WPL Auction 2024: ಸಮಯ, ಸ್ಥಳ, ಪರ್ಸ್‌ನಲ್ಲಿರುವ ಹಣ ಮತ್ತು ಲಭ್ಯವಿರುವ ಸ್ಲಾಟ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಪುರುಷರ ಐಪಿಎಲ್‌ನಂತೆ ಮಹಿಳಾ ಐಪಿಎಲ್‌ಗೂ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ನೀಡಲು ಬಿಸಿಸಿಐ ಈ ಕ್ರಮವನ್ನು ಕೈಗೊಂಡಿದೆ. ಅದರಂತೆ ಮಹಿಳಾ ಆಟಗಾರ್ತಿಯರ ಹರಾಜು ಎಲ್ಲರ ಗಮನ ಸೆಳೆದಿದೆ.
2024ರಲ್ಲಿ ಮಹಿಳಾ ಐಪಿಎಲ್ ನಡೆಯಲಿದೆ. ತಮ್ಮ ತಂಡದಲ್ಲಿರುವ ಖಾಲಿ ಸ್ಥಾನಗಳನ್ನು ತುಂಬಿಕೊಳ್ಳಲು ಮಾಲೀಕರಿಗೆ ಹರಾಜು ವೇದಿಕೆ ಆಗಲಿದೆ. ಮಹಿಳೆಯರ ಪ್ರೀಮಿಯರ್ ಲೀಗ್‌ನ ಮುಂದಿನ ಋತುವಿನ ಹರಾಜು ಡಿಸೆಂಬರ್ 9 ರಂದು ನಡೆಯಿತು. ಮುಂಬೈನಲ್ಲಿ ಮಧ್ಯಾಹ್ನ 2.30ಕ್ಕೆ ಹರಾಜು ನಡೆಯುವ ಸಾಧ್ಯತೆ ಇದೆ.

ಹರಾಜಿನಲ್ಲಿ 165 ಆಟಗಾರ್ತಿಯರು
ಈ ಹರಾಜಿನಲ್ಲಿ ಒಟ್ಟು 165 ಆಟಗಾರ್ತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 30 ಆಟಗಾರರು ಮಾತ್ರ ಹರಾಜಿನಲ್ಲಿ ಮಾಲೀಕರ ಚಿತ್ತ ಕದಿಯುವಲ್ಲಿ ಯಶಸ್ವಿ ಆಗುತ್ತಾರೆ. ಏಕೆಂದರೆ ಮಹಿಳಾ ಪ್ರೀಮಿಯರ್ ಲೀಗ್‌ನ ಐದು ಫ್ರಾಂಚೈಸಿಗಳಲ್ಲಿ ಕೇವಲ 30 ಸ್ಲಾಟ್‌ಗಳನ್ನು ಮಾತ್ರ ಖಾಲಿ ಹೊಂದಿವೆ.
ಹರಾಜು ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ 165 ಆಟಗಾರ್ತಿಯರ ಪೈಕಿ 104 ಆಟಗಾರ್ತಿಯರು ಭಾರತೀಯರಾಗಿದ್ದಾರೆ. ಇನ್ನು 61 ವಿದೇಶಿ ಆಟಗಾರ್ತಿಯರು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ವಿದೇಶಿ ಆಟಗಾರರ ಪೈಕಿ 15 ಅಸೋಸಿಯೇಟ್ ದೇಶಗಳ ಆಟಗಾರರಿದ್ದಾರೆ.
ಹರಾಜು ಪಟ್ಟಿಯಲ್ಲಿ 56 ಕ್ಯಾಪ್ಡ್ ಪ್ಲೇಯರ್ಸ್ ಸ್ಥಾನ ಪಡೆದಿದ್ದಾರೆ, 109 ಅನ್‌ಕ್ಯಾಪ್ಡ್ ಪ್ಲೇಯರ್ಸ್ ಸೇರಿದ್ದಾರೆ.

ಇಬ್ಬರು ಪ್ಲೇಯರ್ಸ್ ಬೇಸ್ ಪ್ರೈಸ್ 50 ಲಕ್ಷ ರೂ.
ಹರಾಜಿನಲ್ಲಿ ಆಟಗಾರ್ತಿಯರ ಬೇಸ್ ಪ್ರೈಸ್ಲೆ 10 ಲಕ್ಷದಿಂದ 50 ಲಕ್ಷದವರೆಗೆ ಇರುತ್ತದೆ. 50 ಲಕ್ಷ ಬೇಸ್ ಪ್ರೈಸ್‌ನಲ್ಲಿ ಕೇವಲ ಇಬ್ಬರು ಆಟಗಾರ್ತಿಯರು ಇದ್ದಾರೆ. ಇನ್ನು 40 ಲಕ್ಷ ರೂ ಮೂಲ ಬೆಲೆಯಲ್ಲಿ ನಾಲ್ವರು ಇದ್ದು, 30, 20 ಮತ್ತು 10 ಲಕ್ಷ ರೂ.ಗಳ ಮೂಲ ಬೆಲೆಯಲ್ಲಿ ಆಟಗಾರ್ತಿಯರ ದಂಡೇ ಇದೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಐದು ತಂಡಗಳಿವೆ. ಪ್ರತಿ ತಂಡದಲ್ಲಿ ಗರಿಷ್ಠ 18 ಆಟಗಾರ್ತಿಯರು ಇರಬಹುದು. ಒಂದು ತಂಡದಲ್ಲಿ ವಿದೇಶಿ ಆಟಗಾರ್ತಿಯರ ಗರಿಷ್ಠ ಮಿತಿ 6 ಆಗಿದೆ. ಈ ರೀತಿಯಾಗಿ, ಎಲ್ಲಾ ಐದು ಫ್ರಾಂಚೈಸಿಗಳಲ್ಲಿನ ಆಟಗಾರರ ಒಟ್ಟು ಸ್ಲಾಟ್‌ಗಳು 90 ಆಗಿದೆ. ಈ ಪೈಕಿ 60 ಸ್ಲಾಟ್‌ಗಳನ್ನು ತಂಡಗಳು ಈಗಾಗಲೇ ಉಳಿಸಿಕೊಂಡಿವೆ. ಶನಿವಾರ ನಡೆಯಲಿರುವ ಹರಾಜಿನಲ್ಲಿ 30 ಸ್ಲಾಟ್‌ಗಳಿಗೆ ಐದು ಫ್ರಾಂಚೈಸಿಗಳೊಂದಿಗೆ ಒಟ್ಟು 17.65 ಕೋಟಿ ರೂ.ಗಳು ಖರ್ಚು ಮಾಡಲಿದ್ದಾರೆ. ಪ್ರತಿ ಫ್ರಾಂಚೈಸಿಯ ಹರಾಜು ಪರ್ಸ್‌ನ ಗರಿಷ್ಠ ಮಿತಿ ರೂ 13.5 ಕೋಟಿ.

ಪ್ರತಿ ತಂಡದಲ್ಲಿ ಉಳಿದ ಹಣ, ಖಾಲಿ ಇರುವ ಸ್ಲಾಟ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ
| ಕ್ರಮ ಸಂಖ್ಯೆ | ತಂಡ | ಉಳಿದ ಆಟಗಾರರು | ಖಾಲಿ ಸ್ಲಾಟ್ | ಪರ್ಸ್‌ನಲ್ಲಿರುವ ಹಣ |
| 1 | ಡೆಲ್ಲಿ | 15 | 3 | 2.25 ಕೋಟಿ ರೂ. |
| 2 | ಗುಜರಾತ್ | 8 | 10 | 5.95 ಕೋಟಿ ರೂ. |
| 3 | ಮುಂಬೈ | 13 | 5 | 2.1 ಕೋಟಿ ರೂ. |
| 4 | ಆರ್‌ಸಿಬಿ | 11 | 7 | 3.35 ಕೋಟಿ ರೂ. |
| 5 | ಯುಪಿ | 13 | 5 | 4 ಕೋಟಿ ರೂ. |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications