For Quick Alerts
ALLOW NOTIFICATIONS  
For Daily Alerts
 

WPL Final: ಪ್ರಶಸ್ತಿಗಾಗಿ ಸ್ಮೃತಿ, ಜೆಮಿಮಾ ಹೋರಾಟ: ಕಪ್‌ ಗೆದ್ದರೆ ಆರ್‌ಸಿಬಿ ಇತಿಹಾಸ

ವಡೋದಾರ: ಆರ್‍‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಂದಾಳು ಜೆಮಿಮಾ ರೊಡ್ರಿಗಸ್‌ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ. ಇಬ್ಬರೂ ಮೈದಾನದ ಹೊರಗಡೆ ಉತ್ತಮ ಸ್ನೇಹಿತೆಯರಾಗಿದ್ದು, ಕ್ರಿಕೆಟ್‌ ಅಂಗಳದಲ್ಲಿ ಗುರುವಾರ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ಆರ್‍ಸಿಬಿ ಎರಡನೇ ಬಾರಿ ಕಪ್‌ಗೆ ಮುತ್ತಿಡುವ ಕನಸು ಕಾಣುತ್ತಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದೆ.

ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದ್ದು, ಭರ್ಜರಿ ಲಯದಲ್ಲಿದ್ದಾರೆ. ಆರ್‌ಸಿಬಿ ಲೀಗ್‌ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಈ ಮೂಲಕ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿದೆ. ಹೀಗಾಗಿ ಉಭಯ ತಂಡಗಳ ನಡುವಣ ಫೈಟ್‌ ರೋಚಕತೆ ಹೆಚ್ಚಿಸಿದೆ.

WPL Final

ಇದಕ್ಕೂ ಮೊದಲು ಉಭಯ ತಂಡಗಳು 2024ರ ಮಹಿಳಾ ಪ್ರೀಮಿಯರ್ ಲೀಗ್‌ ಫೈನಲ್‌ನಲ್ಲಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಮತ್ತೊಮ್ಮೆ ಟ್ರೋಫಿಗೆ ಮುತ್ತಿಟ್ಟು ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದೆ.

ಬಿಗ್‌ ಇನಿಂಗ್ಸ್‌ ನಿರೀಕ್ಷೆ

ಆರ್‌ಸಿಬಿ ತಂಡದ ಪರ ಆರಂಭಿಕರಾಗಿ ನಾಯಕಿ ಸ್ಮೃತಿ ಮಂಧಾನ ಹಾಗೂ ಗ್ರೇಸ್‌ ಹ್ಯಾರಿಸ್ ಕಣಕ್ಕೆ ಇಳಿಯಲಿದ್ದಾರೆ. ಈ ಇಬ್ಬರೂ ಆಟಗಾರ್ತಿಯರು ಭರ್ಜರಿ ಫಾರ್ಮ್‌ನಲ್ಲಿದ್ದು, ಮತ್ತೊಮ್ಮೆ ದೊಡ್ಡ ಮೊತ್ತದ ಅಡಿಪಾಯ ಹಾಕಿಕೊಡುವ ಅನಿವಾರ್ಯತೆ ಇದೆ. ಗ್ರೇಸ್‌ ಹ್ಯಾರಿಸ್‌ ತಮ್ಮ ಬಿಗ್‌ ಹಿಟ್‌ಗಳ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಸ್ಮೃತಿ ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿ ಬಿಗ್ ಇನಿಂಗ್ಸ್ ಕಟ್ಟುವ ಕ್ಷಮತೆ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಜಾರ್ಜಿಯಾ ವೋಲ್‌ ತಂಡಕ್ಕೆ ಆಧಾರವಾಗ ಬೇಕಿದೆ.

ಆಲ್‌ರೌಂಡರ್‌ ನಾಡಿನ್ ಡಿ ಕ್ಲಾರ್ಕ್‌, ರಿಚಾ ಘೋಷ್‌ ದೊಡ್ಡ ದೊಡ್ಡ ಹೊಡೆತಗಳ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಬಲ್ಲರು. ರಾಧಾ ಯಾದವ್ ಸಹ ರನ್‌ ಬಾರಿಸುವ ಕ್ಷಮತೆ ಹೊಂದಿದ್ದಾರೆ.

WPL Final

ವೇಗದ ಬೌಲಿಂಗ್ ವಿಭಾಗವನ್ನು ಲಾರೆನ್ ಬೆಲ್‌ ಮುನ್ನಡೆಸಲಿದ್ದಾರೆ. ಇವರಿಗೆ ಸಯಾಲಿ ಸತ್ಗರೆ ಸಾಥ್ ನೀಡಲಿದ್ದಾರೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್ ಮಿಡ್ಲ್ ಓವರ್‌ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕಬಲ್ಲ ಕ್ಷಮತೆ ಹೊಂದಿದ್ದಾರೆ.

ಲಿಜೇಲ್‌ ಆರ್ಕಷಣೆ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ್ತಿ ಲಿಜೇಲ್‌ ಲಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಬೌಂಡರಿ, ಸಿಕ್ಸರ್‌ಗಳ ಬಾರಿಸಿ ಪವರ್ ಫುಲ್ ಆರಂಭವನ್ನು ನೀಡಬಲ್ಲರು. ಇವರಿಗೆ ಶಫಾಲಿ ವರ್ಮಾ ಉತ್ತಮ ಸಾಥ್ ನೀಡಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೊಡ್ರಿಗಸ್ ಜವಾಬ್ದಾರಿಯುತ ಆಟಕ್ಕೆ ಹೆಸರುವಾಸಿ. ಮಾರಿಜನ್‌ ಕಾಪ್‌, ಚೆನ್ಲಿ ಹೆನ್ರಿ ತಮ್ಮ ಭರ್ಜರಿ ಆಲ್‌ರೌಂಡರ್‌ ಆಟದ ನೆರವಿನಿಂದ ತಂಡಕ್ಕೆ ಆಧಾರವಾಗಬಲ್ಲರು.

ಡೆತ್‌ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಲು ನಂದಿನಿ ಶರ್ಮಾ ಹೆಸರುವಾಸಿ. ಇವರು ಈಗಾಗಲೇ ಲೀಗ್‌ನಲ್ಲಿ ತಮ್ಮ ಬಿಗುವಿನ ದಾಳಿ ಮೂಲಕ ಗಮನ ಸೆಳೆದಿದ್ದಾರೆ. ಪವರ್ ಪ್ಲೇನಲ್ಲಿ ಮಾರಿಜನ್‌ ತಮ್ಮ ಶಿಸ್ತು ಬದ್ಧ ದಾಳಿಯ ಮೂಲಕ ವಿಕೆಟ್ ಬೇಟೆ ನಡೆಸಬಲ್ಲರು. ಸ್ಪಿನ್ ಬೌಲರ್‌ಗಳಾದ ಸ್ನೇಹಾ ರಾಣಾ, ಶ್ರೀ ಚರಣಿ ಸಹ ತಮ್ಮ ಸ್ಪಿನ್ ಮೂಲಕ ತಂಡಕ್ಕೆ ನೆರವಾಬಲ್ಲರು. ಈ ಎಲ್ಲರೂ ತಮ್ಮ ಸ್ಥಿರ ಪ್ರದರ್ಶನವನ್ನು ನೀಡಿದ್ದೇ ಆದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪ್ರಶಸ್ತಿಯ ಕನಸನ್ನು ಕಾಣಬಹುದು.

Story first published: Thursday, February 5, 2026, 8:06 [IST]
Other articles published on Feb 5, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+