For Quick Alerts
ALLOW NOTIFICATIONS  
For Daily Alerts
 

ಫೈನಲ್‌ಗಾಗಿ ಡೆಲ್ಲಿ, ಗುಜರಾತ್‌ ಬಿಗ್ ಫೈಟ್‌: ಸಮಯ, ನೇರಪ್ರಸಾರ, ಪಿಚ್ ವರದಿಯ ಮಾಹಿತಿ

ವಡೋದರಾ: ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಲೀಗ್‌ ಹಂತದ ಪಂದ್ಯಗಳು ಮುಗಿದಿದ್ದು, ಮಂಗವಾರ (ಫೆ.3) ಎಲಿಮಿನೇಟರ್‍ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸತತವಾಗಿ ನಾಲ್ಕನೇ ಬಾರಿಗೆ ಫೈನಲ್‌ಗೆ ಏರುವ ಕನಸನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೊಂದಿದ್ದರೆ, ಚೊಚ್ಚಲ ಬಾರಿಗೆ ಪ್ರಶಸ್ತಿ ಸುತ್ತನ್ನು ತಲುಪುವ ಆಸೆಯನ್ನು ಹೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ಈ ಹಿಂದಿನ ಆವೃತ್ತಿಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಫೈನಲ್‌ಗೆ ಪ್ರವೇಶ ಪಡೆಯುತ್ತಿತ್ತು. ಆದರೆ ಈ ಬಾರಿ ಡೆಲ್ಲಿ ತನ್ನ ದಾರಿಯನ್ನು ಕೊಂಚ ಚೇಂಜ್ ಮಾಡಿದೆ. ಮಂಗಳವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಸತತ ನಾಲ್ಕನೇ ಬಾರಿಗೆ ಫೈನಲ್‌ ಪ್ರವೇಶಿಸುವ ಆಸೆಯನ್ನು ಕಾಣುತ್ತಿದೆ. ಗುಜರಾತ್ ಜೈಂಟ್ಸ್ ತಂಡ ಸತತ ಎರಡನೇ ಬಾರಿಗೆ ಎಲಿಮಿನೇಟರ್‍‌ಗೆ ಪ್ರವೇಶ ಪಡೆದಿದೆ.

WPL Eliminator 2026

ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರ್ತಿಯರು ಇದ್ದಾರೆ. ಈ ಆಟಗಾರ್ತಿಯರು ತಂಡದ ಪರ ಅಬ್ಬರಿಸೋಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆರಂಭಿಕರಾಗಿ ಕಾಣಿಸಿಕೊಳ್ಳುವ ಲಿಜೇಲ್‌ ಲಿ ಹಾಗೂ ಶಫಾಲಿ ವರ್ಮಾ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಮೂಲಕ ಆಸರೆಯಾಗಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ಲಾರಾ ವೊಲ್ವಾರ್ಡ್ ಹಾಗೂ ಜೆಮಿಮಾ ರೊಡ್ರಿಗಸ್‌ ಒತ್ತಡವನ್ನ ಮೆಟ್ಟಿನಿಂತು ಬ್ಯಾಟ್ ಮಾಡಬಲ್ಲರು.

ಡೆಲ್ಲಿ ತಂಡದಲ್ಲಿ ಸ್ಪಿನ್ ಬೌಲರ್‌ಗಳ ದಂಡೇ ಇದೆ. ಸ್ನೇಹಾ ರಾಣಾ, ಶ್ರೀ ಚರಣಿ ತಮ್ಮ ಪಿರ್ಕಿಯಿಂದ ಎದುರಾಳಿಗಳಿಗೆ ಕಾಡಬಲ್ಲರು. ತಮ್ಮ ಚೊಚ್ಚಲ ಡಬ್ಲ್ಯೂಪಿಎಲ್‌ ಆವೃತ್ತಿಯನ್ನೇ ಸ್ಮರಣೀಯವಾಗಿಸಿರುವ ನಂದಿನಿ ಶರ್ಮಾ ಸಹ ಎದುರಾಳಿಗಳಿಗೆ ಕಾಟ ನೀಡಬಲ್ಲರು. ಶಿಖಾ ಪಾಂಡೆ ತಮ್ಮ ಅನುಭವದ ಮೂಲಕ ಗುಜರಾತ್‌ ಬ್ಯಾಟರ್‌ಗಳನ್ನು ಕಾಡಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ.

WPL Eliminator 2026

ಡೆಲ್ಲಿ ಸಂಭಾವ್ಯ ತಂಡ: ಲಿಜೆಲ್ ಲೀ, ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್, ಜೆಮಿಮಾ ರೋಡ್ರಿಗಸ್, ಮರಿಜನ್ನೆ ಕಪ್, ಚಿನೆಲ್ಲೆ ಹೆನ್ರಿ, ನಿಕಿ ಪ್ರಸಾದ್, ಸ್ನೇಹ ರಾಣಾ, ಮಿನ್ನು ಮಣಿ, ನಂದಿನಿ ಶರ್ಮಾ, ಶ್ರೀ ಚರಣಿ.

ಸೋಫಿ ಆಕರ್ಷಣೆ

ಗುಜರಾತ್ ಜೈಂಟ್ಸ್ ತಂಡಕ್ಕೆ ಸೋಫಿ ಡಿವೈನ್‌ ಆಧಾರ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲ ಪ್ಲೇಯರ್. ಗುಜರಾತ್‌ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅನುಷ್ಕಾ ಶರ್ಮಾ, ಭಾರತಿ ಫುಲ್ಮಾಲಿ ಅವರು ತಂಡಕ್ಕೆ ನೆರವಾಗಬಲ್ಲರು. ನಾಯಕಿ ಆಶ್ಲೆ ಗಾರ್ಡ್ನರ್‌ ಅವರು ತಮ್ಮ ಭರ್ಜರಿ ಆಟದ ಮೂಲಕ ಎದುರಾಳಿಗಳಿಗೆ ಕಾಟ ನೀಡಬಲ್ಲರು.

ಜೈಂಟ್ಸ್ ತಂಡದಲ್ಲೂ ಸ್ಟಾರ್‌ ಬೌಲರ್‌ಗಳು ಇದ್ದಾರೆ. ಕಾಶ್ವಿ ಗೌತಮ್, ತನುಜಾ ಕನ್ವರ್ ಹಾಗೂ ಆರಂಭದಲ್ಲಿ ಎದುರಾಳಿಗೆ ಸತತ ಪ್ರಶ್ನೆಗಳನ್ನು ಕೇಳುವ ರೇಣುಕಾ ಸಿಂಗ್ ಸೇರಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ ತಂಡಕ್ಕೆ ಆಧಾರವಾಗಬಲ್ಲರು.

ಗುಜರಾತ್ ಸಂಭಾವ್ಯ ತಂಡ: ಬೆತ್ ಮೂನಿ, ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಆಶ್ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್, ಭಾರತಿ ಫುಲ್ಮಾಲಿ, ಕನಿಕಾ ಅಹುಜಾ, ಕಾಶ್ವಿ ಗೌತಮ್, ತನುಜಾ ಕನ್ವರ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್.

ಪಿಚ್‌ ಯಾರಿಗೆ ಸಹಾಯ ಮಾಡಲಿದೆ?

ಇತ್ತೀಚೆಗೆ ವಡೋದರಾದ ಪಿಚ್‌ಗಳು ಬ್ಯಾಟಿಂಗ್‌ಗೆ ಹೆಚ್ಚು ಪೂರಕವಾಗಿವೆ. ರನ್ ಗಳಿಕೆಗೆ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆ ಇದೆ. ಹೀಗಾಗಿ ಸ್ಥಿರ ಪ್ರದರ್ಶನ ನೀಡಿದ ತಂಡ ಗೆಲುವಿನ ಕೇಕೆ ಹಾಕುತ್ತದೆ.

ಗುಜರಾತ್, ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ನೋಡುವುದು ಎಲ್ಲಿ?

ಮಹಿಳಾ ಪ್ರೀಮಿಯರ್‌ ಲೀಗ್‌ ಎಲಿಮಿನೇಟರ್ ಪಂದ್ಯವನ್ನು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ನೇರವಾಗಿ ನೋಡಬಹುದಾಗಿದೆ. ಇನ್ನು ಈ ಪಂದ್ಯವನ್ನು ಜಿಯೋಹಾಟ್‌ಸ್ಟಾರ್‌ ಆಪ್‌ನಲ್ಲೂ ವೀಕ್ಷಿಸಬಹುದಾಗಿದೆ.

ಪಂದ್ಯ ಆರಂಭವಾಗುವುದು ಯಾವಾಗ?

ಡೆಲ್ಲಿ, ಗುಜರಾತ್‌ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಅಲ್ಲದೆ ಪಂದ್ಯ ಆರಂಭಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.

Story first published: Tuesday, February 3, 2026, 8:13 [IST]
Other articles published on Feb 3, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+