Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL Mega Auction 2025: ಇಂದು WPL ಮೆಗಾ ಹರಾಜು; ನೆರಪ್ರಾಸರ, ಸಮಯದ ಬಗ್ಗೆ ಮಾಹಿತಿ

ಮಹಿಳಾ ಪ್ರೀಮಿಯರ್‌ ಲೀಗ್‌ ಆಟಗಾರ್ತಿಯರ ಹರಾಜು ನವೆಂಬರ್‌ 27 ರಂದು ನವದೆಹಲಿಯಲ್ಲಿ ನಡೆಯಲಿದೆ. ಈಗಾಗಲೇ ಫ್ರಾಂಚೈಸಿಗಳು ಹರಾಜಿನ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಇನ್ನು ಈ ಬಾರಿ ಹರಾಜಿನ ಅಂಗಳಕ್ಕೆ 277 ಆಟಗಾರ್ತಿಯರು ಪ್ರವೇಶಿಸಲಿದ್ದಾರೆ. 5 ತಂಡಗಳು ಗರಿಷ್ಠ 18 ಆಟಗಾರ್ತಿಯರನ್ನು ಆಯ್ಕೆ ಮಾಡಬಹುದಾಗಿದೆ. ಇನ್ನು 73 ಸ್ಥಾನಗಳಿಗೆ ಹರಾಜು ನಡೆಯಲಿದ್ದು, 23 ವಿದೇಶಿ ಆಟಗಾರ್ತಿಯರು ತಂಡಗಳನ್ನು ಸೇರಲಿದ್ದಾರೆ.

ಇದೇ ಮೊದಲ ಬಾರಿಗೆ ರೈಟ್‌ ಟು ಮ್ಯಾಚ್ ಕಾರ್ಡ್‌ (RTM) ಐದು ಬಳಿಸಲಾಗುತ್ತದೆ. ತಂಡಗಳು ಉಳಿಸಿಕೊಂಡ ಆಟಗಾರರ ಆಧಾರದ ಮೇಲೆ ಆರ್‌ಟಿಎಂ ಕಾರ್ಡ್‌ ನಿರ್ಧರಿಸಲಾಗುತ್ತದೆ. ಕಳೆದ ಆವೃತ್ತಿಯಲ್ಲಿ ತಮ್ಮದೇ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ಆಟಗಾರ್ತಿ, ಮರಳಿ ತಮ್ಮದೇ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿ ಬಯಸಿದಲ್ಲಿ ಈ ಕಾರ್ಡ್‌ ಬಳಸಬಹುದಾಗಿದೆ. ಯುಪಿ ವಾರಿಯರ್ಜ್‌, ಗುಜರಾತ್ ಜೈಂಟ್ಸ್‌ ಹೆಚ್ಚುಹಣ, ಆರ್‌ಟಿಎಂ ಕಾರ್ಡ್‌ಗಳೊಂದಿಗೆ ಅಂಗಳ ಪ್ರವೇಶಿಸಲಿವೆ. ಈ ತಂಡಗಳಿಗೆ ಇದು ಹೆಚ್ಚಿನ ಲಾಭ ನೀಡುವ ಸಾಧ್ಯತೆ ಇದೆ.

WPL Mega Auction 2025 Date Time RTM Rules and Star Players to Watch

ಯುಪಿ ವಾರಿಯರ್ಜ್‌ ಕೇವಲ ಒಬ್ಬ ಅನ್ ಕ್ಯಾಪ್ಡ್‌ ಆಟಗಾರ್ತಿ ಶ್ವೇತಾ ಶೆರಾವತ್ ಅವರನ್ನು ರಿಟೇನ್ ಮಾಡಿಕೊಂಡಿದೆ. ಈ ಬಾರಿ ಹರಾಜಿನಲ್ಲಿ ಯುಪಿ ದೊಡ್ಡ ಮೊತ್ತ ಹಾಗೂ ಅತಿ ಹೆಚ್ಚು ಆರ್‌ಟಿಎಂ ಬಳಸುವ ಅವಕಾಶದೊಂದಿಗೆ ಮೆಗಾ ಹರಾಜು ಪ್ರವೇಶಿಸಲಿದೆ. ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಲಾ ಐವರು ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಹರಾಜಿನಲ್ಲಿ ಈ ತಂಡಗಳು ಆರ್‌ಟಿಎಂ ಬಳಸುವ ಅವಕಾಶ ಇರುವುದಿಲ್ಲ.

5 ತಂಡಗಳ ಫ್ರಾಂಚೈಸಿಗಳ ಬಳಿ ಇರುವ ಹಣವನ್ನು ಕೂಡಿಸಿದಾಗ 41.1 ಕೋಟಿ ರೂ. ಆಗುತ್ತದೆ. ಹರಾಜಿನಲ್ಲಿ ಮಾಲೀಕರು ಪ್ರತಿಭಾನ್ವಿತ ಆಟಗಾರರ ಮೇಲೆ ಹಣವನ್ನು ಹೂಡಲಿದ್ದಾರೆ. ಕಳೆದ ಮೂರು ಆವೃತ್ತಿಗಳಲ್ಲಿ ಆಟಗಾರ್ತಿಯರು ಪಡೆದುಕೊಂಡಿರುವ ಬೆಲೆ ಎಲ್ಲರಿಗೂ ಅಚ್ಚರಿ ತರಿಸಿದೆ. ಈ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ಅವರು ಅತಿ ದುಬಾರಿ ಆಟಗಾರ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಇವರು 2023ರಲ್ಲಿ ನಡೆದಿದ್ದ ಹರಾಜಿನಲ್ಲಿ 3.4 ಕೋಟಿಗೆ ಆರ್‌ಸಿಬಿ ತಂಡದ ಪಾಲಾಗಿದ್ದರು.

ಡಬ್ಲ್ಯೂಪಿಎಲ್‌ ಹರಾಜು ನಡೆಯುವುದು ಯಾವಗ?

ಮಹಿಳಾ ಪ್ರೀಮಿಯರ್‌ ಲೀಗ್ ಮೆಗಾ ಹರಾಜು ಗುರುವಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ಹರಾಜನ್ನು ಆನ್‌ಲೈನ್‌ ಹಾಗೂ ಟಿವಿಯಲ್ಲಿ ನೋಡುವುದು ಹೇಗೆ?

ಡಬ್ಲ್ಯೂಪಿಎಲ್‌ ಹರಾಜನ್ನು ಟಿವಿಯಲ್ಲಿ ಸ್ಟಾರ್ ಸ್ಫೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲೂ ನೋಡಬಹುದಾಗಿದೆ.

Story first published: Thursday, November 27, 2025, 7:00 [IST]
Other articles published on Nov 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+