Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL Auction 2023: 1.9 ಕೋಟಿಗೆ ಆರ್‌ಸಿಬಿ ಪಾಲಾದ ಪಾಕ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಭಾರತದ ಆಟಗಾರ್ತಿ

WPL Auction: Indian Wicket keeper batter Richa Ghosh joins RCB for 1.9 crore

ವುಮೆನ್ಸ್ ಪ್ರೀಮಿಯರ್ ಲೀಗ್‌ನ ಹರಾಜಿನಲ್ಲಿ ಆರ್‌ಸಿಬಿ ಕೆಲ ಅದ್ಭುತ ಆಯ್ಕೆಗಳನ್ನು ಮಾಡಿದ್ದು ಕುತೂಹಲ ಮೂಡಿಸಿದೆ. ಮೊದಲಿಗೆ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು ತಂಡಕ್ಕೆ ಸೇರಿಕೊಂಡಿದ್ದ ಆರ್‌ಸಿಬಿ ಬಳಿಕ ವಿಶ್ವ ಕ್ರಿಕೆಟ್‌ನ ಮತ್ತೋರ್ವ ಆಟಗಾರ್ತಿ ಎಲೀಸ್ ಪೆರ್ರಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಇದೀಗ ಟೀಮ್ ಇಂಡಿಯಾದ ಮತ್ತೋರ್‌ವ ಸ್ಟಾರ್ ಆಟಗಾರ್ತಿ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.

ಭಾನುವಾರಷ್ಟೇ ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಜಮಿಮಾ ರೋಡ್ರಿಗಸ್ ಜೊತೆಗೆ ಮ್ಯಾಚ್ ವಿನ್ನಿಂಗ್ಸ್ ಬ್ಯಾಟಿಂಗ್ ಪ್ರದರ್ಶಿಸಿದ್ದರು ರಿಚಾ ಘೋಷ್. 20 ಎಸೆತಗಳಲ್ಲಿ 31 ರನ್ ಬಾರಿಸಿ ಜಮಿಮಾ ಜೊತೆಗೆ ಅಜೇಯ 58 ರನ್‌ಗಳ ಜೊತೆಯಾಟದಲ್ಲಿ ರಿಚಾ ಭಾಗಿಯಾಗಿದ್ದರು. ಈ ಪಂದ್ಯವನ್ನು ಭಾರತ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ರಿಚಾ ಘೋಷ್ ಅವರನ್ನು ಆರ್‌ಸಿಬಿ 1.9 ಕೋಟಿ ರೂಪಾಯಿ ನೀಡಿ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಈ ಮೂಲಕ ಆರ್‌ಸಿಬಿ ತಂಡ ಮತ್ತಷ್ಟು ಬಲಿಷ್ಠವಾದಂತೆ ಕಾಣಿಸುತ್ತಿದೆ.

ರಿಚಾ ಘೋಷ್ 16ನೇ ವಯಸ್ಸಿನಲ್ಲಿಯೇ ಭಾರತ ತಂಡಕ್ಕೆ ಪ್ರವೇಶಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಉತ್ತಮ ಅನುಭವ ಹೊಂದಿದ್ದಾರೆ. 19ರ ಹರೆಯದ ಆಟಗಾರ್ತಿ 17 ಏಕದಿನ ಹಾಗೂ 30 ಟಿ20 ಪಂದ್ಯಗಳಲ್ಲಿ ಆಡಿದ್ದು 2 ಅರ್ಧಶತಕಗಳೊಂದಿಗೆ 738 ರನ್‌ಗಳಿಸಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಅಂಡರ್ 19 ತಂಡದ ಭಾಗವಾಗಿದ್ದ ರಿಷಾ ಸಾಕಷ್ಟು ಆತ್ಮವಿಶ್ವಾಸವನ್ನು ಗಳಿಸಿಕೊಂಡಿದ್ದು ಆರ್‌ಸಿಬಿ ತಂಡಕ್ಕೆ ಉತ್ತಮ ಬಲವಾಗುವುದರಲ್ಲಿ ಅನುಮಾನವಿಲ್ಲ.

ಇನ್ನು ಇದಕ್ಕೂ ಮುನ್ನ ಹರಾಜಿನಲ್ಲಿ ಭಾರತದ ಉಪನಾಯಕಿ ಮತ್ತು ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಡಬ್ಲ್ಯುಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಹರಾಜಾದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. 3.4 ಕೋಟಿ ಮೊತ್ತಕ್ಕೆ ಮಂಧಾನ ಆರ್‌ಸಿಬಿ ತಂಡದ ಪಾಲಾಗಿದ್ದಾರೆ.

ಇನ್ನು ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದು 1.8 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ. ಮತ್ತಿಬ್ಬರು ಭಾರತದ ಸ್ಟಾರ್ ಆಟಗಾರ್ತಿಯರಾದ ಜಮಿಮಾ ರೋಡ್ರಿಗಸ್ ಹಾಗೂ ಶಫಾಲಿ ವರ್ಮಾ ಡೆಲ್ಲಿ ಕ್ಯಾಪಿಟಲ್ಸ ಪಾಲಾಗಿದ್ದಾರೆ. ಇನ್ನು ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಸ್ ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Story first published: Monday, February 13, 2023, 18:03 [IST]
Other articles published on Feb 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+