For Quick Alerts
ALLOW NOTIFICATIONS  
For Daily Alerts
 

WPL 2026: ಗುಜರಾತ್‌, ಯುಪಿ ಪಂದ್ಯ ನಡೆಯುವುದು ಯಾವಾಗ? ನೇರ ಪ್ರಸಾರ ಎಲ್ಲಿ? ಪ್ಲೇಯಿಂಗ್ ಇಲೆವೆನ್‌ ಮಾಹಿತಿ

ನವಿ ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ ನಾಲ್ಕನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಶನಿವಾರ ಈ ಲೀಗ್‌ನಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಎರಡನೇ ಪಂದ್ಯದಲ್ಲಿ ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿರುವ ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಜ್ ತಂಡಗಳು ಕಾದಾಟ ನಡೆಸಲಿವೆ. ಎರಡು ತಂಡಗಳಲ್ಲಿ ವಿದೇಶಿ ಸ್ಟಾರ್ ಆಟಗಾರ್ತಿಯರು ಇದ್ದಾರೆ. ಮೊದಲ ಗೆಲುವಿನ ನಗೆ ಬೀರಲು ಎರಡೂ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ.

ಕಳೆದ ಆವೃತ್ತಿಯ ಡಬ್ಲ್ಯೂಪಿಎಲ್‌ನಲ್ಲಿ ಎರಡೂ ತಂಡಗಳು ಸ್ಥಿರ ಪ್ರದರ್ಶನ ನೀಡಿರಲಿಲ್ಲ. ಈ ಬಾರಿ ಪ್ರಶಸ್ತಿ ಎತ್ತಲೇ ಬೇಕು ಎಂಬ ಹಠದಿಂದ ಯುಪಿ, ಗುಜರಾತ್ ಅಂಗಳ ಪ್ರವೇಶಿಸಲಿವೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಮೆಗ್‌ ಲ್ಯಾನಿಂಗ್ ಈಗ ಯುಪಿ ಪರ ಕಣಕ್ಕೆ ಇಳಿಯಲಿದ್ದಾರೆ. ಅಲ್ಲದೆ ಇವರು ಈ ತಂಡದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಗುಜರಾತ್ ತಂಡವನ್ನು ಆಶ್ಲೀ ಗಾರ್ಡ್ನರ್ ಮುನ್ನಡೆಸುತ್ತಿದ್ದಾರೆ.

WPL 4 UP Warriorz vs Gujarat Giants Preview Meg Lanning to Lead UP Against Ashleigh s Gujarat

ಯುಪಿ ತಂಡದಲ್ಲಿ ಸಾಲು ಸಾಲು ಸ್ಟಾರ್ ಆಟಗಾರ್ತಿಯರು ಇದ್ದಾರೆ. ಯಾರಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ನೀಡಬೇಕು ಎಂಬುದೇ ದೊಡ್ಡ ಚಿಂತೆಯಾಗಿದೆ. ನಾಯಕಿ ಮೆಗ್ ಲ್ಯಾನಿಂಗ್ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಟಾಪ್‌ ಆರ್ಡರ್‌ನಲ್ಲಿ ಫೋಬೆ ಲಿಚ್‌ಫೀಲ್ಡ್, ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ಕಾಣಿಸಿಕೊಳ್ಳಲಿದ್ದಾರೆ. ಆಲ್‌ರೌಂಡರ್‌ ರೂಪದಲ್ಲಿ ದೀಪ್ತಿ ಶರ್ಮಾ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ.

ಡಿಯಾಂಡ್ರಾ ಡಾಟಿನ್, ಸೋಫಿ ಎಕ್ಲೆಸ್ಟೋನ್, ಶಿಖಾ ಪಾಂಡೆ, ಆಶಾ ಶೋಭನಾ, ಕ್ರಾಂತಿ ಗೌಡ್ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬ ಬಲ್ಲ ಆಟಗಾರ್ತಿಯರು. ಇವರು ಶಿಸ್ತು ಬದ್ಧ ದಾಳಿ ನಡೆಸಿ ಎದುರಾಳಿ ಬ್ಯಾಟರ್‌ಗಳಿಗೆ ಕಾಡಬಲ್ಲರು. ಮೊದಲ ಗೆಲುವಿನ ನಗೆ ಬೀರಲು ಸಂಘಟಿತ ಆಟದ ಅನಿವಾರ್ಯತೆ ಇದೆ.

WPL 4 UP Warriorz vs Gujarat Giants Preview Meg Lanning to Lead UP Against Ashleigh s Gujarat

ಹೇಗಿರಲಿದೆ ಯುಪಿ ಪ್ಲೇಯಿಂಗ್ ಇಲೆವೆನ್‌?

ಮೆಗ್ ಲ್ಯಾನಿಂಗ್ (ನಾಯಕಿ), ಫೋಬೆ ಲಿಚ್‌ಫೀಲ್ಡ್, ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ಸಿಮ್ರಾನ್ ಶೇಖ್, ದೀಪ್ತಿ ಶರ್ಮಾ, ಡಿಯಾಂಡ್ರಾ ಡಾಟಿನ್, ಸೋಫಿ ಎಕ್ಲೆಸ್ಟೋನ್, ಶಿಖಾ ಪಾಂಡೆ, ಆಶಾ ಶೋಭನಾ, ಕ್ರಾಂತಿ ಗೌಡ್.

ಆಶ್ಲೀ ಗಾರ್ಡ್ನರ್ ನೇತೃತ್ವದ ಗುಜರಾತ್ ಜೈಂಟ್ಸ್ ತಂಡವು ಬಲಿಷ್ಠ ವಿದೇಶಿ ಆಟಗಾರ್ತಿಯರನ್ನು ಹೊಂದಿದೆ. ಈ ಆಟಗಾರ್ತಿಯರು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಆಶ್ಲೀ ಗಾರ್ಡ್ನರ್, ಯಾಸ್ತಿಕಾ ಭಾಟಿಯಾ, ಬೆತ್ ಮೂನಿ , ಶಫಾಲಿ ವರ್ಮಾ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಆರ್‌ಸಿಬಿ ತಂಡದ ಪರ ಕಳೆದ ಆವೃತ್ತಿಯಲ್ಲಿ ಆಡಿದ್ದ ರೇಣುಕಾ ಸಿಂಗ್ ಠಾಕೂರ್‌ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇನ್ನು ತಂಡದಲ್ಲಿ ಸ್ಪಿನ್ ಬೌಲರ್‌ಗಳ ದಂಡೇ ಇದೆ. ಜಾರ್ಜಿಯಾ ವೇರ್‌ಹ್ಯಾಮ್, ರಾಜೇಶ್ವರಿ ಗಾಯಕ್ವಾಡ್ ಮತ್ತು ತನುಜಾ ಕನ್ವರ್‌ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ಕಾಟ ನೀಡಬಲ್ಲರು.

ಹೇಗಿರಲಿದೆ ಗುಜರಾತ್ ಪ್ಲೇಯಿಂಗ್ ಇಲೆವೆನ್‌?

ಯಾಸ್ತಿಕಾ ಭಾಟಿಯಾ, ಬೆತ್ ಮೂನಿ , ಶಫಾಲಿ ವರ್ಮಾ, ಫ್ರಾಂಕಿ ಮ್ಯಾಕೆ, ಆಶ್ಲೀ ಗಾರ್ಡ್ನರ್ (ನಾಯಕಿ), ತನುಜಾ ಕನ್ವರ್, ಸೌಮ್ಯ ತಿವಾರಿ, ಮಿನ್ನು ಮಣಿ, ಜೆಸ್ ಜೊನಾಸೆನ್, ಜಾರ್ಜಿಯಾ ವೇರ್ಹ್ಯಾಮ್, ಸಯಾಲಿ ಸತ್ಘರೆ/ ರಾಜೇಶ್ವರಿ ಗಾಯಕ್ವಾಡ್

ಪಂದ್ಯ ಆರಂಭವಾಗುವುದು ಯಾವಾಗ?

ಯುಪಿ ವಾರಿಯರ್ಜ್ ಹಾಗೂ ಗುಜರಾತ್ ಜೈಂಟ್ಸ್ ನಡುವಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಪಂದ್ಯ ಆರಂಭಕ್ಕೂ ಅರ್ಧಗಂಟೆ ಮೊದಲು ಟಾಸ್‌ ನಡೆಯಲಿದೆ.

ಪಂದ್ಯ ಪ್ರಸಾರವಾಗುವುದು ಎಲ್ಲಿ?

ಡಬ್ಲ್ಯೂಪಿಎಲ್‌ನ 2ನೇ ಪಂದ್ಯವನ್ನು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಇನ್ನು ಆನ್‌ಲೈನ್‌ನಲ್ಲಿ ಅಭಿಮಾನಿಗಳು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ.

Story first published: Saturday, January 10, 2026, 8:15 [IST]
Other articles published on Jan 10, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+