ಶನಿವಾರ, ಡಿಸೆಂಬರ್ 9ರಂದು ಮುಂಬೈನ ಹೋಟೆಲ್‌ನಲ್ಲಿ ನಡೆದ ಬಹು ನಿರೀಕ್ಷಿತ 2024ರ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ (WPL) ಮಿನಿ ಹರಾಜು ಪ್ರಕ್ರಿಯೆಗೆ ತೆರೆಬಿದ್ದಿದೆ. ಎಲ್ಲಾ ಐದು ಪ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡವನ್ನು ನಿರ್ಮಿಸಿಕೊಂಡ ಸಮಾಧಾನದಲ್ಲಿವೆ.
ಐದು ಫ್ರಾಂಚೈಸಿಗಳು ತಮ್ಮ ಆದ್ಯತೆಯ ಆಯ್ಕೆಗಳನ್ನು ಪಡೆಯಲು ಬಿಡ್ಡಿಂಗ್ ವಾರ್ ನಡೆಸಿದರು ಮತ್ತು ಅಸ್ತಿತ್ವದಲ್ಲಿರುವ ತಂಡಕ್ಕೆ ಹೊಸ ಆಟಗಾರ್ತಿಯರನ್ನು ಸಂಯೋಜಿಸಿದರು. ಮುಂಬರುವ ಎರಡನೇ ಆವೃತ್ತಿಯಲ್ಲಿ ಬಲವಾಗಿ ಪುನರಾಗಮನ ಮಾಡಲು ಎದುರು ನೋಡುತ್ತಿವೆ.

ವುಮೆನ್ಸ್ ಪ್ರೀಮಿಯರ್ ಲೀಗ್‌ನ ಹರಾಜು ಕಿಕ್ ಆಸ್ಟ್ರೇಲಿಯನ್ ಯುವ ಬ್ಯಾಟರ್ ಫೋಬೆ ಲಿಚ್ಫೀಲ್ಡ್‌ಗಾಗಿ ಬಿಡ್ಡಿಂಗ್ ವಾರ್ ಪ್ರಾರಂಭವಾಯಿತು. 20 ವರ್ಷದ ಯುವ ಆಟಗಾರ್ತಿಯನ್ನು ಗುಜರಾತ್ ಜೈಂಟ್ಸ್ 1 ಕೋಟಿ ರೂಪಾಯಿಗೆ ಖರೀದಿಸಿತು.
ಸೋಫಿ ಡಂಕ್ಲಿ ಅವರು 2024ರ ಆವೃತ್ತಿಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ ಬಳಿಕ, ಅವರನ್ನು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಗುಜರಾತ್ ಜೈಂಟ್ಸ್ ಆರಂಭಿಕ ಬ್ಯಾಟರ್‌ನ ಹುಡುಕಾಟದಲ್ಲಿತ್ತು. ಇದೀಗ ಫೋಬೆ ಲಿಚ್ಫೀಲ್ಡ್ ರೂಪದಲ್ಲಿ ಸಿಕ್ಕಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ (DC) ಆಸ್ಟ್ರೇಲಿಯಾದ ಆಲ್‌ರೌಂಡರ್ ಅನ್ನಾಬೆಲ್ ಸದರ್ಲ್ಯಾಂಡ್ ಅವರಿಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಬಿಡ್ಡಿಂಗ್ ವಾರ್ ನಡೆಸಿತು ಮತ್ತು 2 ಕೋಟಿ ರೂಪಾಯಿಗಳನ್ನು ಚೆಲ್ಲಿತು.
ಎರಡು ಸ್ಥಳೀಯ ಅನ್‌ಕ್ಯಾಪ್ಡ್ ಆಟಗಾರ್ತಿಯರನ್ನು ಪಡೆದುಕೊಳ್ಳುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಹರಾಜಿನಲ್ಲಿ ತನ್ನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತು ಮತ್ತು 5 ಲಕ್ಷ ರೂಪಾಯಿ ಪರ್ಸ್ ಮೊತ್ತದೊಂದಿಗೆ ಮುಗಿಸಿತು.
ಆದಾಗ್ಯೂ, ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನ ಆಶ್ಚರ್ಯವು, ಗುಜರಾತ್ ಜೈಂಟ್ಸ್ ತಂಡ 20 ವರ್ಷದ ಕಾಶ್ವೀ ಗೌತಮ್ ಅವರಿಗೆ 2 ಕೋಟಿ ರೂಪಾಯಿ ಬಿಡ್ ಮಾಡಿತು.
ಕೆಲ ವರ್ಷಗಳ ಹಿಂದೆ ಅಂಡರ್-19 ಪಂದ್ಯವೊಂದರಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ವೇಗಿ ಕಾಶ್ವೀ ಗೌತಮ್ ಪ್ರಸಿದ್ಧವಾದರು ಮತ್ತು ಮುಂದಿನ ಋತುವಿನಲ್ಲಿ ಗಮನಿಸಬೇಕಾದ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಗಮನಾರ್ಹವಾಗಿ, ಚಮರಿ ಅಥಾಪತ್ತು, ಡಿಯಾಂಡ್ರಾ ಡಾಟಿನ್, ಕಿಮ್ ಗಾರ್ತ್ ಮತ್ತು ಇತರರಂತಹ ದೊಡ್ಡ ಹೆಸರುಗಳು ವುಮೆನ್ಸ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳಿಂದ ಒಂದೇ ಒಂದು ಬಿಡ್ ಪಡೆದುಕೊಂಡಿಲ್ಲ.
ಅನ್ನಾಬೆಲ್ ಸದರ್ಲ್ಯಾಂಡ್ (2 ಕೋಟಿ ರೂಪಾಯಿ), ಅಪರ್ಣಾ ಮೊಂಡಲ್ (10 ಲಕ್ಷ ರೂಪಾಯಿ), ಅಶ್ವನಿ ಕುಮಾರಿ (10 ಲಕ್ಷ ರೂಪಾಯಿ).
ಫೋಬೆ ಲಿಚ್‌ಫೀಲ್ಡ್ (1 ಕೋಟಿ ರೂಪಾಯಿ), ಮೇಘನಾ ಸಿಂಗ್ (30 ಲಕ್ಷ ರೂಪಾಯಿ), ತ್ರಿಶಾ ಪೂಜಿತಾ (10 ಲಕ್ಷ ರೂಪಾಯಿ), ಕಾಶ್ವೀ ಗೌತಮ್ (2 ಕೋಟಿ ರೂಪಾಯಿ), ಪ್ರಿಯಾ ಮಿಶ್ರಾ (20 ಲಕ್ಷ ರೂಪಾಯಿ), ಲಾರೆನ್ ಚೀಟಲ್ (20 ಲಕ್ಷ ರೂಪಾಯಿ), ಕ್ಯಾಥರಿನ್ ಬ್ರೈಸ್ (10 ಲಕ್ಷ ರೂಪಾಯಿ), ಮನ್ನತ್ ಕಶ್ಯಪ್ (10 ಲಕ್ಷ ರೂಪಾಯಿ), ವೇದಾ ಕೃಷ್ಣಮೂರ್ತಿ (30 ಲಕ್ಷ ರೂಪಾಯಿ), ತರನ್ನುಮ್ ಪಠಾಣ್ (10 ಲಕ್ಷ ರೂಪಾಯಿ).
ಶಬ್ನಿಮ್ ಇಸ್ಮಾಯಿಲ್ (1.2 ಕೋಟಿ ರೂಪಾಯಿ), ಎಸ್ ಸಜನಾ (15 ಲಕ್ಷ ರೂಪಾಯಿ), ಅಮನದೀಪ್ ಕೌರ್ (10 ಲಕ್ಷ ರೂಪಾಯಿ), ಫಾತಿಮಾ ಜಾಫರ್ (10 ಲಕ್ಷ ರೂಪಾಯಿ), ಕೀತನ ಬಾಲಕೃಷ್ಣನ್ (10 ಲಕ್ಷ ರೂಪಾಯಿ).
ಜಾರ್ಜಿಯಾ ವೇರ್ಹ್ಯಾಮ್ (40 ಲಕ್ಷ ರೂಪಾಯಿ), ಕೇಟ್ ಕ್ರಾಸ್ (30 ಲಕ್ಷ ರೂಪಾಯಿ), ಏಕ್ತಾ ಬಿಶ್ತ್ (60 ಲಕ್ಷ ರೂಪಾಯಿ), ಶುಭಾ ಸತೀಶ್ (10 ಲಕ್ಷ ರೂಪಾಯಿ), ಎಸ್ ಮೇಘನಾ (30 ಲಕ್ಷ ರೂಪಾಯಿ), ಸಿಮ್ರಾನ್ ಬಹದ್ದೂರ್ (30 ಲಕ್ಷ ರೂಪಾಯಿ), ಸೋಫಿ ಮೊಲಿನಿಕ್ಸ್ (30 ಲಕ್ಷ ರೂಪಾಯಿ).
ಡ್ಯಾನಿ ವ್ಯಾಟ್ (30 ಲಕ್ಷ ರೂಪಾಯಿ), ವೃಂದಾ ದಿನೇಶ್ (1.30 ಕೋಟಿ ರೂಪಾಯಿ), ಪೂನಂ ಖೇಮ್ನಾರ್ (10 ಲಕ್ಷ ರೂಪಾಯಿ), ಸೈಮಾ ಠಾಕೋರ್ (10 ಲಕ್ಷ ರೂಪಾಯಿ), ಗೌಹರ್ ಸುಲ್ತಾನಾ (30 ಲಕ್ಷ ರೂಪಾಯಿ).