Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Smriti Mandhana : ನಮಸ್ಕಾರ ಬೆಂಗಳೂರು ಎಂದ ಆರ್​​ಸಿಬಿ ಸೇರಿದ ಸ್ಮೃತಿ ಮಂದಾನ

WPL Auction 2023: Smriti Mandhana Tweeted Namaskara Bengaluru After Being Sold To RCB

ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. 3.40 ಕೋಟಿ ರುಪಾಯಿಗೆ ಅವರನ್ನು ಆರ್​​ಸಿಬಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಸ್ಮೃತಿ ಮಂದಾನ ತಂಡಕ್ಕೆ ಸೇರ್ಪಡೆಯಾಗಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ ಹರಾಜಿಗೆ ಮುನ್ನವೇ ಆರ್​​ಸಿಬಿ ಅಭಿಮಾನಿಗಳು ಸ್ಮೃತಿ ಮಂದಾನರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಸಾಮಾಜಿಕ ಜಾಣತಾಣದಲ್ಲಿ ಒತ್ತಾಯಿಸಿದ್ದರು.

ಇನ್ನು ಸ್ಮೃತಿ ಮಂದಾನ ಆರ್​​ಸಿಬಿ ತಂಡಕ್ಕೆ ಸೇರುತ್ತಿದ್ದಂತೆ ಭಾರತ ಮಹಿಳಾ ತಂಡದ ಆಟಗಾರರು ಮಂದಾನರನ್ನು ಅಭಿನಂದಿಸಿದರು. ಆರ್ ಸಿಬಿ ತಂಡ ಸೇರಿದ್ದಕ್ಕೆ ಸ್ಮೃತಿ ಮಂದಾನ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸ್ಮೃತಿ ಮಂದಾನ 'ನಮಸ್ಕಾರ ಬೆಂಗಳೂರು' ಎನ್ನುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. 18ನೇ ನಂಬರ್ ಜೆರ್ಸಿ ತೊಟ್ಟಿರುವ ವಿರಾಟ್ ಕೊಹ್ಲಿ ಆರ್ ಸಿಬಿ ಪುರುಷರ ತಂಡದಲ್ಲಿದ್ದರೆ, ಅದೇ ಸಂಖ್ಯೆಯ ಜೆರ್ಸಿ ತೊಟ್ಟಿರುವ ಸ್ಮೃತಿ ಮಂದಾನ ಮಹಿಳಾ ತಂಡದಲ್ಲಿ ಆಡಲಿದ್ದಾರೆ.

ಆರ್​​ಸಿಬಿ ಫ್ರಾಂಚೈಸಿಗಾಗಿ ಆಡಲು ಖುಷಿಯಾಗುತ್ತದೆ

ಜಿಯೋ ಸಿನಿಮಾ ಜೊತೆ ಮಾತನಾಡಿದ ಸ್ಮೃತಿ ಮಂದಾನ ಆರ್​​ಸಿಬಿ ತಂಡಕ್ಕೆ ಸೇರ್ಪಡೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇದು ಮರೆಯಲಾಗದ ದಿನವಾಗಿದೆ ಎಂದ ಅವರು, ಮಹಿಳಾ ಕ್ರಿಕೆಟ್‌ಗೆ ಮಾನ್ಯತೆ ಸಿಗುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ತಿಳಿಸಿದರು.

ಐಪಿಎಲ್‌ನಲ್ಲಿ ಆರ್​​ಸಿಬಿ ದೊಡ್ಡ ತಂಡವಾಗಿದೆ, ದೊಡ್ಡ ದೊಡ್ಡ ಆಟಗಾರರು ತಂಡದಲ್ಲಿದ್ದಾರೆ. ಅಂತಹ ಪ್ರಾಂಚೈಸಿ ಜೊತೆ ಆಡಲು ಖುಷಿಯಾಗುತ್ತದೆ. ಇದು ಅತ್ಯುತ್ತಮ ಲೀಗ್ ಆಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

WPL Auction 2023: Smriti Mandhana Tweeted Namaskara Bengaluru After Being Sold To RCB

ಆರ್​​ಸಿಬಿ ತಂಡಕ್ಕೆ ಸಾರಥಿ?

ಸ್ಮೃತಿ ಮಂದಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗುವುದು ಖಚಿತ ಎನ್ನಲಾಗಿದೆ. ಆಕೆಯನ್ನು ನಾಯಕಿಯನ್ನಾಗಿ ಮಾಡಲೆಂದೇ ಅವರನ್ನು ದೊಡ್ಡ ಮೊತ್ತಕ್ಕೆ ಆರ್ ಸಿಬಿ ಖರೀದಿ ಮಾಡಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಕೆಲವು ಅಭಿಮಾನಿಗಳು ಆರ್ ಸಿಬಿ ಮಹಿಳಾ ತಂಡ ಮೊದಲನೇ ಆವೃತ್ತಿಯಲ್ಲೇ ಕಪ್ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. ಸ್ಮೃತಿ ಮಂದಾನ ತಂಡಕ್ಕೆ ಸೇರ್ಪಡೆಯಾಗಿರುವುದು ತಂಡದ ಮೌಲ್ಯ, ಜನಪ್ರಿಯತೆಯನ್ನು ಹೆಚ್ಚಿಸಲಿದೆ ಎನ್ನುವುದು ಸುಳ್ಳಲ್ಲ.

ಮಂದಾನ ಜೊತೆ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಮತ್ತು ಆಲ್‌ರೌಂಡರ್ ಗಳಾದ ಎಲಿಸಾ ಪೆರ್ರಿ, ಸೋಫಿ ಡಿವೈನ್ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Story first published: Monday, February 13, 2023, 16:29 [IST]
Other articles published on Feb 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+