಬದಲಿಸುವ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಆರ್‌ಸಿಬಿ ತಂಡದಲ್ಲಿ ಬ್ಯಾಟಿಂಗ್ ಜೊತೆ, ಒತ್ತಡದ ಸಂದರ್ಭಗಳಲ್ಲಿ ಬೌಲಿಂಗ್ ದಾಳಿ ಮಾಡುವ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.