WPL Auction 2025: ಮಾಲೀಕರ ಬಳಿ ಇರುವ ಹಣ ಎಷ್ಟು? ಯಾರ ಬಳಿ ಎಷ್ಟು RTM ಕಾರ್ಡ್ ಇದೆ?
ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ನವೆಂಬರ್ 23 (ಗುರುವಾರ) ನವದೆಹಲಿಯಲ್ಲಿ ಹರಾಜು ನಡೆಯಲಿದೆ. ಈ ಹರಾಜು 3 ವರ್ಷದ ಅವಧಿಗೆ ಆಗಿರಲಿದೆ. ಮಾಲೀಕರು ಅಳೆದು ತೂಗಿ ಆಟಗಾರರಿಗೆ ಹಣ ಹೂಡಲಿದ್ದಾರೆ. 5 ತಂಡಗಳು ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ದೃಷ್ಟಿ ನೆಟ್ಟಿದೆ. ಆರ್‌ಸಿಬಿ ಸಹ ಎರಡನೇ ಬಾರಿ ಟ್ರೋಫಿ ಎತ್ತಲು ಪ್ಲ್ಯಾನ್ ಮಾಡಿಕೊಂಡಿದೆ.
ಈಗಾಗಲೇ ಮೆಗಾ ಹರಾಜಿನ ಮಾರ್ಕಿ ಪ್ಲೇಯರ್‌ಗಳ ಲೀಸ್ಟ್ ರಿಲೀಸ್ ಮಾಡಲಾಗಿದೆ. ಇದರಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ, ಮೆಗ್ ಲ್ಯಾನಿಂಗ್ ಸೇರಿದಂತೆ 8 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. 5 ತಂಡಗಳು ಒಟ್ಟಾರೆಯಾಗಿ 17 ಆಟಗಾರ್ತಿಯರನ್ನು ರಿಟೇನ್ ಮಾಡಿಕೊಂಡಿವೆ. ಇನ್ನು 73 ಸ್ಥಾನಗಳಿಗಾಗಿ ಹುಡುಕಾಟ ನಡೆಯಲಿದೆ.

ನವದೆಹಲಿಯಲ್ಲಿ ಗುರುವಾರ ಮಧ್ಯಾಹ್ನ ಆರಂಭವಾಗುವ ಹರಾಜಿನಲ್ಲಿ ಒಟ್ಟು 277 ಆಟಗರ್ತಿಯರು ಅಂಗಳ ಪ್ರವೇಶಿಸಲಿದ್ದಾರೆ. ಈ ವೇಳೆ ಭಾರತದ 194 ಆಟಗಾರ್ತಿಯರು ಸೇರಿದ್ದು, ಇದರಲ್ಲಿ 52 ಕ್ಯಾಪ್ಡ್ ಆಟಗಾರ್ತಿಯರು ಸೇರಿದ್ದಾರೆ. ಈ ಆಟಗಾರ್ತಿಯರು ಲಭ್ಯ ಇರುವ 50 ಸ್ಥಾನ ತುಂಬಲು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇನ್ನು 23 ವಿದೇಶಿ ಆಟಗಾರ್ತಿಯರ ಸ್ಥಾನ ತುಂಬಲು 83 ಆಟಗಾರ್ತಿಯರ ಹರಾಜು ಅಂಗಳ ಪ್ರವೇಶಿಸಲಿದ್ದಾರೆ. ಇದರಲ್ಲಿ 66 ಕ್ಯಾಪ್ಡ್ ಆಟಗಾರ್ತಿಯರು ಸೇರಿದ್ದಾರೆ. ಹರಾಜು ಪ್ರಕ್ರಿಯೆ ಮಾರ್ಕಿ ಪ್ಲೇಯರ್ಸ್‌ನಿಂದ ಆರಂಭವಾಗುವ ಸಾಧ್ಯತೆ ಇದೆ.
ಫ್ರಾಂಚೈಸಿ ಬಳಿ ಇರುವ ಹಣ, ಖಾಲಿ ಸ್ಥಾನಗಳು
ಡೆಲ್ಲಿ ಕ್ಯಾಪಿಟಲ್ಸ್ : 5.70 ಕೋಟಿ ರೂ. ಉಳಿದಿದ್ದು, 13 ಆಟಗಾರ್ತಿಯರನ್ನು ಹುಡುಕಾಡಲಿದೆ.
ಮುಂಬೈ ಇಂಡಿಯನ್ಸ್: 5.75 ಕೋಟಿ ರೂ. ಹೊಂದಿದ್ದು, 13 ಪ್ರತಿಭಾನ್ವಿತ ಆಟಗಾರ್ತಿಯರ ಶೋಧ ನಡೆಯಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: 6.15 ಕೋಟಿ ರೂ. ಉಳಿದಿದ್ದು, 14 ಸ್ಥಾನ ತುಂಬಲು ಹರಾಜು ಅಂಗಳ ಪ್ರವೇಶಿಸಲಿದೆ.
ಗುಜರಾತ್ ಜೈಂಟ್ಸ್ ಮಹಿಳೆಯರು: 9.00 ಕೋಟಿ ರೂ. ಉಳಿದಿದ್ದು, 16 ಸ್ಥಾನಕ್ಕೆ ಆಟಗಾರ್ತಿಯರ ಹುಡುಕಾಟ ನಡೆಸಲಿದೆ.
ಯುಪಿ ವಾರಿಯರ್ಜ್: 14.50 ಕೋಟಿ ರೂ. ಉಳಿದಿದ್ದು, 17 ಸ್ಥಾನಗಳು ಖಾಲಿ ಇವೆ.
ಯುಪಿ ಬಳಿ ಅತಿ ಹೆಚ್ಚು RTM ಕಾರ್ಡ್
ಇದೇ ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರೈಟ್ ಟು ಮ್ಯಚ್ ಕಾರ್ಡ್ ಬಳಸಲಾಗುತ್ತಿದೆ. ಮಹಿಳಾ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ನಿಗದಿ ಪಡಿಸಿದ ಆಟಗಾರ್ತಿಯರಿಗಿಂತ ಕಡಿಮೆ ಆಟಗಾರ್ತಿಯರನ್ನು ಫ್ರಾಂಚೈಸಿ ಹೊಂದಿದ್ದರೆ, ಅವರು ಆರ್‌ಟಿಎಂ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಯುಪಿ ವಾರಿಯರ್ಜ್ ಅತಿ ಹೆಚ್ಚು ಆರ್‌ಟಿಎಂ ಬಳಸಿಕೊಳ್ಳುವ ಚಾನ್ಸ್ ಹೊಂದಿದೆ. ಯುಪಿ ಬಳಿ 4 ಆರ್‌ಟಿಎಂ ಕಾರ್ಡ್‌ಗಳಿವೆ. ಇನ್ನು ಗುಜರಾತ್ ಬಳಿ 3, ಆರ್‌ಸಿಬಿ ಬಳಿ 1 ಆರ್‌ಟಿಎಂ ಕಾರ್ಡ್‌ಗಳಿವೆ. ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಬಳಿ ಈ ಕಾರ್ಡ್‌ಗಳು ಇಲ್ಲ. ಕಾರಣ ಇವರು 5 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications