ಈ ಮೂರು ಆಟಗಾರ್ತಿಯರನ್ನು ಹರಾಜಿನಲ್ಲಿ ಟಾರ್ಗೆಟ್ ಮಾಡಲಿದೆ RCB
ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ವೇಳೆ ಫ್ರಾಂಚೈಸಿಗಳು ತಮ್ಮ ತಂಡವನ್ನು ಬಲಪಡಿಸಿಕೊಳ್ಳಲು ಕಸರತ್ತು ನಡೆಸಿವೆ. ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಒಮ್ಮೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಬಾರಿ ಟ್ರೋಫಿ ಎತ್ತುವ ಆಸೆ ಹೊಂದಿದೆ. ಈ ವೇಳೆ ನವೆಂಬರ್ 27 ರಂದು ನಡೆಯಲಿರುವ ಹರಾಜಿನಲ್ಲಿ ಆರ್‌ಸಿಬಿ ಈ ಸ್ಟಾರ್ ಆಟಗಾರ್ತಿಯರನ್ನು ಟಾರ್ಗೆಟ್ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಸ್ಮೃತಿ ಮಂಧಾನ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅಲ್ಲದೆ ಇವರು ಈ ಬಾರಿಯೂ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಇನ್ನು ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಎಲ್ಲಿಸಾ ಪೆರ್ರಿ ಅವರನ್ನು ಬೆಂಗಳೂರು ತಂಡ ಉಳಿಸಿಕೊಂಡಿದೆ. ಇವರು ತಮ್ಮ ಆಲ್‌ರೌಂಡರ್ ಆಟದ ಮೂಲಕ ತಂಡಕ್ಕೆ ಆಧಾರವಾಗಬಲ್ಲ ಪ್ಲೇಯರ್. ಇನ್ನು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರಿಚಾ ಘೋಷ್ ಅವರಿಗೆ ಆರ್‌ಸಿಬಿ ರೆಡ್ ಕಾರ್ಪೆಟ್ ಹಾಕಿದೆ. ಇನ್ನು ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಸಹ ಆರ್‌ಸಿಬಿ ಜೆರ್ಸಿಯಲ್ಲಿ ಆಡುವುದನ್ನು ಕಾಣಬಹುದಾಗಿದೆ.

ಶ್ರೀ ಚರಣಿ
ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಸ್ಪಿನ್ ಬೌಲರ್ ಶ್ರೀ ಚರಣಿ ಅವರನ್ನು ಟಾರ್ಗೆಟ್ ಮಾಡಲಿದೆ. ಇವರು ಪ್ರಸಕ್ತ ವಿಶ್ವಕಪ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇವರು ಮಿಡ್ಲ್ ಓವರ್‌ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಹೀಗಾಗಿ ಆರ್‌ಸಿಬಿ ತನ್ನ ಸ್ಪಿನ್ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳಲು ಇವರಿಗೆ ಆರ್‌ಸಿಬಿ ಮಣೆ ಹಾಕಲಿದೆ. ಶ್ರೀ ಚರಣಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಡಿರುವ ಅನುಭವ ಕಮ್ಮಿ ಇದ್ದರೂ, ಬಿಗುವಿನ ದಾಳಿ ನಡೆಸುವ ಕ್ಷಮತೆ ಇವರತ್ತ ಮಾಲೀಕರು ನೋಡುವಂತೆ ಮಾಡಿದೆ.
ನಾಡಿನ್ ಡಿ ಕ್ಲರ್ಕ್
ಭಾರತದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ನಾಡಿನ್ ಡಿ ಕ್ಲರ್ಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ವೇಳೆ ಇವರ ಸ್ಟ್ರೈಕ್ ರೇಟ್ ಅಮೋಘವಾಗಿತ್ತು. ಇವರ ಪವರ್ ಹಿಟ್ಟಿಂಗ್‌ನಿಂದ ಮಾಲೀಕರ ಮನ ಕದ್ದಿದ್ದಾರೆ. ಅಲ್ಲದೆ ಇವರು ವೇಗದ ಬೌಲಿಂಗ್ ಮೂಲಕವೂ ಸಹ ಎದುರಾಳಿಗಳನ್ನು ಕಾಡಬಲ್ಲರು. ಅವರು ಈಗಾಗಲೇ 68 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 660 ರನ್ ಸಿಡಿಸಿದ್ದು, 51 ವಿಕೆಟ್ ಪಡೆದಿದ್ದಾರೆ.
ಡಿಯಾಂಡ್ರಾ ಡಾಟಿನ್
ವೆಸ್ಟ್ ಇಂಡೀಸ್ ತಂಡದ ಆಟಗಾರ್ತಿ ಡಿಯಾಂಡ್ರಾ ಡಾಟಿನ್ ಅವರನ್ನು ಆರ್‌ಸಿಬಿ ಹರಾಜಿನಲ್ಲಿ ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ಇವರು ಮಿಡ್ಲ್ ಆರ್ಡರ್‌ನಲ್ಲಿ ತಂಡಕ್ಕೆ ಬಲ ತುಂಬ ಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಆರ್‌ಸಿಬಿ 6.15 ಕೋಟಿ ರೂ. ಇಟ್ಟುಕೊಂಡು ಅಂಗಳಕ್ಕೆ ಇಳಿಯುತ್ತಿದ್ದರಿಂದ ದೊಡ್ಡ ಆಟಗಾರರನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications