WPL Final:ಆರ್‌ಸಿಬಿ ಗೆಲುವಿಗೆ 204 ರನ್ ಗುರಿ ನೀಡಿದ ಡೆಲ್ಲಿ
ವಡೋದರಾ: ನಾಯಕಿ ಜೆಮಿಮಾ ರೊಡ್ರಿಗಸ್ ಬಾರಿಸಿದ ಶತಕ ಹಾಗೂ ಭರವಸೆಯ ಆಟಗಾರ್ತಿ ಲಾರಾ ವೋಲ್ವಾರ್ಡ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 204 ರನ್‌ಗಳ ಗುರಿಯನ್ನು ಸ್ಮೃತಿ ಮಂಧಾನ ಪಡೆಗೆ ನೀಡಿದೆ. ಇದೇ ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತ ಎಂದ ದಾಖಲೆ ಡೆಲ್ಲಿ ಕ್ಯಾಪಿಟಲ್ಸ್ ತನ್ನದಾಗಿಸಿಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭದಲ್ಲಿ ಲಿಜೇಲ್ ಲಿ ಹಾಗೂ ಶಫಾಲಿ ವರ್ಮಾ ಜೋಡಿ ಎಚ್ಚರಿಕೆಯ ಆಟವನ್ನು ಆಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆರ್‌ಸಿಬಿ ತಂಡದ ವೇಗದ ಬೌಲರ್‌ಗಳ ವಿಫಲರಾದರು. ಪವರ್ ಪ್ಲೇನಲ್ಲಿ ಉತ್ತಮ ಜೊತೆಯಾಟದ ಕಾಣಿಕೆ ನೀಡುವಲ್ಲಿ ಈ ಆಟಗಾರ್ತಿಯರು ಯಶಸ್ವಿಯಾದರು.

ಈ ಜೋಡಿ ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 49 ರನ್ ಸಿಡಿಸಿತು. ಈ ಅವಧಿಯಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 13 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 20 ರನ್ ಸಿಡಿಸಿದರು. ಇವರಿಗೆ ಅರುಂಧತಿ ರೆಡ್ಡಿ ಪೆವಿಲಿಯನ್‌ಗೆ ಅಟ್ಟುವಲ್ಲಿ ಸಫಲರಾದರು. ಶಫಾಲಿ ಅವರ ಉತ್ತಮ ಕ್ಯಾಚ್‌ನ್ನು ರಿಚಾ ಘೋಷ್ ಪಡೆದರು. ಆರಂಭಿಕ ಆಟಗಾರ್ತಿ ಲಿಜೇಲ್ ಲಿ ಸ್ಫೋಟಕ ಆರಂಭವನ್ನು ನೀಡಿದರು. ಆದರೆ ಇದನ್ನು ಬಿಗ್ ಇನಿಂಗ್ಸ್ ಆಗಿ ಕನ್ವರ್ಟ್ ಮಾಡುವಲ್ಲಿ ವಿಫಲರಾದರು. ಇವರು ನಾಡಿನ್ ಡಿ ಕ್ಲಾರ್ಕ್ ತೋಡಿದ ಖೆಡ್ಡಾಗೆ ಬಲಿಯಾದರು. ಇವರು 30 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸೇರಿದಂತೆ 37 ರನ್ ಸಿಡಿಸಿದರು.
72 ರನ್‌ಗಳಿಗೆ ಆರಂಭಿಕ ಆಟಗಾರ್ತಿಯರು ಪೆವಿಲಿಯನ್ ಸೇರಿದರು. ಮೂರನೇ ವಿಕೆಟ್‌ಗೆ ಜೆಮಿಮಾ ರೊಡ್ರಿಗಸ್ ಹಾಗೂ ಲಾರಾ ವೋಲ್ವಾರ್ಡ್ ಜೋಡಿ ಉತ್ತಮ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು.ಈ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿತು. ಈ ಜೋಡಿ ಆರಂಭಿಕ ಆಟಗಾರ್ತಿಯರ ಹಾಕಿಕೊಟ್ಟ ರನ್ ದರವನ್ನೇ ಮುಂದುವರೆಸುತ್ತಾ ಸಾಗಿತು. ಜೇಮಿಮಾ ಈ ಆವೃತ್ತಿಯಲ್ಲಿ ಎರಡನೇ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು.
ಜೆಮಿಮಾ ಅರ್ಧಶತಕ
ಜೆಮಿಮಾ ರೊಡ್ರಿಗಸ್ ಹಾಗೂ ಜೋಡಿ 51 ಎಸೆತಗಳಲ್ಲಿ 76 ರನ್ ಸೇರಿಸಿತು. ನಾಯಕಿ ಜೆಮಿಮಾ ರೊಡ್ರಿಗಸ್ 37 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 57 ರನ್ ಬಾರಿಸಿ ಔಟ್ ಆದರು. ಕೊನೆಯ ಓವರ್‍ಗಳಲ್ಲಿ ಚೆನ್ಲಿ ಹೆನ್ರಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಕೊನೆಯ ಎರಡು ಓವರ್‌ನಲ್ಲಿ ಹೆನ್ರಿ ಹಾಗೂ ಲಾರಾ ವೋಲ್ವಾರ್ಡ್ ಜೋಡಿ 39 ರನ್ ಸಿಡಿಸಿತು. ಈ ಮೂಲಕ ಡೆಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 203 ರನ್ ಸಿಡಿಸಿತು.

ಭರವಸೆಯ ಆಟಗಾರ್ತಿ ಲಾರಾ ವೋಲ್ವಾರ್ಡ್ 25 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿದರು. ಚೆನ್ಲಿ ಹೆನ್ರಿ ಕೇವಲ 15 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 35 ರನ್ ಬಾರಿಸಿದರು. ಆರ್‌ಸಿಬಿ ಪರ ಲಾರೇನ್ ಬೆಲ್ ಅವರನ್ನು ಹೊರತುಪಡಿಸಿ ಉಳಿದ ಬೌಲರ್‌ಗಳು ರನ್ ನೀಡಿ ಕೈ ಸುಟ್ಟುಕೊಂಡರು. ಆರ್‌ಸಿಬಿ ಪರ ಸಯಾಲಿ ಸಾತ್ಗರೆ, ಅರುಂಧತಿ ರೆಡ್ಡಿ, ನಾಡಿನ್ ಡಿ ಕ್ಲಾರ್ಕ್ ತಲಾ ಒಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications