WPL Auction 2024: ಭಾರೀ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಅನ್ನಾಬೆಲ್ ಸದರ್ಲ್ಯಾಂಡ್!
ಶನಿವಾರ, ಡಿಸೆಂಬರ್ 9ರಂದು ಮುಂಬೈನ ಹೋಟೆಲ್‌ನಲ್ಲಿ ಬಹು ನಿರೀಕ್ಷಿತ 2024ರ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ (WPL) ಮಿನಿ ಹರಾಜು ಪ್ರಕ್ರಿಯೆ ನಡೆದಿದೆ.
2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಎಲ್ಲಾ ಐದು ಫ್ರಾಂಚೈಸಿಗಳಾದ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ತಮ್ಮ ಬಲಿಷ್ಠ ತಂಡಗಳನ್ನು ನಿರ್ಮಿಸಿಕೊಳ್ಳುತ್ತಿವೆ.

ಮಹಿಳಾ ಪ್ರೀಮಿಯರ್ ಲೀಗ್ (WPL) 2024ರ ಹರಾಜಿನಲ್ಲಿ ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಅನ್ನಾಬೆಲ್ ಸದರ್ಲ್ಯಾಂಡ್ ಅವರನ್ನು ಕಳೆದ ಬಾರಿಯ ರನ್ನರ್-ಅಪ್ ದೆಹಲಿ ಕ್ಯಾಪಿಟಲ್ಸ್ ತಂಡವು 2 ಕೋಟಿ ರೂಪಾಯಿಗಳ ದೊಡ್ಡ ಮೊತ್ತಕ್ಕೆ ಖರೀದಿಸಿದೆ.
ಮಿನಿ ಹರಾಜಿಗೂ ಮುನ್ನ ಆಲ್‌ರೌಂಡರ್ ಅನ್ನಾಬೆಲ್ ಸದರ್ಲ್ಯಾಂಡ್ ಅವರನ್ನು 2023ರ ಹರಾಜಿನಲ್ಲಿ 70 ಲಕ್ಷ ರೂಪಾಯಿಗೆ ಖರೀದಿಸಿದ್ದ ಗುಜರಾತ್ ಜೈಂಟ್ಸ್ ಬಿಡುಗಡೆ ಮಾಡಿತ್ತು.
22ರ ಹರೆಯದ ಅನ್ನಾಬೆಲ್ ಸದರ್ಲ್ಯಾಂಡ್ ಆಸ್ಟ್ರೇಲಿಯಾ ಮಹಿಳಾ ತಂಡದ ಪರ 22 ಟಿ20 ಪಂದ್ಯಗಳನ್ನು ಆಡಿದ್ದು, 19 ಇನ್ನಿಂಗ್ಸ್‌ಗಳಲ್ಲಿ 7.68ರ ಎಕಾನಮಿಯಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ 10 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ, ಅಜೇಯ 22 ರನ್‌ಗಳ ಅತ್ಯುತ್ತಮ ಸ್ಕೋರ್‌ನೊಂದಿಗೆ 97 ರನ್ ಗಳಿಸಿದ್ದಾರೆ.
ಈ ಬಾರಿಯ ಹರಾಜಿನಲ್ಲಿ 2 ಕೋಟಿ ರೂಪಾಯಿ ಮೌಲ್ಯದ ದಾಖಲೆ ಮುರಿಯುವ ಡೀಲ್‌ನೊಂದಿಗೆ ಗಮನ ಸೆಳೆದಿರುವ ಅನ್ನಾಬೆಲ್ ಸದರ್ಲ್ಯಾಂಡ್ ದಿನದ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಕ್ರಿಕೆಟ್ ಜಗತ್ತು ಶಾಕಿಂಗ್ ಆಗುವಂತೆ ಮಾಡಿದೆ.
ಅಕ್ಟೋಬರ್ 12, 2001ರಂದು ಜನಿಸಿದ ಅನ್ನಾಬೆಲ್ ಸದರ್ಲ್ಯಾಂಡ್ ಕೇವಲ ಕ್ರಿಕೆಟ್ ಸೆನ್ಸೇಷನ್ ಆಗಿಲ್ಲ. ಆಕೆ ಕ್ರಿಕೆಟ್ ಆಸ್ಟ್ರೇಲಿಯಾದ ಮಾಜಿ ಸಿಇಒ ಜೇಮ್ಸ್ ಸದರ್ಲ್ಯಾಂಡ್ ಅವರ ಮಗಳು ಮತ್ತು ವಿಕ್ಟೋರಿಯಾ ಆಲ್‌ರೌಂಡರ್ ವಿಲ್ ಸದರ್ಲ್ಯಾಂಡ್ ಅವರ ಸಹೋದರಿಯಾಗಿದ್ದು, ಅವಳ ರಕ್ತದಲ್ಲಿಯೇ ಕ್ರಿಕೆಟ್ ಹರಿಯುತ್ತದೆ.
ಮೆಲ್ಬೋರ್ನ್ ರೆನೆಗೇಡ್ಸ್‌ಗಾಗಿ 15 ವರ್ಷದೊಳಗಿನ ತಂಡದಿಂದ ತನ್ನ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಿದ ಅನ್ನಾಬೆಲ್ ಸದರ್ಲ್ಯಾಂಡ್ ಶೀಘ್ರವಾಗಿ ಬಿಗ್ ಬ್ಯಾಷ್‌ನಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರ್ತಿಯಾದರು. ಅನ್ನಾಬೆಲ್ ಸದರ್ಲ್ಯಾಂಡ್ ಅವರ ಅದ್ಭುತ ಪ್ರದರ್ಶನಗಳು 2019ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ರಾಷ್ಟ್ರೀಯ ತಂಡದೊಂದಿಗೆ ಒಪ್ಪಂದಕ್ಕೆ ಕಾರಣವಾಯಿತು.
2020ರಲ್ಲಿ ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವುದರಿಂದ ಹಿಡಿದು ಜೂನ್ 2023ರಲ್ಲಿ ಮಹಿಳೆಯರ ಆಶಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಶತಕವನ್ನು ಸಾಧಿಸುವವರೆಗೆ, ಅನ್ನಾಬೆಲ್ ಸದರ್ಲ್ಯಾಂಡ್ ಅವರ ಅಂತಾರಾಷ್ಟ್ರೀಯ ಪ್ರಯಾಣವು ಅದ್ಭುತವಾಗಿದೆ.
2022ರ ಮಹಿಳಾ ಏಕದಿನ ವಿಶ್ವಕಪ್‌ಗಾಗಿ ಆಸ್ಟ್ರೇಲಿಯದ ತಂಡದಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ ಸೇರ್ಪಡೆಯು ಅವಳನ್ನು ನಿರ್ಣಾಯಕ ಆಟಗಾರ್ತಿಯಾಗಿ ಬೆಳೆಸಿತು. ಅನ್ನಾಬೆಲ್ ಸ್ಥಿರ ಪ್ರದರ್ಶನಗಳು ಮತ್ತು ಜುಲೈ 2023ರಲ್ಲಿ ಐರ್ಲೆಂಡ್ ವಿರುದ್ಧ ಮೊದಲ ವೈಟ್‌ಬಾಲ್ ಶತಕವು ಆಕೆಯ ಜಾಗತಿಕ ಕ್ರಿಕೆಟ್ ಪ್ರಭಾವವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಕ್ರಿಕೆಟ್‌ನ ಹೊರತಾಗಿ, ಅನ್ನಾಬೆಲ್ ಸದರ್ಲ್ಯಾಂಡ್ ಆಸ್ಟ್ರೇಲಿಯನ್ ರೂಲ್ಸ್ ಫುಟ್‌ಬಾಲ್ ಆಡುವ ಮೂಲಕ ತನ್ನ ಬಹುಮುಖತೆಯನ್ನು ಪ್ರದರ್ಶಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications