ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾದ ಆಟಗಾರ್ತಿ ನಾಡಿನ್ ಡಿ ಕ್ಲರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಸಫಲವಾಗಿದೆ. ಈ ಆಟಗಾರ್ತಿಯನ್ನು ಕೊಳ್ಳಲು ಆರ್‌ಸಿಬಿ ಹರಾಜಿನಲ್ಲಿ 65 ಲಕ್ಷ ರೂ. ಗಳನ್ನು ಹೂಡಿದೆ. ಇವರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಆಟಗಾರ್ತಿಯಾಗಿದ್ದಾರೆ.
ನಾಡಿನ್ ಡಿ ಕ್ಲರ್ಕ್ ದಕ್ಷಿಣ ಆಫ್ರಿಕಾ ಪರ ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಆಡಿದ 7 ಇನಿಂಗ್ಸ್‌ಗಳಲ್ಲಿ 131.64ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ. ಇವರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಅಷ್ಟಾಗಿಲ್ಲ. ಆದರೆ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಪ್ರದರ್ಶನವನ್ನು ಪರಿಗಣಿಸಿ ಆರ್‌ಸಿಬಿ ಮಣೆ ಹಾಕಿದೆ. ಇವರು 68 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 27.50ರ ಸರಾಸರಿಯಲ್ಲಿ 660 ರನ್ ಕಲೆ ಹಾಕಿದ್ದಾರೆ. ಇವರು ಟಿ20 ಕ್ರಿಕೆಟ್‌ನಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 51 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.

ಏಕದಿನ ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯೆ ರಾಧಾ ಯಾದವ್ ಅವರನ್ನು ಆರ್‌ಸಿಬಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಸಫಲವಾಗಿದೆ. ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಬಲ ತುಂಬ ಬಲ್ಲ ಆಟಗಾರ್ತಿಯಾಗಿದ್ದಾರೆ ಇನ್ನು ರಾಧಾ ಸ್ಪಿನ್ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಇವರು ಈಗಾಗಲೇ ಆಡಿದ 19 ಪಂದ್ಯಗಳಲ್ಲಿ 14 ವಿಕೆಟ್ ಪಡೆದು ಮಿಂಚಿದ್ದಾರೆ. ಇವರಿಗೆ ಆರ್‌ಸಿಬಿ 65 ಲಕ್ಷ ರೂ. ನೀಡಿದೆ.
ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ್ತಿ ಜಾರ್ಜಿಯಾ ವೋಲ್ ಅವರನ್ನು ಆರ್‌ಸಿಬಿ ಖರೀದಿಸಿದೆ. ಇವರ ಮೂಲ ಬೆಲೆ 40 ಲಕ್ಷ ರೂ ಆಗಿತ್ತು. ಇವರಿಗೆ ಆರ್‌ಸಿಬಿ 65 ಲಕ್ಷ ರೂ ನೀಡುವಲ್ಲಿ ಸಫಲವಾಗಿದೆ. ಇವರು ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ 3 ಪಂದ್ಯಗಳಲ್ಲಿ 154 ರನ್ ಸಿಡಿಸಿದ್ದಾರೆ. ಈ ವೇಳೆ ಆರ್‌ಸಿಬಿ ವಿರುದ್ಧ ಅವರು ಅಜೇಯ 99 ರನ್ ಬಾರಿಸಿದ್ದರು. ಇವರನ್ನು ಈ ಬಾರಿ ಆರ್‌ಸಿಬಿ ಕೊಳ್ಳುವಲ್ಲಿ ಸಫಲವಾಗಿದೆ.