ಮಹಿಳಾ ಪ್ರೀಮಿಯರ್ ಲೀಗ್ ಹರಾಜಿಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 27 ರಂದು ಡಬ್ಲ್ಯೂಪಿಎಲ್ ಹರಾಜು ನವದೆಹಲಿಯಲ್ಲಿ ನಡೆಯಲಿದೆ. ಈ ಹರಾಜಿಗಾಗಿ ಎಲ್ಲ ತಂಡಗಳು ಈಗಾಗಲೇ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಈ ಬಾರಿ ಡಬ್ಲ್ಯೂಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೆ 5 ತಂಡಗಳ ಕೈ ಬಿಟ್ಟ ಆಟಗಾರ್ತಿಯರು ಈಗ ಹರಾಜಿನ ಅಂಗಳವನ್ನು ಪ್ರವೇಶಿಸಲಿದ್ದಾರೆ. ಈ ಬಾರಿಯ ದುಬಾರಿ ಆಟಗಾರ್ತಿ ಯಾರು ಆಗಲಿದ್ದಾರೆ ಎಂಬ ಬಗ್ಗೆ ಲೆಕ್ಕಾಚಾರ ಆರಂಭವಾಗಿವೆ.
ಡಬ್ಲ್ಯೂಪಿಎಲ್ ಇತಿಹಾಸದ ಪುಟವನ್ನು ಒಮ್ಮೆ ತಿರುವಿ ನೋಡಿದಾಗ, ಈ ವೇಳೆ ದುಬಾರಿ ಆಟಗಾರ್ತಿಯ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ (Smriti Mandhana) ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ. 2023ರಲ್ಲಿ ನಡೆದ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ತಂಡಗಳು ಸ್ಮೃತಿ ಅವರನ್ನು ಕೊಂಡುಕೊಳ್ಳಲು ಹಣದ ಹೊಳೆಯನ್ನು ಹರಿಸಿದವು. ಆದರೆ ಕೊನೆಯಲ್ಲಿ ಆರ್‌ಸಿಬಿ 3.40 ಕೋಟಿ ರೂ. ನೀಡಿ ತನ್ನ ತಂಡಕ್ಕೆ ಬರಮಾಡಿಕೊಂಡಿತು. ಈ ವರೆಗಿನ ಹರಾಜಿನಲ್ಲಿ ಸ್ಮೃತಿ ಅತ್ಯಧಿಕ ಮೊತ್ತಕ್ಕೆ ಬಿಕರಿಯಾದ ಆಟಗಾರ್ತಿ ಎಂಬ ಹಿರಿಮೆ ಹೊಂದಿದ್ದಾರೆ.

2023ರ ಹರಾಜಿನಲ್ಲೆ ಗುಜರಾತ್ ಜೈಂಟ್ಸ್ ಆಸ್ಟ್ರೇಲಿಯಾದ ಆಶ್ಲೀ ಗಾರ್ಡ್ನರ್ (Ashleigh Gardner) ಅವರನ್ನು ಭಾರೀ ಮೊತ್ತಕ್ಕೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಇವರಿಗೆ ಗುಜರಾತ್ 3.20 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತ್ತು. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಮಿಂಚಬಲ್ಲ ಕ್ಷಮತೆ ಹೊಂದಿದ್ದರಿಂದ ಇವರಿಗೆ ಹಣದ ಹೊಳೆಯನ್ನು ಹರಿಸಲಾಗಿತ್ತು. ಇನ್ನು ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ್ತಿಯಾದ ನ್ಯಾಟ್ ಸ್ಕಿವರ್ ಬ್ರಂಟ್ (Nat Sciver-Brunt) ಅವರನ್ನು ಮುಂಬೈ ಇಂಡಿಯನ್ಸ್ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಇವರಿಗೆ ಮುಂಬೈ 3.20 ಕೋಟಿ ನೀಡಿತ್ತು. ಇವರು ಹರಾಜಿನಲ್ಲಿ ಬಿಕರಿಯಾದ ಮೂರನೇ ದುಬಾರಿ ಆಟಗಾರ್ತಿಯಾಗಿದ್ದಾರೆ.
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಆಟಗಾರ್ತಿ ದೀಪ್ತಿ ಶರ್ಮಾ (Deepti Sharma) ಅವರಿಗೆ 2023ರಲ್ಲಿ 2.60 ಕೋಟಿ ರೂ. ನೀಡಿತ್ತು. ಇವರನ್ನು ಯುಪಿ ತಂಡ ಈ ಬಾರಿ ಹರಾಜಿನ ಅಂಗಳಕ್ಕೆ ಬಿಟ್ಟಿದೆ. ಇವರನ್ನು ಕೊಳ್ಳಲು ಹಲವು ಫ್ರಾಂಚೈಸಿಗಳು ಹಣ ಹೂಡಲಿದ್ದಾರೆ. ಈ ಬಾರಿ ದೀಪ್ತಿ ಅವರು ಹೆಚ್ಚಿನ ಮೊತ್ತವನ್ನು ಜೇಬಿಗೆ ಇಳಿಸಿಕೊಳ್ಳುವ ಸಾಧ್ಯತೆ ಇದೆ. ಅತಿ ಹೆಚ್ಚು ಬಿಕರಿಯಾದ ಆಟಗಾರ್ತಿಯರ ಪಟ್ಟಿಯಲ್ಲಿ ಭಾರತದ ಯುವ ಬ್ಯಾಟರ್ ಜೇಮಿಮಾ ರೋಡ್ರಿಗಸ್ ಅವರಿಗೆ ಐದನೇ ಸ್ಥಾನ. ಇವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 2023ರ ಹರಾಜಿನಲ್ಲಿ 3.20 ಕೋಟಿಗೆ ಖರೀದಿಸಿತ್ತು.
ಈ ಬಾರಿಯ ಮೆಗಾ ಹರಾಜು ನಡೆಯಲಿದ್ದು, ಈ ಪ್ಲೇಯರ್ ದಾಖಲೆಯನ್ನು ಯಾರು ಮುರಿಯಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಈ ಲೀಸ್ಟ್‌ನಲ್ಲಿ ಭಾರತದ ಆಟಗಾರರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.