Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL Auction 2023: ಆರ್‌ಸಿಬಿ ತೆಕ್ಕೆಗೆ ಆಸಿಸ್ ಸ್ಟಾರ್ ಎಲೀಸ್ ಪೆರ್ರಿ ಹಾಗೂ ಕಿವೀಸ್ ಆಟಗಾರ್ತಿ

WPL Auction 2023: Ellyse Perry and Sophie Devine joins to Royal Challengers Bangalore

ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಮೊದಲ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಭರ್ಜರಿ ಬೇಟೆಯಾಡಿದೆ. ಮೊದಲಿಗೆ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು ಬೃಹತ್ ಮೊತ್ತಕ್ಕೆ ತೆಕ್ಕೆಗೆ ಹಾಕಿಕೊಂಡ ಆರ್‌ಸಿಬಿ ಅದಾದ ಬಳಿಕ ವಿಶ್ವ ಕ್ರಿಕೆಟ್‌ನ ಮತ್ತೋರ್ವ ಸ್ಟಾರ್ ಆಟಗಾರ್ತಿ ಆಸ್ಟ್ರೇಲಿಯಾದ ಎಲೀಸ್ ಪೆರ್ರಿ ಅವರನ್ನು ಕೂಡ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ.

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲೀಸ್ ಪೆರ್ರಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 1.7 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ತಂಡ ಮತ್ತೋರ್ವ ಸ್ಟಾರ್ ಆಟಗಾರ್ತಿಯನ್ನು ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ.

ಇನ್ನು ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ್ತಿ ಸೋಫಿ ಡಿವೈನ್ ಕೂಡ ಆರ್‌ಸಿಬಿ ತಂಡದ ಪಾಲಾಗಿದ್ದಾರೆ. ಸೋಫಿ ಡಿವೈನ್ ಅವರಿಗಾಗಿ ಆರ್‌ಸಿಬಿ ತಂಡ 50 ಲಕ್ಷ ರೂಪಾಯಿ ಬಿಡ್ ಮಾಡಿದ್ದು ತಂಡಕ್ಕೆ ಸೇರ್ಪಡೆಗೊಳಿಸಿದೆ. ಈ ಮೂಲಕ ಮೊದಲ ಸುತ್ತಿನಲ್ಲಿ ಆರ್‌ಸಿಬಿ ಉತ್ತಮ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿ ಯಶಸ್ಸು ಕಂಡಿದೆ.

Story first published: Monday, February 13, 2023, 15:35 [IST]
Other articles published on Feb 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+