WPL final: ಡೆಲ್ಲಿ ವಿರುದ್ಧ ಆರ್ಭಟಿಸಿದ RCB: ಸ್ಮೃತಿ ಪಡೆಗೆ ಎರಡನೇ ಕಿರೀಟ
ವಡೋದಾರ: ಸವಾಲಿನ ಮೊತ್ತವನ್ನು ಹೇಗೆ ಚೇಸ್ ಮಾಡಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್‌ಗಳು, ಒತ್ತಡವನ್ನು ಮೆಟ್ಟನಿಂತು ಆರ್ಭಟಿಸಿದ್ದಾರೆ. ಮಹತ್ವದ ಪಂದ್ಯದಲ್ಲಿ ಜವಾಬ್ದಾರಿಯುತ ಆಟವನ್ನು ಆಡಿದ ಅನುಭವಿ ಆಟಗಾರ್ತಿಯರು ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ದಾರೆ.
ನಾಯಕಿ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವೋಲ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಆರ್‌ಸಿಬಿ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಭರ್ಜರಿ ಜಯ ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ ಸವಾಲಿನ ಗುರಿಯನ್ನು ಸಮರ್ಥವಾಗಿ ಮೆಟ್ಟಿನಿಂತ ಆರ್‌ಸಿಬಿ ಇತಿಹಾಸ ಬರೆದಿದೆ. ಈ ಲೀಗ್‌ನಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಎರಡನೇ ತಂಡ ಎಂಬ ಹೆಗ್ಗಳಿಕೆ ಆರ್‌ಸಿಬಿ ತಂಡದ ಪಾಲಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 204 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಮೊದಲ ಓವರ್‌ನಲ್ಲಿ 2 ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಇವರ ಆಟಕ್ಕೆ ಚೆನ್ಲಿ ಹೆನ್ರಿ ಮೊದಲ ಎಸೆತದಲ್ಲಿ ಪೆವಿಲಿಯನ್‌ಗೆ ಅಟ್ಟುವಲ್ಲಿ ಸಫಲರಾದರು. ಆರ್‌ಸಿಬಿ 9 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಸ್ಮೃತಿ-ಜಾರ್ಜಿಯಾ ಜುಗಲ್ ಬಂದಿ
ಎರಡನೇ ವಿಕೆಟ್‌ಗೆ ನಾಯಕಿ ಸ್ಮೃತಿ ಮಂಧಾನ ಅವರಿಗೆ ಉತ್ತಮ ಸಾಥ್ ನೀಡಿದ ಜಾರ್ಜಿಯಾ ವೋಲ್ ಅಮೋಘ ಜೊತೆಯಾಟವನ್ನು ನೀಡಿತು. ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳನ್ನು ಬಹುವಾಗಿ ಕಾಡಿದರು. ಆರ್‌ಸಿಬಿ ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸಿ ಒಂದು ವಿಕೆಟ್ ಕಳೆದುಕೊಂಡು 59 ರನ್ ಸೇರಿಸಿತು. ಈ ಜೋಡಿಯ ಆಟ 10 ಓವರ್‌ಗಳ ವರೆಗೂ ವಿಕೆಟ್ ಬೀಳದಂತೆ ಕಾಯ್ದುಕೊಂಡು 100 ರನ್ ಸೇರಿಸಿತು. ಫೈನಲ್ ಪಂದ್ಯದಲ್ಲಿ ಜಾರ್ಜಿಯಾ ಕೇವಲ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇನ್ನು ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ 23 ಎಸೆತಗಳಲ್ಲಿ 50 ರನ್ ಚಚ್ಚಿದರು.
ಎರಡನೇ ವಿಕೆಟ್‌ಗೆ ಸ್ಮೃತಿ ಮಂಧನಾ, ಜಾರ್ಜಿಯಾ ಜೋಡಿ 92 ಎಸೆತಗಳಲ್ಲಿ 165 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಜಾರ್ಜಿಯಾ 14 ಬೌಂಡರಿ ನೆರವಿನಿಂದ 79 ರನ್ ಸಿಡಿಸಿದರು. ಸ್ಮೃತಿ ಮಂಧಾನ 12 ಬೌಂಡರಿ 3 ಸಿಕ್ಸರ್ ಸಹಾಯದಿಂದ 87 ರನ್ ಚಚ್ಚಿ ಮಿಂಚಿದರು. ಅಂತಿಮವಾಗಿ ಆರ್‌ಸಿಬಿ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 204 ರನ್ ಸೇರಿಸಿ ಅಬ್ಬರಿಸಿತು.
ಉತ್ತಮ ಆರಂಭ
ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿತು. ಡೆಲ್ಲಿ ತಂಡದ ಆರಂಭಿಕರಾದ ಲಿಜೇಲ್ ಲಿ ಹಾಗೂ ಶಫಾಲಿ ವರ್ಮಾ (20) ಜೋಡಿ ಮೊದಲ ವಿಕೆಟ್‌ಗೆ 49 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಲಿಜೇಲ್ ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿದರು. ಮೂರನೇ ವಿಕೆಟ್‌ಗೆ ಲಾರಾ ವೋಲ್ವಾರ್ಡ್ ಹಾಗೂ ನಾಯಕಿ ಜೆಮಿಮಾ ರೊಡ್ರಿಗಸ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಭರ್ಜರಿ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಮೊತ್ತವನ್ನು ಸೇರಿಸುವಲ್ಲಿ ಸಫಲರಾದರು.

3ನೇ ವಿಕೆಟ್‌ಗೆ ಲಾರಾ ಹಾಗೂ ಜೆಮಿಮಾ ಜೋಡಿ 51 ಎಸೆತಗಳಲ್ಲಿ 76 ರನ್ ಸೇರಿಸಿತು. ನಾಯಕಿ ಜೆಮಿಮಾ 37 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 57 ರನ್ ಸಿಡಿಸಿ ಔಟ್ ಆದರು. ಲಾರಾ ವೋಲ್ವಾರ್ಡ್ 44 ರನ್ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಚೆನ್ಲಿ ಹೆನ್ರಿ 233ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 35 ರನ್ ಬಾರಿಸಿದರು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 203 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications