WPL Auction 2024: ಹರಾಜಿನ ನಂತರ ಸ್ಟಾರ್-ಸ್ಟಡ್ ಆರ್‌ಸಿಬಿ ತಂಡ ಹೀಗಿದೆ; 7 ಹೊಸ ಆಟಗಾರ್ತಿಯರು ಎಂಟ್ರಿ!
ಶನಿವಾರ, ಡಿಸೆಂಬರ್ 9ರಂದು ಮುಂಬೈನಲ್ಲಿ 2024ರ ಮಹಿಳಾ ಪ್ರೀಮಿಯರ್ ಲೀಗ್ (WPL) ಗಾಗಿ ನಡೆದ ಮಿನಿ ಹರಾಜಿನಲ್ಲಿ ಕೆಲವು ಪ್ರಮುಖ ಆಶ್ಚರ್ಯ ಖರೀದಿಗಳನ್ನು ಕಂಡಿದ್ದೇವೆ.
ಭಾರತದ ಅನ್‌ಕ್ಯಾಪ್ಡ್ ಆಲ್‌ರೌಂಡರ್ ಕಾಶ್ವೀ ಗೌತಮ್‌ರನ್ನು ಗುಜರಾತ್ ಜೈಂಟ್ಸ್ 2 ಕೋಟಿ ರೂಪಾಯಿಗೆ ಖರೀದಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಅನ್ನಾಬೆಲ್ ಸದರ್ಲ್ಯಾಂಡ್ ಅವರನ್ನು 2 ಕೋಟಿ ರೂಪಾಯಿಗೆ ಖರೀದಿಸಿತು.
ಭಾರತದ ಮತ್ತೋರ್ವ ಆಟಗಾರ್ತಿ ವೃಂದಾ ದಿನೇಶ್ 1.30 ಕೋಟಿ ರೂಪಾಯಿಗೆ ಯುಪಿ ವಾರಿಯರ್ಜ್ ತಂಡವನ್ನು ಸೇರಿದರು. ಉಳಿದಂತೆ, ಗುಜರಾತ್ ಜೈಂಟ್ಸ್ ಫೋಬೆ ಲಿಚ್‌ಫೀಲ್ಡ್ ಅವರನ್ನು 1 ಕೋಟಿ ರೂಪಾಯಿಗೆ ತೆಗೆದುಕೊಂಡರೆ, 2024ರ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಈ ನಾಲ್ಕು ಅತಿ ಹೆಚ್ಚು ಬಿಡ್‌ಗಳಾಗಿವೆ.

2024ರ ಮಿನಿ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಇಂಡಿಯನ್ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಎಲ್ಲಾ ಫ್ರಾಂಚೈಸಿಗಳು ಇದೀಗ ತಲಾ 18 ಆಟಗಾರ್ತಿಯರನ್ನು ಹೊಂದಿವೆ.
ಆರ್‌ಸಿಬಿ ತಂಡಕ್ಕೆ 7 ಹೊಸ ಆಟಗಾರ್ತಿಯರು ಎಂಟ್ರಿ
2024ರ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 7 ಆಟಗಾರ್ತಿಯರನ್ನು ಖರೀದಿಸಿತು. ಆಸ್ಟ್ರೇಲಿಯಾದ ಜಾರ್ಜಿಯಾ ವೇರ್ಹ್ಯಾಮ್ ಅವರನ್ನು 40 ಲಕ್ಷ ರೂಪಾಯಿಗೆ ಖರೀದಿಸುವ ಮೂಲಕ ಬಿಡ್ಡಿಂಗ್ ಆರಂಭಿಸಿತು.
ಆ ಬಳಿಕ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ್ತಿ ಕೇಟ್ ಕ್ರಾಸ್ ಅವರನ್ನು 30 ಲಕ್ಷ ರೂಪಾಯಿಗೆ ಖರೀದಿಸಿತು. ನಂತರ ಭಾರತೀಯ ಆಟಗಾರ್ತಿ ಏಕ್ತಾ ಬಿಷ್ತ್ ಅವರನ್ನು 60 ಲಕ್ಷ ರೂಪಾಯಿಗೆ ಖರೀದಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಯಿತು.
ವುಮೆನ್ಸ್ ಪ್ರೀಮಿಯರ್ ಲೀಗ್ ನಿಯಮದ ಪ್ರಕಾರ, ಒಂದು ತಂಡದಲ್ಲಿ ಕನಿಷ್ಠ 15 ಆಟಗಾರ್ತಿಯರು ಇರಬೇಕು ಮತ್ತು ಗರಿಷ್ಠ 18 ಆಟಗಾರ್ತಿಯರಿರಬೇಕು.
ಈ ವರ್ಷದ ಆರಂಭದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) ನ ಉದ್ಘಾಟನಾ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐದು ತಂಡಗಳ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿತು.
ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ತಮ್ಮ ಅಭಿಯಾನದ ಪ್ರಾರಂಭದಲ್ಲಿ ಸತತ ಐದು ಪಂದ್ಯಗಳನ್ನು ಸೋತರು ಮತ್ತು ಸತತ ಎರಡು ಗೆಲುವುಗಳನ್ನು ದಾಖಲಿಸಿದರು.

ಸೋಫಿ ಡಿವೈನ್ 266 ರನ್ ಗಳಿಸಿ ಅವರ ಅಗ್ರ ರನ್ ಗಳಿಸಿದ ಆಟಗಾರ್ತಿಯಾದರೆ, ನಂತರ ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ 253 ರನ್ ಗಳಿಸಿದ್ದಾರೆ. ಬೌಲರ್‌ಗಳ ಪೈಕಿ, ಸ್ಪಿನ್ನರ್ ಶ್ರೇಯಾಂಕ ಪಾಟೀಲ್ 7 ಪಂದ್ಯಗಳಿಂದ 6 ವಿಕೆಟ್ ಪಡೆದರೆ, ಸೋಭಾನಾ ಆಶಾ 5 ಪಂದ್ಯಗಳಿಂದ 5 ವಿಕೆಟ್ ಪಡೆದರು.
2024ರ ಹರಾಜಿನಲ್ಲಿ ಆರ್‌ಸಿಬಿ ತಂಡದ ಖರೀದಿ
ಜಾರ್ಜಿಯಾ ವೇರ್ಹ್ಯಾಮ್ - 30 ಲಕ್ಷ ರೂಪಾಯಿ
ಕೇಟ್ ಕ್ರಾಸ್ - 30 ಲಕ್ಷ ರೂಪಾಯಿ
ಏಕ್ತಾ ಬಿಷ್ತ್ - 60 ಲಕ್ಷ ರೂಪಾಯಿ
ಶುಭಾ ಸತೀಶ್ - 10 ಲಕ್ಷ ರೂಪಾಯಿ
ಎಸ್ ಮೇಘನಾ - 30 ಲಕ್ಷ ರೂಪಾಯಿ
ಸಿಮ್ರಾನ್ ಬಹದ್ದೂರ್ - 30 ಲಕ್ಷ ರೂಪಾಯಿ
ಸೋಫಿ ಮೊಲಿನೆಕ್ಸ್ - 30 ಲಕ್ಷ ರೂಪಾಯಿ
ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ತಂಡ
ಸ್ಮೃತಿ ಮಂಧಾನ (ನಾಯಕಿ), ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಶ್ತ್, ಶುಭಾ ಸತೀಶ್, ಎಸ್ ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications