For Quick Alerts
ALLOW NOTIFICATIONS  
For Daily Alerts
 

WPL Final: ಆರ್‌ಸಿಬಿ-ಡೆಲ್ಲಿ ಮಹಾಸಮರದ ಅಂಕಿಅಂಶಗಳು ಇಲ್ಲಿದೆ

ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಸೀಸನ್‌ನಲ್ಲಿ, ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೈಟ್ ನಡೆಸಲಿವೆ. ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಪ್ರವೇಶ ಪಡೆದಿತ್ತು. ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಡೆಲ್ಲಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಕೋಟಂಬಿಯಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಫೈಟ್ ನಡೆಸಲಿವೆ.

ಉಭಯ ತಂಡಗಳು ಲೀಗ್‌ ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್‍ಸಿಬಿ ಒಂದು ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದಿದೆ. ಇನ್ನೊಂದು ಪಂದ್ಯವನ್ನು ಡೆಲ್ಲಿ 7 ವಿಕಟ್‌ಗಳಿಂದ ಗೆದ್ದಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಡೆಲ್ಲಿ ಬಲಿಷ್ಠವಾಗಿದೆ. ಆರ್‌ಸಿಬಿ ಪ್ರಸಕ್ತ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರ್ತಿಯರು ಇದ್ದಾರೆ. ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅತಿ ಹೆಚ್ಚು ರನ್‌ ಕಲೆ ಹಾಕಿದ ಆಟಗಾರ್ತಿಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಫೈನಲ್‌ ಪಂದ್ಯದಲ್ಲಿ 53 ರನ್‌ ಬಾರಿಸಿದಲ್ಲಿ ಆರೆಂಜ್ ಕ್ಯಾಪ್‌ಗೆ ತಮ್ಮ ಹೆಸರನ್ನು ನಮೂದಿಸಬಹುದಾಗಿದೆ.

WPL Final 2026

ಆರ್‌ಸಿಬಿ ತಂಡದ ಕಣಕ್ಕೆ ಇಳಿಯುವ ಇನ್ನೋರ್ವ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್‌ ಸಹ ಗರಿಷ್ಠ ರನ್‌ ಬಾರಿಸಿದ ಆಟಗಾರ್ತಿ. ಇವರ ಫೈನಲ್‌ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ನಿರೀಕ್ಷೆ ಇದೆ. ಆರ್‌ಸಿಬಿ ಪರ ಫಿನಿಷರ್ ಪಾತ್ರದಲ್ಲಿ ರಿಚಾ ಘೋಷ್ ಕಾಣಿಸಿಕೊಳ್ಳಬಲ್ಲರು.

ಆರ್‌ಸಿಬಿ ಪರ ಗರಿಷ್ಠ ರನ್ ಸಾಧಕರು

ಸ್ಮೃತಿ ಮಂಧಾನ, 8 ಪಂದ್ಯ, 290 ರನ್‌
ಗ್ರೇಸ್ ಹ್ಯಾರಿಸ್‌, 8 ಪಂದ್ಯ, 228 ರನ್‌
ರಿಚಾ ಘೋಷ್, 8 ಪಂದ್ಯ, 183 ರನ್‌

ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಲಾರೆನ್‌ ಬೆಲ್‌ ಸಹ ವಿಕೆಟ್‌ ಬೇಟೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸ್ಪಿನ್ ಬೌಲರ್ ಶ್ರೇಯಾಂಕ ಪಾಟೀಲ್ ಸಹ ರನ್‌ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸುತ್ತಿದ್ದಾರೆ.

WPL Final 2026

ವಿಕೆಟ್ ಬೇಟೆಯಲ್ಲಿ ಮುಂಚೂಣಿಯಲ್ಲಿರುವ ಬೌಲರ್ಸ್

ನಾಡಿನ್‌ ಡಿ ಕ್ಲರ್ಕ್, 8 ಪಂದ್ಯ, 15 ವಿಕೆಟ್‌
ಲಾರೆನ್ ಬೆಲ್‌, 8 ಪಂದ್ಯ, 12 ವಿಕೆಟ್‌
ಶ್ರೇಯಾಂಕ ಪಾಟೀಲ್, 8 ಪಂದ್ಯ, 11 ವಿಕೆಟ್‌

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲೂ ಹೊಡಿಬಡಿ ಆಟವನ್ನೇ ಮೈಗೂಡಿಸಿಕೊಂಡಿರುವ ಲಿಜೇಲ್‌ ಲಿ ಹಾಗೂ ಶಫಾಲಿ ವರ್ಮಾ ತಂಡಕ್ಕೆ ಆಧಾರವಾಗಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ ಸಹ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಬಲ್ಲರು. ಡೆಲ್ಲಿ ಪರ ಗರಿಷ್ಠ ರನ್ ಸಾಧನೆ ಮಾಡಿದ ಆಟಗಾರ್ತಿಯರ ಪಟ್ಟಿ ಇಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪರ ಟಾಪ್‌ ರನ್‌ ಬಾರಿಸಿದವರು

ಲಿಜೇಲ್‌ ಲಿ, 9 ಪಂದ್ಯ, 283 ರನ್‌
ಲಾರಾ ವೋಲ್ವಾರ್ಡ್, 9 ಪಂದ್ಯ, 273 ರನ್‌
ಶಫಾಲಿ ವರ್ಮಾ, 9 ಪಂದ್ಯ, 239 ರನ್‌

ಡೆಲ್ಲಿ ತಂಡದಲ್ಲಿ ಖ್ಯಾತ ನಾಮ ಬ್ಯಾಟರ್‍‌ಗಳು ಅಷ್ಟೇ ಅಲ್ಲ ಬೌಲರ್‍‌ಗಳು ಇದ್ದಾರೆ. ಪಂದ್ಯದ ಗತಿಯನ್ನೇ ಬದಲಿಸಬಲ್ಲ ಕ್ಷಮತೆಯನ್ನು ಇವರು ಹೊಂದಿದ್ದಾರೆ. ಕ್ಯಾಪಿಟಲ್ಸ್ ತಂಡದ ಪರ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಮೂವರು ಬೌಲರ್‍‌ಗಳು ಇವರೇ.

ಹೆಚ್ಚು ವಿಕೆಟ್‌ ಪಡೆದವರು

ನಂದಿನಿ ಶರ್ಮಾ, 9 ಪಂದ್ಯ, 16 ವಿಕೆಟ್‌
ಶ್ರೀ ಚರಣಿ, 9 ಪಂದ್ಯ, 14 ವಿಕೆಟ್‌
ಚೆನ್ಲಿ ಹೆನ್ರಿ, 9 ಪಂದ್ಯ, 12 ವಿಕೆಟ್‌


ಆರ್‍‌ಸಿಬಿ ಹಾಗೂ ಡೆಲ್ಲಿ ತಂಡಗಳ ನಡುವಣ ಕಾದಾಟದ ಇತಿಹಾಸ

ದಿನಾಂಕ ಗೆದ್ದ ತಂಡ ಗೆಲುವಿನ ಅಂತರ ಸ್ಥಳ
5 ಮಾರ್ಚ್ 2023 ಡೆಲ್ಲಿ ಕ್ಯಾಪಿಟಲ್ಸ್ 60 ರನ್‍ಗಳಿಂದ ಬ್ರಬೋರ್ನ್ ಸ್ಟೇಡಿಯಂ, ಮುಂಬೈ
13 ಮಾರ್ಚ್ 2023 ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳಿಂದ ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ
29 ಫೆಬ್ರವರಿ 2024 ಡೆಲ್ಲಿ ಕ್ಯಾಪಿಟಲ್ಸ್ 25 ರನ್‍ಗಳಿಂದ ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
10 ಮಾರ್ಚ್ 2024 ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್‌ಗಳಿಂದ ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ
17 ಮಾರ್ಚ್ 2024 (ಫೈನಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್‌ಗಳಿಂದ ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ
17 ಫೆಬ್ರವರಿ 2025 ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್‌ಗಳಿಂದ ಬಿಸಿಎ ಸ್ಟೇಡಿಯಂ ಕೋಟಂಬಿ, ವಡೋದರಾ
1 ಮಾರ್ಚ್ 2025 ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್‌ಗಳಿಂದ ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
17 ಜನವರಿ 2026 ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್‌ಗಳಿಂದ ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ
24 ಜನವರಿ 2026 ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳಿಂದ ಬಿಸಿಎ ಸ್ಟೇಡಿಯಂ ಕೋಟಂಬಿ, ವಡೋದರಾ

Story first published: Thursday, February 5, 2026, 10:21 [IST]
Other articles published on Feb 5, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+