WPL Auction 2023: ಅಪ್ಪ-ಅಮ್ಮನಿಗಾಗಿ ಮನೆ ಖರೀದಿಸುತ್ತೇನೆ ಎಂದ ಆರ್ಸಿಬಿ ಆಟಗಾರ್ತಿ

ಮಹಿಳಾ ಪ್ರೀಮಿಯರ್ ಲೀಗ್ 2023 ಹರಾಜಿನಲ್ಲಿ ಹಲವು ಆಟಗಾರರಿಗೆ ಅದೃಷ್ಟ ಖುಲಾಯಿಸಿದೆ. 3.40 ಕೋಟಿ ರುಪಾಯಿಗಳಿಗೆ ಹರಾಜಾಗುವ ಮೂಲಕ ಸ್ಮೃತಿ ಮಂದಾನ ಮಹಿಳಾ ಪ್ರೀಮಿಯರ್ ಲೀಗ್‌ನ ದುಬಾರಿ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಭಾರತ ತಂಡದ ಮತ್ತೊಬ್ಬ ಆಟಗಾರ್ತಿ 19 ವರ್ಷದ ರಿಚಾ ಘೋಷ್ ಕೂಡ ಬರೋಬ್ಬರಿ 1.90 ಕೋಟಿ ರುಪಾಯಿಗಳಿಗೆ ಆರ್ಸಿಬಿ ತಂಡದ ಪಾಲಾಗಿದ್ದಾರೆ. ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದ ಹುಡುಗಿಯೊಬ್ಬಳು, ಭಾರತ ತಂಡ ಸೇರಿದ್ದು ದೊಡ್ಡ ಸಾಧನೆ. ಈಗ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಬಂದಿರುವ ಹಣದಲ್ಲಿ ಅಪ್ಪ-ಅಮ್ಮನಿಗಾಗಿ ಮನೆ ಖರೀದಿಸುವ ಯೋಜನೆಯಲ್ಲಿದ್ದಾರೆ ರಿಚಾ ಘೋಷ್.
ಟೀಂ ಇಮೀಡಯಾದ ಯುವ ವಿಕೆಟ್-ಕೀಪರ್ ಆಗಿರುವ ರಿಚಾ ಘೋಷನ್ ಸ್ಪೋಟಕ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದಾರೆ. ಮಹಿಳಾ ಟಿ20 ವಿಶ್ವಕಪ್‌ನ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೂಡ ರಿಚಾ ಘೋಷ್ ಮಿಂಚಿದ್ದರು. 20 ಎಸೆತಗಳಲ್ಲಿ 31 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಇತ್ತೀಚಿನ ಪ್ರದರ್ಶನಗಳನ್ನು ನೋಡಿ ಆರ್ಸಿಬಿ ಅವರನ್ನು ದುಬಾರಿ ಮೊತ್ತಕ್ಕೆ ಖರೀದಿ ಮಾಡಿದೆ.

ಭಾರತ ತಂಡದ ಭರವಸೆಯ ಬ್ಯಾಟರ್
ರಿಚಾ ಘೋಷ್ 16 ವರ್ಷ ವಯಸ್ಸಿನವರಿದ್ದಾಗಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಉತ್ತಮವಾದ ಪ್ರದರ್ಶನವನ್ನೇ ನೀಡಿದ್ದಾರೆ. ಸದ್ಯ 19 ವರ್ಷ ವಯಸ್ಸಿನ ರಿಚಾಘೋಷ್ 17 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ. ಎಲ್ಲಾ ಪಂದ್ಯಗಳನ್ನು ಸೇರಿ ಒಟ್ಟು 738 ರನ್ ಗಳಿಸುವ ಮೂಲಕ ಭರವಸೆ ಮೂಡಿಸಿದ್ದಾರೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್-19 ಮಹಿಳಾ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ರಿಚಾ ಘೋಷ್ ಕೂಡ ಇದ್ದರು. ಸದ್ಯ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ.

ಮನೆ ಖರೀದಿ ಮಾಡಬೇಕು ಎಂದ ರಿಚಾ
ರಿಚಾ ಘೋಷ್ ಪೋಷಕರು ಮಗಳ ಸಾಧನೆಯ ಹಿಂದಿನ ದೊಡ್ಡ ಶಕ್ತಿಯಾಗಿದ್ದಾರೆ. ದೊಡ್ಡ ಮೊತ್ತಕ್ಕೆ ಹರಾಜಾದ ನಂತರ ಪೋಷಕರ ಸಹಕಾರವನ್ನು ನೆನೆದ ರಿಚಾ ಘೋಷ್ ಕೋಲ್ಕತ್ತಾದಲ್ಲಿ ಅಪ್ಪ ಅಮ್ಮನಿಗಾಗಿ ಒಂದು ಮನೆ ತೆಗೆದುಕೊಳ್ಳಬೇಕು ಅವರು ಅಲ್ಲಿ ನೆಲೆಗೊಳ್ಳಬೇಕು ಎಂದು ಬಯಸಿದ್ದಾರೆ.
ಮಗಳು ದೊಡ್ಡ ಮೊತ್ತಕ್ಕೆ ಹರಾಜಾಗುತ್ತಿದ್ದಂತೆ ಪೋಷಕರು ಕೂಡ ಸಂಭ್ರಮಿಸಿದ್ದಾರೆ. ಮಗಳ ಸಾಧನೆ ಕಂಡು ಹೆಮ್ಮೆ ಪಟ್ಟಿದ್ದಾರೆ.

ಪೋಷಕರಿಗೆ ಸಂತಸ
ರಿಚಾ ಘೋಷ್ ಅವರ ತಂದೆ ಮನಬೇಂದ್ರ ಘೋಷ್ ಮಾತನಾಡಿ, ಮಗಳ ಸಾಧನೆಗೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. ಅವಳು ನನ್ನ ಮಗಳು ಎನ್ನುವ ಹೆಮ್ಮೆ ಇದೆ. ತಂಡದ ಎಲ್ಲಾ ಆಟಗಾರರ ಮೇಲೆ ಹೆಮ್ಮೆ ಪಡುತ್ತೇನೆ. ಇದೊಂದು ಪ್ರಯಾಣ, ಆಕೆ ತನ್ನ ಕನಸಿನ ಬಗ್ಗೆ ಹೆಚ್ಚಿನ ಗಮನ ಹೊಂದಿದ್ದಾಳೆ. ಅವಳಿಗೆ ದೊಡ್ಡ ಗುರಿ ಇದೆ. ಅದರ ಬಗ್ಗೆ ಗಮನ ಹರಿಸಬೇಕು. ಈ ಬಾರಿ ವಿಶ್ವಕಪ್‌ನಲ್ಲಿ ಗೆದ್ದು ಬರಬೇಕು" ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications