WPL Auction 2023: ಪ್ರಥಮ ಆವೃತ್ತಿಯ ಹರಾಜು ಪಟ್ಟಿ ಬಿಡುಗಡೆ, ಅದೃಷ್ಟ ಪರೀಕ್ಷೆಯಲ್ಲಿ 409 ಆಟಗಾರ್ತಿಯರು

ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಿಸಿಸಿಐ ಅಂತಿಮ ಹಂತದ ಸಿದ್ಧತೆಗಳನ್ನು ನಡೆಯುತ್ತಿದ್ದು ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮಂಗಳವಾರ ಹರಾಜಿನಲ್ಲಿ ಭಾಗವಹಿಸುವ ಆಟಗಾರ್ತಿಯರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮಾರ್ಚ್ 4ರಿಂದ ಮೊದಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭವಾಗಲಿದ್ದು ಮಾರ್ಚ್ 26ರಂದು ಫೈನಲ್ ಪಂದ್ಯ ನಡೆಯಲಿದೆ. ಎರಡು ಕ್ರೀಡಾಂಗಣಗಳಲ್ಲಿ ಈ ಪಂದ್ಯಗಳನ್ನು ಬಿಸಿಸಿಐ ಆಯೋಜಿಸುತ್ತಿದ್ದು ಬ್ರೆಬೋರ್ನ್ ಹಾಗೂ ಡಿವೈ ಪಾಟೀಲ್ ಸ್ಟೇಡಿಯಮ್‌ಗಳಲ್ಲಿ ಈ ಪಂದ್ಯಗಳು ಆಯೋಜನೆಯಾಗಲಿದೆ.
ಈ ಹರಾಜಿಗೂ ಮುನ್ನ ಹರಾಜಿನಲ್ಲಿ ಭಾಗಿಯಾಗಲಿರುವ ಆಟಗಾರ್ತಿಯರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಒಟ್ಟು 409 ಆಟಗಾರ್ತಿಯರು ಈ ಪಟ್ಟಿಯಲ್ಲಿದ್ದು ಫೆಬ್ರವರಿ 13ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ಹರಾಜು ನಡೆಯಲಿದೆ.
ಮೊದಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಭಾಗವಹಿಸಲು ಹರಾಜಿಗಾಗಿ ಒಟ್ಟು 1525 ಆಟಗಾರ್ತಿಯರು ಹೆಸರು ನೊಂದಾಯಿಸಿದ್ದರು. ಈ ಪೈಕಿ 409 ಆಟಗಾರ್ತಿಯರನ್ನು ಹರಾಜಿನ ಅಂತಿಮ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ಅಹ್ಮದಾಬಾದ್, ಬೆಂಗಳೂರು, ದೆಹಲಿ, ಲಕ್ನೋ ಹಾಗೂ ಮುಂಬೈ ಮೂಲದ ಫ್ರಾಂಚೈಸಿಗಳು ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಲಿದೆ.
ಹರಾಜು ಪಟ್ಟಿಯಲ್ಲಿರುವ 409 ಆಟಗಾರ್ತಿಯರ ಪೈಕಿ 246 ಭಾರತೀಯ ಆಟಗಾರ್ತಿಯರಾಗಿದ್ದು 163 ವಿದೇಶಿ ಕ್ರಿಕೆಟಿಗರಾಗಿದ್ದಾರೆ. 202 ಕ್ಯಾಪ್‌ಡ್ ಆಟಗಾರ್ತಿಯರಾಗಿದ್ದು 199 ಅನ್‌ಕ್ಯಾಪ್‌ಡ್ ಅಟಗಾರ್ತಿಯರು. 8 ಆಟಗಾರ್ತಿಯರು 9 ಆಟಗಾರ್ತಿಯರು ಅಸೋಸಿಯೇಟ್ ರಾಷ್ಟ್ರಗಳ ಕ್ರಿಕೆಟರ್‌ಗಳಾಗಿದ್ದಾರೆ. 5 ತಂಡಗಳ ಪೈಕಿ 90 ಸ್ಥಾನಗಳು ಇದ್ದು ಇದರಲ್ಲಿ 30 ಸ್ಥಾನಗಳು ವಿದೇಶಿ ಆಟಗಾರ್ತಿಯರಿಗೆ ಮೀಸಲಾಗಿದೆ.
ಇನ್ನು ಈ ಹರಾಜಿನಲ್ಲಿ ಗರಿಷ್ಠ ಮೂಲಬೆಲೆ 50 ಲಕ್ಷ ರೂಪಾಯಿಯಾಗಿದ್ದು ಇದರಲ್ಲಿ 24 ಆಟಗಾರ್ತಿಯರು ಹೆಸರು ನೊಂದಾಯಿಸಿದ್ದಾರೆ. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಮತ್ತು ಅಂಡರ್ 19 ತಂಡದ ನಾಯಕಿ ಹಾಗೂ ಭಾರತ ತಂಡದ ಪ್ರಮುಖ ಆಟಗಾರ್ತಿ ಶಫಾಲಿ ವರ್ಮ ಸ್ಥಾನ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಆಲ್‌ರೌಂಡರ್‌ಗಳಾದ ಎಲ್ಲಿಸ್ ಪೆರ್ರಿ, ಆಶ್ಲೀಗ್ ಗಾರ್ಡ್ನರ್, ಜೆಸ್ ಜೊನಾಸ್ಸೆನ್, ಇಂಗ್ಲೆಂಡ್ ಆಲ್‌ರೌಂಡರ್ ಸೋಫಿ ಎಕ್ಲೆಸ್ಟೋನ್, ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್ ಮತ್ತು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಡಿಯಾಂಡ್ರಾ ಡಾಟಿನ್, ಇಂಗ್ಲೆಂಡ್‌ನ ನಟಾಲಿ ಸ್ಕೈವರ್, ಭಾರತದ ವೇಗಿ ರೇಣುಕಾ ಸಿಂಗ್ ಠಾಕೂರ್, ಆಸ್ಟ್ರೇಲಿಯಾದ ಜೆಮಿಮಾ ಠಾಕೂರ್, ಜೆಮಿಮಾ ಮೆಗ್ ಲ್ಯಾನಿಂಗ್, ಭಾರತದ ವೇಗಿ ಪೂಜಾ ವಸ್ತ್ರಾಕರ್, ಇಂಗ್ಲೆಂಡ್‌ನ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್, ಆಸ್ಟ್ರೇಲಿಯಾದ ವಿಕೆಟ್‌ಕೀಪರ್-ಬ್ಯಾಟರ್ ಅಲಿಸ್ಸಾ ಹೀಲಿ ಮತ್ತು ಭಾರತದ ವಿಕೆಟ್‌ಕೀಪರ್-ಬ್ಯಾಟರ್ ರಿಚಾ ಘೋಷ್ ಹಾಗೂ ಇತರ 13 ವಿದೇಶಿ ಆಟಗಾರ್ತಿಯರು 50 ಲಕ್ಷ ಮೂಲ ಬೆಲೆಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ.
ಎರಡನೇ ಗರಿಷ್ಠ ಮೂಲ ಬೆಲೆ 40 ಲಕ್ಷ ರೂಪಾಯಿಯಾಗಿದ್ದು 30 ಆಟಗಾರ್ತಿಯರು ಈ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದ್ದಾರೆ. ಫೆಬ್ರವರಿ 13 ರಂದು ಮಧ್ಯಾಹ್ನ 2:30ಕ್ಕೆ ಚೊಚ್ಚಲ ಆವೃತ್ತಿಯ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications