For Quick Alerts
ALLOW NOTIFICATIONS  
For Daily Alerts
 

WPL Auction 2023: ಆರ್​​ಸಿಬಿ ಸೇರಿದ ಕರ್ನಾಟಕದ ಆಟಗಾರ್ತಿ ಶ್ರೇಯಾಂಕ ಪಾಟೀಲ್

WPL Auction 2023: Know About Shreyanka Patil, The Bengaluru Girl Who Added RCB To The WPL Auction

ಮಹಿಳಾ ಪ್ರೀಮಿಯರ್ ಲೀಗ್ 2023ರ ಹರಾಜಿನಲ್ಲಿ ಆರ್​​ಸಿಬಿ ಫ್ರಾಂಚೈಸಿ ಬಲಿಷ್ಠವಾದ ತಂಡವನ್ನು ಕಟ್ಟಿದೆ. ಸ್ಮೃತಿ ಮಂದಾನ, ಎಲಿಸಾ ಪೆರ್ರಿ, ರಿಚಾ ಘೋಷ್, ರೇಣುಕಾ ಸಿಂಗ್ ಠಾಕೂರ್ ಸೇರಿದಂತೆ ಪ್ರಮುಖ ಆಟಗಾರರು ತಂಡ ಸೇರಿಕೊಂಡಿದ್ದು ತಂಡದ ಬಲವನ್ನು ಹೆಚ್ಚಿಸಿದೆ.

ಪ್ರಮುಖ ಆಟಗಾರರ ಜೊತೆ ಆರ್​​ಸಿಬಿ ತಂಡದಲ್ಲಿ ಹಲವು ಯುವ ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಮಹಿಳಾ ತಂಡಕ್ಕಾಗಿ ಆಡಿರುವ ಬೆಂಗಳೂರಿನ ಶ್ರೇಯಾಂಕ ಪಾಟೀಲ್ ಕೂಡ ಆರ್​​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಶ್ರೇಯಾಂಕ ಪಾಟೀಲ್‌ ಆಫ್‌ಸ್ಪಿನ್ನರ್ ಬೌಲರ್, ದೇಶೀಯ ಕ್ರಿಕೆಟ್‌ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದ ಬಳಿಕ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆರ್​​ಸಿಬಿ ಮ್ಯಾನೇಜ್‌ಮೆಂಟ್ ಹಲವು ದೇಶೀಯ ಆಟಗಾರರನ್ನು ಹಲವು ತಿಂಗಳಿನಿಂದ ಗಮನಿಸುತ್ತಾ ಬಂದಿತ್ತು.

ಹಿರಿಯ ಮಹಿಳೆಯರ ಟಿ20 ಟ್ರೋಫಿ ಟೂರ್ನಿಯಲ್ಲಿ ಆಡಿರುವ ಶ್ರೇಯಾಂಖ ಪಾಟೀಲ್ 15.71 ಸರಾಸರಿಯಲ್ಲಿ 7 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ದಕ್ಷಿಣ ವಲಯಕ್ಕಾಗಿ ಆಡಿದ ಪಂದ್ಯದಲ್ಲಿ 8 ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಆಟಗಾರ್ತಿ ಎನ್ನುವ ಸಾಧನೆ ಮಾಡಿದ್ದರು.

WPL Auction 2023: Know About Shreyanka Patil, The Bengaluru Girl Who Added RCB To The WPL Auction

ಏಕದಿನ ಕಪ್‌ನಲ್ಲಿ 20 ವಿಕೆಟ್ ಪಡೆದ ಶ್ರೇಯಾಂಕ

ಇತ್ತೀಚೆಗೆ ಮುಕ್ತಾಯವಾದ ಹಿರಿಯ ಮಹಿಳೆಯರ ಏಕದಿನ ಕಪ್‌ನಲ್ಲಿ ಕರ್ನಾಟಕ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತ್ತು. ಈ ಪಂದ್ಯಾವಳಿಯಲ್ಲಿ ಶ್ರೇಯಾಂಕ ಪಾಟಿಲ್ 20 ವಿಕೆಟ್ ಪಡೆಯುವ ಮೂಲಕ ಜಂಟಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಕಳೆದ ವರ್ಷ ಜಿಂಬಾಬ್ವೆ ವಿರುದ್ಧ ಎಕ್ಸಿಬಿಷನ್ ಪಂದ್ಯಗಳಲ್ಲಿ ಆಡಿದ್ದ ಶ್ರೇಯಾಂ ಪಾಟಿಲ್ ತಮ್ಮ ಬೌಲಿಂಗ್ ಚಾಕಚಕ್ಯತೆಯಿಂದ ಗಮನ ಸೆಳೆದಿದ್ದರು. ಭಾರತ ತಂಡಕ್ಕಾಗಿ ಆಡಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿರುವ ಶ್ರೇಯಾಂಕ ಪಾಟಿಲ್ ಅದಕ್ಕಾಗಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.

WPL Auction 2023: Know About Shreyanka Patil, The Bengaluru Girl Who Added RCB To The WPL Auction

ವಿಶ್ವದ ಉತ್ತಮ ಆಟಗಾರರ ಜೊತೆ ಆಡುವ ಅವಕಾಶ

ಪ್ರಮುಖ ಆಟಗಾರರ ಜೊತೆ ಆಡುವ ಅವಕಾಶ ಸಿಕ್ಕಿರುವುದು ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಸಾಕಷ್ಟು ಸಹಕಾರಿಯಾಗಲಿದೆ. ವಿಶ್ವದ ಉತ್ತಮ ಕ್ರಿಕೆಟಿಗರಾದ ಎಲ್ಲಿಸ್ ಪೆರ್ರಿ, ಮೇಗನ್ ಸ್ಕಟ್, ಹೀಥರ್ ನೈಟ್, ಸೋಫಿ ಡಿವೈನ್, ಸ್ಮೃತಿ ಮಂದಾನರಂತಹ ಆಟಗಾರರ ಜೊತೆ ಶ್ರೇಯಾಂಕ ಪಾಟಿಲ್ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ. ತಂಡದಲ್ಲಿ ಮಾತ್ರವಲ್ಲ ಆಡುವ ಬಳಗದಲ್ಲಿ ಕೂಡ ಶ್ರೇಯಾಂಕ ಪಾಟಿಲ್‌ಗೆ ಅವಕಾಶ ಸಿಗಬೇಕೆಂದು ಆರ್​​ಸಿಬಿ ಅಭಿಮಾನಿಗಳು ಹಾರೈಸಿದ್ದಾರೆ.

Story first published: Tuesday, February 14, 2023, 11:01 [IST]
Other articles published on Feb 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+