For Quick Alerts
ALLOW NOTIFICATIONS  
For Daily Alerts
 

WPL 2026 Nat Sciver-Brunt: ಡಬ್ಲೂಪಿಎಲ್ ಇತಿಹಾಸದಲ್ಲಿ ಚೊಚ್ಚಲ‌ ಶತಕ ಬಾರಿಸಿದ ಸಾಧನೆ ಮಾಡಿದ ನ್ಯಾಟ್ ಸಿವರ್-ಬ್ರಂಟ್ ಯಾರು?

WPL 2026 Nat Sciver-Brunt: ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ನ್ಯಾಟ್ ಸಿವರ್-ಬ್ರಂಟ್ ಚೊಚ್ಚಲ ಶತಕ ಬಾರಿಸಿ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಹಾಗಾದ್ರೆ, ಈ ಆಟಗಾರ್ತಿ ಯಾರು ಹಾಗೂ ಹಿನ್ನೆಲೆ ಏನು ಎನ್ನುವ ಪ್ರಶ್ನೆ ಬಹುತೇಕ ಮಂದಿ ತಲೆಯಲ್ಲಿ ಇರುತ್ತದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ನ್ಯಾಟ್ ಸಿವರ್-ಬ್ರಂಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 57 ಎಸೆತಗಳಲ್ಲಿ ಅಜೇಯ 100 ರನ್‌ಗಳ ಶತಕವನ್ನು ಬಾರಿಸಿದ್ದಾರೆ. ಈ ಮೂಲಕ ಡಬ್ಲ್ಯೂಪಿಲ್‌ ಇತಿಹಾಸದಲ್ಲೇ ಮೊಟ್ಟ ಮೊದಲ ಶತಕ ಬಾರಿಸಿದ ಬ್ಯಾಟರ್ ಎಂಬ ವಿಶೇಷ ಸಾಧನೆ ಮಾಡಿದ್ದಾರೆ. ಈ ಶತಕದಲ್ಲಿ 16 ಬೌಂಡರಿ, 1 ಸಿಕ್‌ರ್ ಸೇರಿವೆ.

WPL 2026 Who Is Nat Sciver-Brunt First Player to Score a Century in Women s Premier League History

ಅವರ ಈ ಶತಕ ಮುಂಬೈ ಇಂಡಿಯನ್ಸ್‌ ತಂಡ ಬೃಹತ್ ಮೊತ್ತ ಕಲೆಹಾಕಲು ಕಾರಣವಾಯಿತು. ಇದರಿಂದ ತಂಡ ಆರ್‌ಸಿಬಿ ವಿರುದ್ಧ 15 ರನ್‌ಗಳಿಂದ ಗೆಲುವು ಸಾಧಿಸಿತು. ನ್ಯಾಟ್ ಸಿವರ್-ಬ್ರಂಟ್ ಡಬ್ಲ್ಯೂಪಿಲ್‌ ಇತಿಹಾಸದಲ್ಲಿ ಚೊಚ್ಚಲ ಶತಕ ಬಾರಿಸಿ ಇದುವರೆಗೆ ಯಾರೂ ಮಾಡಿರದ ಸಾಧನೆಯನ್ನು ಮಾಡಿ ಹೊಸ ದಾಖಲೆ ಬರೆದರು.

ನ್ಯಾಟ್ ಸಿವರ್-ಬ್ರಂಟ್ ಯಾರು?: ನ್ಯಾಟ್ ಸಿವರ್-ಬ್ರಂಟ್ ಇಂಗ್ಲೆಂಡ್‌ ಕ್ರಿಕೇಟರ್ ಆಗಿದ್ದು, ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪ್ರಮುಖ ಆಲ್‌ರೌಂಡರ್‌ ಆಟಗಾರ್ತಿ ಆಗಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ತೋರುವ ಅವರು, ಇಂಗ್ಲೆಂಡ್ ತಂಡ ಹಲವು ಪ್ರಮುಖ ಪಂದ್ಯಗಳಲ್ಲಿ ಗೆಲುವು ಸಾಧಿಸಲು ಮಹತ್ವದ ಪಾತ್ರ ವಹಿಸಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಹಾಗೂ ಮಧ್ಯಮ ವೇಗದ ಬೌಲರ್ ಆಗಿರುವ ಸಿವರ್-ಬ್ರಂಟ್, ತಂಡ ಸಂಕಷ್ಟದಲ್ಲಿ ಇರುವಾಗ ಜವಾಬ್ದಾರಿಯುತವಾಗಿ ಆಟ ಆಡಲು ಹೆಸರುವಾಸಿಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವಕಪ್‌, ಸರಣಿಗಳು ಮತ್ತು ಟಿ-20 ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಸ್ಟಾರ್ ಆಲ್‌ರೌಂಡರ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಡಬ್ಲ್ಯೂಪಿಎಲ್‌ನಲ್ಲಿ ಹೊಸ ದಾಖಲೆ: ಭಾರತದಲ್ಲಿ ಆರಂಭವಾದ ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ನ್ಯಾಟ್ ಸಿವರ್-ಬ್ರಂಟ್ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದನ್ನು ಅವರು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ, ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಅಜೇಯ ಶತಕ ಬಾರಿಸುವ ಮೂಲಕ ಡಬ್ಲ್ಯೂಪಿಎಲ್‌ ಇತಿಹಾಸದಲ್ಲೇ ಚೊಚ್ಚಲ ಶತಕ ಸಾಧನೆ ಮಾಡಿದ ಆಟಗಾರ್ತಿಯಾಗಿ ಗುರುತಿಸಿಕೊಂಡರು.

ಡಬ್ಲ್ಯೂಪಿಎಲ್‌ನಲ್ಲಿ ಮೊದಲ ಶತಕ: ನ್ಯಾಟ್ ಸಿವರ್-ಬ್ರಂಟ್ ಸಿಡಿಸಿದ ಶತಕವು ಕೇವಲ ವೈಯಕ್ತಿಕ ಸಾಧನೆಯಷ್ಟೇ ಅಲ್ಲ. ಡಬ್ಲ್ಯೂಪಿಎಲ್‌ನ ಇತಿಹಾಸದಲ್ಲೇ ಹೊಸ ಅಧ್ಯಾಯ ಆಗಿದೆ. ಇದುವರೆಗೆ ಹಲವಾರು ಆಟಗಾರ್ತಿಗಳು 90ರ ಗಡಿ ದಾಟಿದ್ದರೂ, ಶತಕದ ಗುರಿ ತಲುಪಿರಲಿಲ್ಲ. ಆ ಕೊರತೆಯನ್ನು ಮುರಿದವರು ಸಿವರ್-ಬ್ರಂಟ್ ಆಗಿದ್ದಾರೆ.

ಅವರ ಈ ಇನಿಂಗ್ಸ್‌ನಲ್ಲಿ ಆಕ್ರಮಣಕಾರಿ ಆಟ ಕಂಡುಬಂದಿತು. ಅವರ ಈ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಮೂಡಿಬಂದ ಶತಕ ಇಡೀ ಡಬ್ಲ್ಯೂಪಿಎಲ್‌ ಇತಿಹಾಸದಲ್ಲೇ ಒಂದು ಹೊಸ ಅಧ್ಯಾಯ ಆಯಿತು. ಈ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠ ಮೊತ್ತ ದಾಖಲಿಸಿ ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿತು. ಒಟ್ಟಿನಲ್ಲಿ ನ್ಯಾಟ್ ಸಿವರ್-ಬ್ರಂಟ್ ಅವರ ಈ ಸಾಧನೆ ಮಹಿಳಾ ಪ್ರೀಮಿಯರ್ ಲೀಗ್‌ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಮಾಡಿದ್ದು, ಭವಿಷ್ಯದ ಯುವ ಕ್ರಿಕೆಟರ್‌ಗಳಿಗೆ ದೊಡ್ಡ ಪ್ರೇರಣೆಯಾಗಿ ಉಳಿದಿದೆ. ಇನ್ನೂ ಮುಂದಿನ ದಿನಗಳಲ್ಲಿ ಈ ದಾಖಲೆ ಯಾರು ಮುರಿಯಲಿದ್ದಾರೆ ಎಂದು ಕಾದುನೋಡಬೇಕಿದೆ.

Story first published: Tuesday, January 27, 2026, 10:26 [IST]
Other articles published on Jan 27, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+