Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shafali Verma : ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಯುವ ಆಟಗಾರ್ತಿ ಶಫಾಲಿ ವರ್ಮಾ

WPL Auction: Indian young cricketer Shafali Verma joins Delhi Capitals

ಭಾರತದ ಯುವ ಆಟಗಾರ್ತಿ ಅಂಡರ್19 ತಂಡದ ನಾಯಕಿ ಶಫಾಲಿ ವರ್ಮ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಹರಾಜಿನಲ್ಲಿ ಬೃಹತ್ ಮೊತ್ತಕ್ಕೆ ಹರಾಜಾಗಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ನಿರೀಕ್ಷೆಯಂತೆಯೇ ಸಾಕಷ್ಟು ಪೈಪೋಟಿಗೆ ಒಳಗಾದ ಶಫಾಲಿ ವರ್ಮ 2 ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಶಫಾಲಿ ವರ್ಮ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಆರ್‌ಸಿಬಿ ಕೂಡ ಸಾಕಷ್ಟು ಪೈಪೋಟಿ ನಡೆಸಿತು.

2019ರಲ್ಲಿ ಅಂತಾರಾಷ್ಟ್ರೀಯ ಟಿ20 ಮಾದರಿಗೆ ಪದಾರ್ಪಣೆ ಮಾಡಿದ ಶಫಾಲಿ ಭಾರತದ ಪರವಾಗಿ ಆಡಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಸ್ಪೋಟಕವಾಗಿ ರನ್‌ಗಳಿಸುವ ಸಾಮರ್ಥ್ಯ ಹೊಂದಿರುವ ಯುವ ಆಟಗಾರ್ತಿ ತಂಡದಲ್ಲಿ ಅನೇಕ ಅದ್ಭುತ ಪ್ರದರ್ಶನ ನೀಡುವ ಮೂಲಕ ಸ್ಟಾರ್ ಪಟ್ಟಕ್ಕೇರಿದ್ದಾರೆ. ಹೀಗಾಗಿ ಶಫಾಲಿ ವರ್ಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿತ್ತು.

ಅಕ್ಟೋಬರ್ 2022ರಲ್ಲಿ ಶಫಾಲಿ ಟಿ20ಐ ಮಾದರಿಯಲ್ಲಿ 1000 ರನ್‌ಗಳನ್ನು ಗಳಿಸಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿಕೊಂಡರು. 43 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಶಫಾಲಿ ಒಟ್ಟಾರೆಯಾಗಿ ಭಾರತೀಯ ಆಟಗಾರ್ತಿಯರ ಪೈಕಿ ಮಿಥಾಲಿ ರಾಜ್ ಮತ್ತು ಜೆಮಿಮಾ ರಾಡ್ರಿಗಸ್ ನಂತರ ಮೂರನೇ ವೇಗದ ಆಟಗಾರ್ತಿ ಎನಿಸಿಕೊಂಡರು.

19 ವರ್ಷದ ಶಫಾಲಿ 1000ಕ್ಕೂ ಅಧಿಕ ರನ್‌ಗಳಿಸಿ ಭಾರತೀಯ ಆಟಗಾರ್ತಿಯರ ಪೈಕಿ ಅತ್ಯಧಿಕ ಬ್ಯಾಟಿಂಗ್ ಸ್ಟ್ರೈಕ್-ರೇಟ್ ಹೊಂದಿರುವ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಶಫಾಲಿ 134.46 ಸ್ಟ್ರೈಕ್‌ರೇಟ ಹೊಂದಿದ್ದಾರೆ. ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಮಹಿಳಾ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಶಫಾಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಇನ್ನು ಡಬ್ಲ್ಯುಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಶಫಾಲಿ ವರ್ಮ ಹೊರತುಪಡಿಸಿ ಭಾರತದ ಮತ್ತೋರ್ವ ಸ್ಟಾರ್ ಆಟಗಾರ್ತಿ ಜಮೀಮಾ ರೋಡ್ರಿಗಸ್ ಅವರನ್ನು ತೆಕ್ಕೆಗೆ ಹಾಕಿಕೊಂಡಿದ್ದು ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಮೆಗ್ ಲ್ಯಾನ್ನಿಂಗ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.

Story first published: Monday, February 13, 2023, 16:58 [IST]
Other articles published on Feb 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+