WPL Auction 2025: ಡಬ್ಲ್ಯುಪಿಎಲ್ ಹರಾಜು: ಯಾವ ತಂಡಗಳ ಬಳಿ ಎಷ್ಟು ಹಣವಿದೆ?, ಎಷ್ಟು ಸ್ಥಾನ ಖಾಲಿ ಇದೆ? ಇಲ್ಲಿದೆ ಮಾಹಿತಿ
ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಇಂದು ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಒಟ್ಟು 5 ತಂಡಗಳು ತಮ್ಮ ತಂಡದಲ್ಲಿ ಉಳಿದ ಸ್ಥಾನಗಳನ್ನು ತುಂಬಿಕೊಳ್ಳುವಲ್ಲಿ ಶ್ರಮಿಸಲಿವೆ. ಈ ಬಾರಿಯ ಹರಾಜಿನಲ್ಲಿ ಸುಮಾರು 120 ಆಟಗಾರ್ತಿಯರು ಹರಾಜು ಅಂಗಳ ಪ್ರವೇಶಿಸಲಿದ್ದಾರೆ. ಐದು ತಂಡಗಳನ್ನು ಕೂಡಿದರೆ ಒಟ್ಟು 15 ಕೋಟಿ ರೂಪಾಯಿ ಇದ್ದು, ಆಟಗಾರ್ತಿಯರನ್ನು ಖರೀದಿ ಮಾಡಲು ಬಳಲಾಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಮುಂಬೈ ಇಂಡಿಯನ್ಸ್ (ಎಂಐ), ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ), ಯುಪಿ ವಾರಿಯರ್ಸ್ (ಯುಪಿಡಬ್ಲ್ಯು) ಮತ್ತು ಗುಜರಾತ್ ಜೈಂಟ್ಸ್ (ಜಿಜಿ) ತಮ್ಮ ತಂಡಗಳು 19 ಸ್ಲಾಟ್ ಫಿಲ್ ಮಾಡಿಕೊಳ್ಳಲು ಶ್ರಮಿಸಲಿವೆ. ಗುಜರಾತ್ ಜೈಂಟ್ಸ್ ಈ ಬಾರಿ ಹರಾಜಿನಲ್ಲಿ ಭಾಗವಹಿಸುತ್ತಿರುವ ಅತ್ಯಂತ ಶ್ರೀಮಂತ ತಂಡಗಳಲ್ಲಿ ಒಂದಾಗಿದೆ.

ಹರಾಜು ಎಲ್ಲಿ, ಯಾವಾಗ ನಡೆಯುತ್ತದೆ?
ಡಬ್ಲ್ಯುಪಿಎಲ್ ಹರಾಜು ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಅಲ್ಲದೆ ಮಧ್ಯಾಹ್ನ 3 ಗಂಟೆಯಿಂದ ಹರಾಜು ಆರಂಭವಾಗಲಿದೆ.
ಹರಾಜಿನಲ್ಲಿ ಎಷ್ಟು ಆಟಗಾರರು ಇದ್ದಾರೆ?
ಈ ಬಾರಿಯ ಡಬ್ಲ್ಯುಪಿಎಲ್ ಹರಾಜಿನಲ್ಲಿ ಒಟ್ಟು 120 ಆಟಗಾರರು ಹರಾಜು ಅಂಗಳ ಪ್ರವೇಶಿಸಲಿದ್ದಾರೆ. ಇದರಲ್ಲಿ 91 ಭಾರತೀಯ ಆಟಗಾರರು, 29 ವಿದೇಶಿ ಆಟಗಾರರು ಸೇರಿದ್ದಾರೆ.

ಹರಾಜಿನಲ್ಲಿರುವ ಹಿರಿಯ ಹಾಗೂ ಕಿರಿಯ ಆಟಗಾರ್ತಿಯರು ಯಾರು?
ಈ ಬಾರಿಯ ಹರಾಜಿನಲ್ಲಿರುವ ಹಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆ ಹೀದರ್ ನೈಟ್ ಮತ್ತು ಲಾರಾ ಹ್ಯಾರಿಸ್ ಅವರಿಗೆ ಸಲ್ಲುತ್ತದೆ. ಈ ಇಬ್ಬರೂ ಆಟಗಾರ್ತಿಯರಿಗೆ ಸದ್ಯ 34 ವರ್ಷ. ಇನ್ನು ಈ ಬಾರಿಯ ಹರಾಜಿನಲ್ಲಿ ಇರಾ ಜಾಧವ್ ಮತ್ತು ಅಂಶು ನಗರ 14 ವರ್ಷದವರಾಗಿದ್ದು, ಮಾಲೀಕರ ಚಿತ್ತ ಕದಿಯಲಿದ್ದಾರೆ.
ಹರಾಜಿನಲ್ಲಿ ಗರಿಷ್ಠ ಹಾಗೂ ಕನಿಷ್ಠ ಮೂಲ ಬೆಲೆ ಎಷ್ಟು?
ಈ ಬಾರಿಯ ಹರಾಜಿನಲ್ಲಿ ಮೂರು ಜನ ಆಟಗಾರ್ತಿಯರು ತಮ್ಮ ಮೂಲ ಬೆಲೆಯನ್ನು 50 ಲಕ್ಷ ಎಂದು ತಿಳಿಸಿದ್ದಾರೆ. ಒಟ್ಟು 27 ಆಟಗಾರ್ತಿಯರ ಮೂಲ ಬೆಲೆ 30 ಲಕ್ಷ ರೂ., ಇನ್ನು 20 ಲಕ್ಷ ರೂ.ಗಳಿಗೂ ಆಟಗಾರ್ತಿಯರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಇನ್ನು 89 ಆಟಗಾರ್ತಿಯರು 10 ಲಕ್ಷ ರೂ. ಮೂಲ ಬೆಲೆ ಹೊಂದಿದ್ದಾರೆ.
ಹರಾಜನ್ನು ಎಲ್ಲಿ ನೋಡಬಹುದು?
ಡಬ್ಲ್ಯುಪಿಎಲ್ ಹರಾಜನ್ನು ಜಿಯೋ ಸಿನೆಮಾ ಹಾಗೂ ಸ್ಪೋರ್ಟ್ಸ್ 18 ನಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ.
ಯಾವ ತಂಡಗಳ ಬಳಿ ಎಷ್ಟು ಹಣವಿದೆ.
ಈ ಬಾರಿಯ ಮಿನಿ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ 4.40 ಕೋಟಿ ರೂಪಾಯಿಯನ್ನು ಹೊಂದಿದೆ. ಇನ್ನು ಯುಪಿ ವಾರಿಯರ್ಸ್ ಪರ್ಸ್‌ನಲ್ಲೂ 3.90 ಕೋಟಿ ರೂ.ಗಳಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು: 3.25 ಕೋಟಿ, ಮುಂಬೈ ಇಂಡಿಯನ್ಸ್ ಬಳಿ 2.65 ಕೋಟಿ ರೂ., ದೆಹಲಿ ಕ್ಯಾಪಿಟಲ್ಸ್ ಬಳಿ 2.50 ಕೋಟಿ ರೂ. ಉಳಿದಿದೆ.
ಯಾವ ತಂಡಗಳು ಎಷ್ಟು ಆಟಗಾರರನ್ನು ಖರೀದಿಸಬಹುದು?
ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ 4, ಮುಂಬೈ 4, ಡೆಲ್ಲಿ ಕ್ಯಾಪಿಟಲ್ಸ್ 4, ಗುಜರಾತ್ ಜೈಂಟ್ಸ್ 4, ಯುಪಿ ವಾರಿಯರ್ಸ್ 3 ಆಟಗಾರರನ್ನು ಖರೀದಿ ಮಾಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications